Salaar vs Dunki: 'ಡಂಕಿ'ಗೆ 'ಸಲಾರ್' ಸವಾಲ್..‌ ಬಾಕ್ಸಾಫೀಸ್‌ನಲ್ಲಿ ಮುನ್ನಡೆ ಯಾರಿಗೆ ಗೊತ್ತೇ!

Salaar vs Dunki : ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಲಾರ್ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. 400 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ತೆರೆಕಾಣುವ ಮೊದಲೇ ಹಲವು ದೊಡ್ಡ ದಾಖಲೆಗಳನ್ನು ಮುರಿದಿದೆ. ಮುಂಗಡ ಬುಕಿಂಗ್‌ನಲ್ಲಿ ಸಲಾರ್ ಡಂಕಿಯನ್ನು ಹಿಂದಿಕ್ಕಿದೆ. 

Written by - Chetana Devarmani | Last Updated : Dec 22, 2023, 08:45 AM IST
  • ಡಂಕಿ vs ಸಲಾರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
  • ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಲಾರ್
  • ಮುಂಗಡ ಬುಕಿಂಗ್‌ನಲ್ಲಿ ಡಂಕಿಯನ್ನು ಹಿಂದಿಕ್ಕಿದ ಸಲಾರ್
Salaar vs Dunki: 'ಡಂಕಿ'ಗೆ 'ಸಲಾರ್' ಸವಾಲ್..‌ ಬಾಕ್ಸಾಫೀಸ್‌ನಲ್ಲಿ ಮುನ್ನಡೆ ಯಾರಿಗೆ ಗೊತ್ತೇ!   title=
ಡಂಕಿ vs ಸಲಾರ್‌

Salaar vs Dunki : ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಈ ಬಹು ನಿರೀಕ್ಷಿತ ಚಿತ್ರಕ್ಕಾಗಿ ಜನ ಕಾತರದಿಂದ ಕಾಯುತ್ತಿದ್ದರು. ಜನರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುವ ಮೂಲಕ ಪ್ರಭಾಸ್ ಅವರ ಚಿತ್ರವನ್ನು ಸ್ವಾಗತಿಸುತ್ತಿದ್ದಾರೆ. ಈ ಸಂಭ್ರಮ ಕಂಡರೆ ಸಲಾರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿದೆ ಎಂದು ಊಹಿಸಬಹುದು. 

ಪ್ರಭಾಸ್ ಅಭಿನಯದ ಸಲಾರ್ ಚಿತ್ರವನ್ನು ಅಭಿಮಾನಿಗಳು ಪಟಾಕಿ ಸಿಡಿಸಿ, ಡೋಲು ಬಾರಿಸಿ ಸ್ವಾಗತಿಸಿದ್ದಾರೆ. ಚಿತ್ರ ಬಿಡುಗಡೆಗೂ ಮುನ್ನವೇ ಪ್ರಭಾಸ್ ಅವರ ಅಭಿಮಾನಿಗಳಲ್ಲಿ ಅದ್ಭುತ ಕ್ರೇಜ್ ಕಂಡು ಬಂದಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಅವರ ಅಭಿಮಾನಿಗಳು ಚಿತ್ರ  ರಿಲೀಸ್‌ ಆಗ್ತಿದ್ದಂತೆ ರೇಟಿಂಗ್ ಪ್ರಾರಂಭಿಸಿದ್ದಾರೆ. ಅಲ್ಲದೆ, ಸಲಾರ್ ಅನ್ನು ಪ್ರಭಾಸ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ಬಣ್ಣಿಸಲಾಗುತ್ತಿದೆ.

ಇದನ್ನೂ ಓದಿ: Dunki Twitter Review: ಶಾರುಖ್ ಖಾನ್ 'ಡಂಕಿ' ಚಿತ್ರ ಹೇಗಿದೆ.. ಕಿಂಗ್‌ ಖಾನ್‌ ಫ್ಯಾನ್ಸ್‌ ಬೇಸರಕ್ಕೆ ಕಾರಣವೇನು?

