ಕಾಟೇರ ಚಿತ್ರದ ʻಯಾವ ಜನ್ಮದ ಗೆಳತಿʼ ಸಾಂಗ್‌ ಔಟ್!

Kaateera: ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟಿಸಿರುವ ಕಾಟೇರ ಚಿತ್ರದ ʻಯಾವ ಜನ್ಮದ ಗೆಳತಿʼ  ಲಿರಿಕಲ್‌ ಸಾಂಗ್ ಬಿಡುಗಡೆ ಮಾಡಲಾಗಿದೆ.

Written by - Zee Kannada News Desk | Last Updated : Dec 11, 2023, 01:46 PM IST
  • ಕಾಟೇರ ಚಿತ್ರದ ʻಯಾವ ಜನ್ಮದ ಗೆಳತಿʼ ಸಾಂಗ್‌ ರಿಲೀಸ್‌ ಆಗಿದೆ
  • ʻಯಾವ ಜನ್ಮದ ಗೆಳತಿ‌ʼ ಲಿರಿಕಲ್‌ ಸಾಂಗ್ ಗಾಯಕ ಹೇಮಂತ್‌ ಕುಮಾರ್‌ ಹಾಗೂ ಗಾಯಕಿ ರಕ್ಷಿತ ಸುರೇಶ್‌ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ.
  • ಈಗಾಗಲೇ ಪಸಂದಾಗವನೆ ಖಡಕ್ ಸಾಂಗ್‌ಗೆ ಖಡಕ್ ಧ್ವನಿಯ ಗಾಯಕಿ ಮಂಗ್ಲಿ ಹಾಡಿಗೆ ಜೀವ ತುಂಬಿದ್ದು, ಹಾಡಿಗೆ ಲಕ್ಷ ಲೈಕ್ಸ್ ಕೂಡ ಬಂದಿದೆ.
ಕಾಟೇರ ಚಿತ್ರದ ʻಯಾವ ಜನ್ಮದ ಗೆಳತಿʼ ಸಾಂಗ್‌ ಔಟ್! title=

Kaateera Movie Second Song: ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಆರಾಧನ ರಾಮ್‌ ಅಭಿನಯದ ಕಾಟೇರ ಚಿತ್ರದ     ʻಯಾವ ಜನ್ಮದ ಗೆಳತಿʼ ಸಾಂಗ್‌ ರಿಲೀಸ್‌ ಆಗಿದೆ. ನಿನ್ನೆ ಅಷ್ಟೇ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ʻಯಾವ ಜನ್ಮದ ಗೆಳತಿ‌ʼ ಸಾಂಗ್ ಪ್ರೋಮೋ ರಿಲೀಸ್‌ ಮಾಡಿ ಡಿಬಾಸ್‌ ಅಭಿಮಾನಿಗಳಲ್ಲಿ ಒಂದು ನಿರೀಕ್ಷೆ ಮೂಡಿಸಿತ್ತು. ಈ ಹಾಡಿನ‌ ಬಿಡುಗಡೆಯ ಪೋಸ್ಟರ್ ಸಹ ನಟ ದರ್ಶನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದರು.

ಇದೀಗ ಕಾಟೇರ ಸಿನಿಮಾದ ಎರಡನೇ ಹಾಡಾದ ʻಯಾವ ಜನ್ಮದ ಗೆಳತಿ‌ʼ ಲಿರಿಕಲ್‌ ಸಾಂಗ್ ಬಿಡುಗಡೆಯಾಗಿದೆ. ಈ ಹಾಡನ್ನು ಸಂಗೀತ ಸಂಯೋಜಕ ವಿ. ಹರಿಕೃಷ್ಟ ನಿರ್ದೇಶನ ಮಾಡಿದ್ದು, ಗಾಯಕ ಹೇಮಂತ್‌ ಕುಮಾರ್‌ ಹಾಗೂ ಗಾಯಕಿ ರಕ್ಷಿತ ಸುರೇಶ್‌ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಈ ಸೋಗಸಾದ ಹಾಡಿಗೆ ಡಾ.ವಿ.ನಾಗೇಂದ್ರ ಪ್ರಸಾದ  ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವು ನಿಮಿಷಗಳಲ್ಲೇ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಮಿಲಿಯನ್ಸ್‌ ಗಟ್ಟಲೇ ವೀವ್ಸ್‌ ಪಡೆ ʻಪಸಂದಾಗವನೆʼ ಹಾಡು:‌ ಫಸ್ಟ್‌ ಸಾಂಗ್‌ನಲ್ಲೇ ಭರವಸೆ ಮೂಡಿಸಿದ ನಟಿ ಆರಾಧನ!

