Salaar Music Review: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಹಾಗೂ ಸ್ಯಾಂಡಲ್‌ವುಡ್‌​ ಡೈರೆಕ್ಟರ್ ಪ್ರಶಾಂತ್ ನೀಲ್‌ ಬಿಗ್ ಬಜೆಟ್​ ​ಸಲಾರ್ ಸಿನಿಮಾ ಇಂದು ತೆರೆಕಂಡಿದ್ದು,ಈ ಚಿತ್ರವನ್ನು ಕೆಜಿಎಫ್ ಸಿನಿಮಾ ಎಂಬಂತೆ ಕಂಡ ಪ್ರಶಾಂತ್ ನೀಲ್​ ಫ್ಯಾನ್ಸ್‌ ಬೆಳ್ಳಿ ತೆರೆ ಮೇಲೆ ವೈಲೆನ್ಸ್​ ಸಿಟಿಯನ್ನು ಕಣ್ತುಂಬಿಕೊಂಡಿದ್ದಾರೆ. ಸಲಾರ್‌ನಲ್ಲಿ ಸ್ನೇಹ, ಪ್ರೀತಿ, ತ್ಯಾಗ, ವೈರತ್ವ  ಸಿಲ್ವರ್‌ ಸ್ರ್ರೀನ್‌ ಮೇಲೆ ತೆರೆಗಪ್ಪಳಿಸುವುದರ ಜೊತೆಗೆ ಕಥೆಯೊಂದಿಗಿರುವ ಮ್ಯೂಸಿಕ್ ಕೂಡ ಪ್ರೇಕ್ಷಕರ ಮನವನ್ನು ತಟ್ಟಿದೆ. 


COMMERCIAL BREAK
SCROLL TO CONTINUE READING

ಹೌದು.. ಸಲಾರ್ ಸಿನಿಮಾಗೆ ಕೆಜಿಎಫ್​ ಮ್ಯೂಸಿಕ್​ ಡೈರೆಕ್ಟರ್ ರವಿ ಬಸ್ರೂರ್​ ಸಂಗೀತಾ ನೀಡಿದ್ದು, ಈ ಚಿತ್ರದಲ್ಲಿನ ಎರಡು ಹಾಡುಗಳನ್ನು ಸಿನಿತಂಡ ಈಗಾಗಲೇ ರಿಲೀಸ್ ಮಾಡಿದೆ. ಸಲಾರ್‌ ಹಾಡುಗಳನ್ನು ಕೇಳಿದ ಜನರು ಮೆಚ್ಚಿಕೊಂಡು, ಇದೀಗ ಥಿಯೇಟರ್​ನಲ್ಲಿ ಸಲಾರ್ ಸಿನಿಮಾ ಬಿಜಿಎಂ ನೋಡಗರನ್ನು ಬೆಚ್ಚಿಬೀಳಿಸುತ್ತಿದೆ. ಬಿಜಿಎಂ ಸೂಪರ್ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದು, ರವಿ ಬಸ್ರೂರ್​ ಕೆಲಸವನ್ನು ಕೊಂಡಾಡಿದ್ದಾರೆ.


ಇದನ್ನೂ ಓದಿ: Salaar Review: ಬಹುನಿರೀಕ್ಷಿತ ಸಲಾರ್‌ ರಿಲೀಸ್‌.. ಗೂಸ್‌ ಬಂಪ್ಸ್‌ ಗ್ಯಾರೆಂಟಿ, ಕಂಪ್ಲೀಟ್ ಸಿನಿಮಾದ ವಿಮರ್ಶೆ ಇಲ್ಲಿದೆ..


ಸಲಾರ್ ಸಿನಿಮಾದ ಆಕಾಶ ಗಡಿಯದಾಟಿ ತಂದಾನೋ ಬೆಳಕ ಕೋಟಿ ಹಾಗೂ ಎರಡನೇ ಹಾಡು ಪ್ರತಿಕಥೆಯ ರಾಕ್ಷಸನು ಹಾಡು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್​ ಆಗಿದೆ. ಕನ್ನಡದಲ್ಲಿ ಪ್ರತಿಕಥೆಯ ರಾಕ್ಷಸ ಎಂದು ಹಾಡು ಶುರುವಾಗಲಿದ್ದು, ಸಂಗೀತಾ ನಿರ್ದೇಶಕ ರವಿ ಬಸ್ರೂರ್​ ಸಲಾರ್​ ಸಿನಿಮಾಗೆ ಮ್ಯೂಸಿಕ್ ನೀಡಿದ್ದಾರೆ. ವಿಚ್​ ಈಸ್​ ವೈಲೆಂಟ್ ಸಿಡಿ ಅಂತಾನೇ ಕ್ಯಾಪ್ಶನ್ ಕೊಟ್ಟು ರಿಲೀಸ್ ಮಾಡಿದ ಸಲಾರ್ ಸಿನಿಮಾದ ತುಂಬಾ ವೈಲೆನ್ಸ್ ಜೋರಾಗಿದೆ.


ಸಲಾರ್‌ ಅಂತಹ ಮಾಸ್ ಸಿನಿಮಾ ಇಷ್ಟಪಡುವವರಿಗೆ ಇದು ಅದ್ಬುತ ಲೋಕವನ್ನೇ ಕಣ್ಣ ಮುಂದೆ ತೆರೆದಿಡುತ್ತೆ. ಮಾಸ್​ ಮಹಾರಾಜ್ ಪ್ರಭಾಸ್​ ಅಬ್ಬರ ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿದ್ದು, ಮತ್ತೆ ‘ಛತ್ರಪತಿ’ ಅವತಾರದಲ್ಲಿ ಪ್ರಭಾಸ್ ಕಂಡು ಫ್ಯಾನ್ಸ್ ಖುಷ್ ಆಗಿದ್ದಾರೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್‌ನ ಸಲಾರ್ ಚಿತ್ರ ಕೂಡ ಸಿನಿಪ್ರಿಯರು ಮತ್ತೊಂದು ಕೆಜಿಎಫ್ ಸಿನಿಮಾ ಎಂಬಂತೆ ಕಂಡಿದ್ದು, ಚಿತ್ರದ ಹಾಡು, ಡಾರ್ಕ್​ ಸೀನ್‌ಗಳಯ ವೀಕ್ಷಕರಿಗೆ ಕೆಜಿಎಫ್ ಸಿನಿಮಾವನ್ನು ನೆನಪಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
+