ಸಲಾರ್ ಬಿಡುಗಡೆಗೂ ಮುನ್ನವೇ 48.94 ಕೋಟಿ ಕಲೆಕ್ಷನ್ ಮಾಡಿದೆ. ಈ ಮುಂಗಡ ಬುಕ್ಕಿಂಗ್ ಅಂಕಿಅಂಶಗಳು ಚಿತ್ರವು ಬ್ಲಾಕ್ಬಸ್ಟರ್ ಆಗಲಿದೆ ಎಂದು ಸೂಚಿಸುತ್ತದೆ. ಸಲಾರ್‌ ಸವಾಲೆಸೆದ ಶಾರುಖ್ ಅವರ ಡಂಕಿ ಸಿನಿಮಾ ಮುಂಗಡ ಬುಕ್ಕಿಂಗ್‌ನಲ್ಲಿ ಹಿಂದೆಬಿದ್ದಿದೆ. ಡಂಕಿ ಪ್ರಿ ಬುಕ್ಕಿಂಗ್‌ನಲ್ಲಿ ಕೇವಲ 30 ಕೋಟಿ ರೂಪಾಯಿ ಮಾತ್ರ ಸಂಗ್ರಹಿಸಿತ್ತು. 400 ಕೋಟಿ ಬಜೆಟ್‌ನಲ್ಲಿ ತಯಾರಾದ ಸಲಾರ್‌ ಚಿತ್ರ ಈಗಾಗಲೇ ಜನರ ಮೇಲೆ ತನ್ನ ಜಾದೂ ಮಾಡಿದೆ ಎನ್ನಲಾಗಿದೆ.  

ಮುಂಗಡ ಟಿಕೆಟ್‌ ಬುಕಿಂಗ್‌ ಜೊತೆಗೆ ಜನರ ಅಭಿಪ್ರಾಯ ನೋಡಿದರೆ ಸಲಾರ್‌ ಎದುರು ಡಂಕಿ ಮುಗ್ಗರಿಸಲಿದೆ ಎನ್ನಲಾಗಿದೆ. ಸಲಾರ್‌ ಸಿನಿಮಾ ಡಂಕಿಗಿಂತ ಹೆಚ್ಚು ಕಲೆಕ್ಷನ್‌ ಮಾಡುವ ನಿರೀಕ್ಷೆಯಿದೆ. 

ಪ್ರಭಾಸ್ ಅಭಿನಯದ ಕೊನೆಯ ಚಿತ್ರ ಆದಿಪುರುಷ. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ಕೆಲಸ ಮಾಡಲಿಲ್ಲ. ಚಿತ್ರವು ಬ್ಲಾಕ್‌ಬಸ್ಟರ್ ಆಗಲಿಲ್ಲ. ರಾಮಾಯಣವನ್ನು ಆಧರಿಸಿದ ಚಿತ್ರವು ಸಾಕಷ್ಟು ವಿವಾದಗಳನ್ನು ಎದುರಿಸಬೇಕಾಯಿತು. ಭಾರತದಲ್ಲಿ ಈ ಚಿತ್ರ 305 ಕೋಟಿ ಗಳಿಸಲು ಸಾಧ್ಯವಾಯಿತು. ವಿಶ್ವಾದ್ಯಂತ 353 ಕೋಟಿ ರೂಪಾಯಿ ಕಲೆ ಹಾಕಿತು. 

ಇದನ್ನೂ ಓದಿ: Salaar Review: ಬಹುನಿರೀಕ್ಷಿತ ಸಲಾರ್‌ ರಿಲೀಸ್‌.. ಗೂಸ್‌ ಬಂಪ್ಸ್‌ ಗ್ಯಾರೆಂಟಿ, ಕಂಪ್ಲೀಟ್ ಸಿನಿಮಾದ ವಿಮರ್ಶೆ ಇಲ್ಲಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News