Salar: ಸಲಾರ್‌ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಇದೀಗ ಬಂಪರ್‌ ಗಿಫ್ಟ್‌ ನೀಡಿದಂತಿದೆ.. ಹೌದು ಎರಡನೇ ಟ್ರೈಲರ್‌ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಇನ್ನಷ್ಟು ಕುತೂಹಲ ಕೆರಳಿಸಿದೆ.. 


COMMERCIAL BREAK
SCROLL TO CONTINUE READING

ಸದ್ಯ ಬಿಡುಗಡೆಯಾದ ಟ್ರೈಲರ್‌ನಲ್ಲಿ ಕೆಜಿಎಫ್‌ಗಿಂತ ಹೆಚ್ಚಾಗಿ ಸಾಹಸ ದೃಶ್ಯಗಳಿದ್ದು.. ಪ್ರಭಾಸ್ ಪಾತ್ರವನ್ನು ತುಂಬಾ ಕ್ರೂರವಾಗಿ ತೋರಿಸಲಾಗಿದೆ. ಮೇಲಾಗಿ ಪ್ರಶಾಂತ್ ನೀಲ್ ಇದರಲ್ಲಿ ನಾಯಕನ ಪಾತ್ರವನ್ನು ಸ್ನೇಹಕ್ಕಾಗಿ ಎಂತಹ ಸಾಹಸಕ್ಕೂ ಸಿದ್ಧ ಎನ್ನುವ ಯೋಧನಂತೆ ತೋರಿಸಿದ್ದಾರೆ.. ಅಲ್ಲದೇ ಸ್ನೇಹಕ್ಕಾಗಿ ಏನು ಬೇಕಾದರೂ ಮಾಡುತ್ತೇನೆ, ಏನು ಬೇಕಾದರೂ ತರುತ್ತೇನೆ, ಎದುರಾಳಿಯಾದರೆ ಯಾರನ್ನೂ ಬಿಡುವುದಿಲ್ಲ ಎನ್ನುವ ಮೂಲಕ ಪ್ರಭಾಸ್ ಪಾತ್ರ ಎಷ್ಟು ಪವರ್ ಫುಲ್ ಎಂಬುದನ್ನು ಸಾರುವ ಪ್ರಯತ್ನ ಮಾಡಿದ್ದಾರೆ.. 


ಇದನ್ನೂ ಓದಿ-ಬಿಗ್‌ಬಾಸ್‌ ವಿನಯ್ ಬೆಂಬಲಕ್ಕೆ ನಿಂತ ಕಿರುತೆರೆ ನಟಿ: ಅನು ಪೂವಮ್ಮಗೆ ನೆಗೆಟಿವ್‌ ಕಮೆಂಟ್ಸ್‌!


ಆದರೆ ಈ ಟ್ರೇಲರ್ ಮೂಲಕ ಪ್ರಶಾಂತ್ ನೀಲ್ ಅವರು ಇಲ್ಲಿಯವರೆಗೆ ಹೇಳಿದ ವಿಷಯಗಳ ಕೆಲವು ಮುಖ್ಯ ಅಂಶಗಳು ಮಾತ್ರ ಎದ್ದು ಕಾಣುತ್ತಿದ್ದು.. ಅದರ ಮೇಲೆಯೇ ಈ ಸಿನಿಮಾ ಸಾಗುತ್ತದೆ.. ಕೆಜಿಎಫ್‌ಗಿಂತ ಹೆಚ್ಚು ಆಕ್ಷನ್ ಎಪಿಸೋಡ್‌ಗಳನ್ನು ಸೇರಿಸಲಾಗಿದ್ದು.. ಪ್ರಭಾಸ್ ಕಟ್ ಔಟ್ ಫೀಲ್ಡ್ ಗೆ ಎಂಟ್ರಿ ಕೊಟ್ಟರೆ ಬೇಕಿರೋ ಆಕ್ಷನ್ ರೇಂಜ್ ಡಿಸೈನ್ ಮಾಡಿದ್ದಾರೆ... ಇತ್ತೀಚಿನ ಟ್ರೇಲರ್ ಅದಕ್ಕೆ ಉತ್ತಮ ಉದಾಹರಣೆಯಾಗಬಹುದು. 


