Salaar HD Available For Free: ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಹಲವು ನಿರೀಕ್ಷೆಗಳ ನಡುವೆ ಬಿಡುಗಡೆಯಾಗಿದೆ. ಈ ಸಿನಿಮಾ ಮೊದಲ ಶೋನಿಂದಲೇ ಸೂಪರ್ ಹಿಟ್ ಟಾಕ್ ಪಡೆಯುತ್ತಿದೆ. ತಮ್ಮ ನೆಚ್ಚಿನ ನಾಯಕನಿಗೆ ಬಹಳ ವರ್ಷಗಳ ನಂತರ ಸೂಪರ್ ಹಿಟ್ ಸಿನಿಮಾ ಸಿಕ್ಕಿದೆ ಎಂದು ಅಭಿಮಾಣಿಗಳು ಸಂಭ್ರಮಿಸುತ್ತಿರುವಾಗಲೇ ಚಿತ್ರತಂಡಕ್ಕೆ ಬಿಗ್ ಶಾಕ್ ಸಿಕ್ಕಿದೆ. 


COMMERCIAL BREAK
SCROLL TO CONTINUE READING

ಸಲಾರ್ ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾದ ಹೆಚ್ ಡಿ ಪ್ರಿಂಟ್ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ಈ ಸಿನಿಮಾ ಸುಮಾರು 2 ಗಂಟೆ 45 ನಿಮಿಷಗಳ ರನ್‌ಟೈಮ್‌ನೊಂದಿಗೆ ಬರುತ್ತಿದೆ. ಟೆಲಿಗ್ರಾಂ, ಐ ಬೊಮ್ಮ ಇತ್ಯಾದಿ ಸೈಟ್‌ಗಳಲ್ಲಿ ಇಡೀ ಚಿತ್ರವನ್ನು ಪೋಸ್ಟ್ ಮಾಡಲಾಗಿದ್ದು, ಸಿನಿಪ್ರೇಮಿಗಳು ಶಾಕ್‌ ಆಗಿದ್ದಾರೆ. 


ಇದನ್ನೂ ಓದಿ: Salaar vs Dunki: 'ಡಂಕಿ'ಗೆ 'ಸಲಾರ್' ಸವಾಲ್..‌ ಬಾಕ್ಸಾಫೀಸ್‌ನಲ್ಲಿ ಮುನ್ನಡೆ ಯಾರಿಗೆ ಗೊತ್ತೇ! 


ಈ ಚಿತ್ರ ವಿಶ್ವಾದ್ಯಂತ ಸುಮಾರು 345 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ಹಲವು ಆನ್ ಲೈನ್ ಜಾಲತಾಣಗಳಲ್ಲಿ ಈ ಚಿತ್ರದ ಪೈರಸಿ ಪ್ರಿಂಟ್ ಅಪ್ ಲೋಡ್ ಆಗುತ್ತಿದ್ದು, ಪ್ರಭಾಸ್ ಅಭಿಮಾನಿಗಳನ್ನು ಕಂಗಾಲಾಗಿಸಿದೆ. 


ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಕೆಜಿಎಫ್ ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಂಸ್ಬಂಡವಾಳ ಹಾಕಿದೆ. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್ ಈ ಚಿತ್ರದ ಅಧಿಕೃತ ಡಿಜಿಟಲ್ ಹಕ್ಕುಗಳನ್ನು ಪಡೆದಿದ್ದು, ಸ್ಟಾರ್ ಮಾ ದೊಡ್ಡ ಮೊತ್ತವನ್ನು ಪಾವತಿಸಿ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆಯಂತೆ.


ಇದನ್ನೂ ಓದಿ: Aaradhya Bachchan: 12 ವರ್ಷದ ಆರಾಧ್ಯ ಬಚ್ಚನ್‌ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತೇ.! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.