ಕಾಟೇರ ಚಿತ್ರದ ಎರಡನೇ ಹಾಡಾದ ʻಯಾವ ಜನ್ಮದ ಗೆಳತಿ‌ʼ ಲಿರಿಕಲ್‌ ಸಾಂಗ್ ಇಂದು ಮಧ್ಯಾಹ್ನ 12.30ಕ್ಕೆ ರಿಲೀಸ್‌ ಆಗಿದ್ದು, ಇದೇ ರೀತಿ ಕಳೆದವಾರ ಇದೇ ಸಿನಿಮಾದ ಮೊದಲ ಹಾಡು ಪಸಂದಾಗವನೆ  ಸಹ ಇದೇ ಸಮಯಕ್ಕೆ ರಿಲೀಸ್‌ ಮಾಡಲಾಗಿತ್ತು. ಈಗಾಗಲೇ ಪಸಂದಾಗವನೆ ಖಡಕ್ ಸಾಂಗ್‌ಗೆ  ಖಡಕ್ ಧ್ವನಿಯ ಗಾಯಕಿ ಮಂಗ್ಲಿ ಹಾಡಿಗೆ ಜೀವ ತುಂಬಿದ್ದು, ಹಾಡಿಗೆ ಲಕ್ಷ ಲೈಕ್ಸ್ ಕೂಡ ಬಂದಿದೆ. ಕೇಳುಗರಿಗೆ ಖುಷಿ ಕೊಡುವಂತೇನೆ ಈ ಹಾಡು ಇದ್ದು, ವಿಶೇಷವಾಗಿ ನಾಯಕಿ ಇಲ್ಲಿ ನಾಯಕನನ್ನ ಹೊಗಳುವ ಕೆಲಸ ಮಾಡ್ತಾರೆ. 

ಆದರೆ ಕಾಟೇರ ಚಿತ್ರದ ಎರಡನೆಯ ಹಾಡು ʻಯಾವ ಜನ್ಮದ ಗೆಳತಿ‌ʼ ಇದು ಡುಯಿಟ್‌ ಸಾಂಗ್‌ ಆಗಿದ್ದು, ಈ ಹಾಡಿಗೂ ಸಹ ಪಸಂದಾಗವೇ ಹಾಡಿನಂತೆ ಸಾಕಷ್ಟು ಮೆಚ್ಚುಗೆ ಸಿಗಬಹುದು. ಈ ಚಿತ್ರವನ್ನು ಡೈರೆಕ್ಟರ್‌ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಿದ್ದು, ರಾಕ್‌ಲೈನ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಇನ್ನೇನು ಕಾಟೇರ ಸಿನಿಮಾ ಇದೇ ತಿಂಗಳು 29ಕ್ಕೆ ರಾಜ್ಯಾದ ಹಲವಾರು ಕಡೆ ಬಿಡುಗಡೆಯಾಗುತ್ತಿದ್ದು, ಡಿ-ಬಾಸ್‌ ಅಭಿಮಾನಿಗಳೇ ಚಿತ್ರವನ್ನು ಕಣ್ಣು ತುಂಬಿಕೊಳ್ಳಲು ಕಾಯ್ತಾಯಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News