Salaar 2 Shooting: ಟಾಲಿವುಡ್‌ ಇಂಟಸ್ಟ್ರೀಯಿಂದ ಇಂದು ಪ್ಯಾನ್‌ ಇಂಡಿಯಾ ಸ್ಟಾರ್‌ ಎಂದೇ ಪ್ರಖ್ಯಾತಿ ಪಡೆದಿರುವ ನಟ ಪ್ರಭಾಸ್‌ ಏಳು ವರ್ಷಗಳಿಂದ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದರು. ಇದೀಗ ಈ ನಟ ಸ್ಯಾಂಡಲ್‌ವುಡ್‌ನ ಕ್ರಿಯೇಟಿವ್‌ ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ನಿರ್ದೇಶನದ ʻಸಲಾರ್‌ʼ ಸಿನಿಮಾದ ಮೂಲಕ ಸಕ್ಸಸ್‌ ನೋಡಿದ್ದಾರೆ. ಈ ಚಿತ್ರ ಪ್ರೇಕ್ಷಕರ ಮನಗೆದ್ದಿದ್ದು ಫ್ಯಾನ್ಸ್‌ ಸದ್ಯ ಸಲಾರ್‌ ಎರಡನೇ ಭಾಗಕ್ಕಾಗಿನ ಕಾಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯಕ್ಕೆ ಎಲ್ಲರಲ್ಲೂ 'ಸಲಾರ್ 2' ಸಿನಿಮಾದ ಶೂಟಿಂಗ್‌ ಅನ್ನು ಯಾವಾಗ ಶುರು ಮಾಡುತ್ತಾರೆ ಅನ್ನೋ ಕುತೂಹಲವಿದ್ದು, ಅದರಲ್ಲೂ ಪ್ರಭಾಸ್‌ ಫ್ಯಾನ್ಸ್‌ ಈ ವಿಷಯದ ಬಗ್ಗೆ ತಿಳಿದು ಕೊಳ್ಳುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಪ್ರಭಾಸ್ ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಈಗಾಗಲೇ ಪ್ರಶಾಂತ್ ನೀಲ್ 'ಸಲಾರ್ 2' ಚಿತ್ರವನ್ನು ಶೀಘ್ರದಲ್ಲಿಯೇ ಆರಂಭ ಮಾಡಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದ್ದು, ಸದ್ಯ ಸಿನಿಮಾದಲ್ಲಿ ನಟಿಸಿರೋ ನಟನೊಬ್ಬರ ಇದರ ಮಾಹಿತಿಯನ್ನು  ಹೊರ ಹಾಕಿದ್ದಾರೆ.


ಇದನ್ನೂ ಓದಿ: Vijaylakshmi: ಸಾವೊಂದೆ ನನ್ನ ಕೊನೆಯ ಆಯ್ಕೆ.. ನಾನು ಸತ್ತರೆ ಆತನೇ ಕಾರಣ ಎಂದು ವಿಡಿಯೋ ಹರಿಬಿಟ್ಟ ಹಿರಿಯ ನಟಿ!


ಹೌದು.. 'ಸಲಾರ್' ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಹೈಲೈಟ್ ಆಗಿದ್ದ ಮತ್ತೊಬ್ಬ ನಟರಾದ ಬಾಬಿ ಸಿಂಹ, 'ಸಲಾರ್ 2' ಶೂಟಿಂಗ್ ಇದೇ ಏಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಈಗಾಗಲೇ ಜೂ.ಎನ್‌ಟಿಆರ್ ಸೇರಿದಂತೆ ಕೆಲವು ಪ್ರಾಜೆಕ್ಟ್‌ಗಳನ್ನು ಆದಷ್ಟು ಬೇಗ  ಮುಗಿಸಬೇಕಿರುವುದರಿಂದ 'ಸಲಾರ್ 2' ಸಿನಿಮಾವನ್ನು ಪ್ರಾರಂಭ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.


ಇನ್ನೊಂದೆಡೆ ನಟ ಪ್ರಭಾಸ್‌ ಕೂಡ ನಾಗ ಅಶ್ವಿನ್ ಆಕ್ಷನ್‌ ಕಟ್‌ ಹೇಳಿರುವ 'ಕಲ್ಕಿ 2898 ಎಡಿ' ಚಿತ್ರ ಇದೇ ವರ್ಷ ಬಿಡುಗಡೆಯಾಗಲಿರುವ ಕಾರಣ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಸದ್ಯ ಈ ಸಿನಿಮಾದಲ್ಲಿ ನಟ ಪ್ರಭಾಸ್‌ ಸೂಪರ್ ಹೀರೊ ಲುಕ್‌ನಲ್ಲಿ ಕಾಣಿಸಿಕೊಂಡಿರುವುದರಿಂದ ಈ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