ಇದಲ್ಲದೇ ಪ್ರಶಾಂತ್ ನೀಲ್ ಈ ಚಿತ್ರದಲ್ಲಿ ಸ್ನೇಹಕ್ಕೆ ಹೆಚ್ಚಿನ ಒತ್ತು ನೀಡಿದ್ದು.. ಒಡೆದ ಗೆಳೆತನದ ಭಾವನೆ ಗಟ್ಟಿಯಾಗುವುದಲ್ಲದೇ... ಆತ್ಮೀಯ ಗೆಳೆಯರು ಕಡುವೈರಿ, ಬಲಿಷ್ಠ ಮಿತ್ರರು, ಶತ್ರುಗಳಾಗುವ ದೃಶ್ಯಗಳು ಅಭಿಮಾನಿಗಳ ಮನಸೆಳೆಯುತ್ತವೆ ಎನ್ನಲಾಗುತ್ತಿದೆ.. ಇಲ್ಲಿ ಸ್ನೇಹದ ಜೊತೆಗೆ ತಾಯಿಯ ಭಾವನೆಯೂ ಎಲ್ಲರ ಮನಕಲುಕುವಂತಿದೆ... ಇದರಲ್ಲೂ ಒಂದಷ್ಟು ತಾಯ್ತನ ತೋರಿಸಲಿದ್ದಾರೆ ಎಂದು ಗೊತ್ತಾಗಿದೆ... 


ಪ್ರಭಾಸ್ ಅವರಂತಹ ಬೃಹತ್ ಕಟೌಟ್‌ಗೆ ಸಾಹಸಿ ಸಂಗೀತ ನಿರ್ದೇಶಕ ರವಿ ಬನ್ಸೂರ್ ಬಿಜಿಎಂಗೆ ಜೊತೆಯಾಗಿರುವುದರಿಂದ ಈ ಚಿತ್ರ ಮುಂದಿನ ಹಂತಕ್ಕೆ ಹೋಗಲಿದೆ ಎಂದು ತಿಳಿದಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬರಲಿದೆ... ಆದರೆ ಪ್ರೇಕ್ಷಕರಿಗೆ ಇದು ಹೇಗೆ ಕನೆಕ್ಟ್ ಆಗುತ್ತೆ ಅನ್ನೋದು ದೊಡ್ಡ ಪ್ರಶ್ನೆ. 


ಇದನ್ನೂ ಓದಿ-Prashanth Neel: ʼನನಗೆ ಆ ಸಮಸ್ಯೆ ಇದೆ..ʼ ನಿರ್ದೇಶಕ ಪ್ರಶಾಂತ್‌ ನೀಲ್‌ ಕತ್ತಲಲ್ಲಿ ಸಿನಿಮಾ ಮಾಡೋಕೆ ಕಾರಣ ಇದೆ!


ಇನ್ನು ಕೆಲವರ ಪ್ರಕಾರ ಈ ಸಲಾರ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದ ನಿಶ್ಚಿತ ಎನ್ನಲಾಗಿದ್ದು, ಚಿತ್ರ `ಬಾಹುಬಲಿ' ದಾಖಲೆಗಳನ್ನೇ ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ.. ಇದೆಲ್ಲವನ್ನು ಹೊರತುಪಡಿಸಿ ಬಾಹುಬಲಿ ಚಿತ್ರದ ಮೂಲಕ ಭಾರತದ ದಾಖಲೆಗಳನ್ನು ಬುಡಮೇಲು ಮಾಡಿದ ಪ್ರಭಾಸ್ ಅವರ ಸಿನಿಮಾಗಾಗಿ ಅಭಿಮಾನಿಗಳು, ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.


ಸಲಾರ್ ಮೇಲೆ ಭರವಸೆ ಮತ್ತು ನಿರೀಕಷೆಗಳು ಉತ್ತುಂಗಕ್ಕೇರುತ್ತಿದ್ದು.. ಚಿತ್ರ ಹಿಟ್ ಆಗಿ.. `ಬಾಹುಬಲಿ' ದಾಖಲೆಗಳನ್ನು ಮುರಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.. ಇನ್ನು ಈ ಚಿತ್ರ ಇದೇ ತಿಂಗಳ 22 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.