Prashanth Neel: ʼನನಗೆ ಆ ಸಮಸ್ಯೆ ಇದೆ..ʼ ನಿರ್ದೇಶಕ ಪ್ರಶಾಂತ್‌ ನೀಲ್‌ ಕತ್ತಲಲ್ಲಿ ಸಿನಿಮಾ ಮಾಡೋಕೆ ಕಾರಣ ಇದೆ!

Salar Movie: ಪ್ರಶಾಂತ್ ನೀಲ್ ಅವರ ಎಲ್ಲಾ ಸಿನಿಮಾಗಳು ಡಾರ್ಕ್ ಚೌಕಟ್ಟಿನಲ್ಲಿವೆ... ಹೆಚ್ಚಿನ ಬಣ್ಣಗಳು ಗೋಚರಿಸುವುದಿಲ್ಲ... ಸದ್ಯ ಬರಲಿರುವ ಸಲರ್ ಕೂಡ ಕತ್ತಲಲ್ಲೇ ನಡೆದಿದೆ.. ಆದರೆ ಇದಕ್ಕೆ ಕಾರಣವಿದೆ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ...

Written by - Savita M B | Last Updated : Dec 19, 2023, 10:09 AM IST
  • ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಕೇವಲ ಮೂರು ಚಿತ್ರಗಳನ್ನು ಮಾಡಿದ್ದಾರೆ
  • ಈಗ ಅವರು ರಾಷ್ಟ್ರವ್ಯಾಪಿ ಸ್ಟಾರ್ ನಿರ್ದೇಶಕರಾಗಿದ್ದಾರೆ.
  • ಇತ್ತೀಚೆಗೆ, ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರದ ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದರು
Prashanth Neel: ʼನನಗೆ ಆ ಸಮಸ್ಯೆ ಇದೆ..ʼ ನಿರ್ದೇಶಕ ಪ್ರಶಾಂತ್‌ ನೀಲ್‌ ಕತ್ತಲಲ್ಲಿ ಸಿನಿಮಾ ಮಾಡೋಕೆ ಕಾರಣ ಇದೆ! title=

Salar: ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಕೇವಲ ಮೂರು ಚಿತ್ರಗಳನ್ನು ಮಾಡಿದ್ದಾರೆ ಆದರೆ ಈಗ ಅವರು ರಾಷ್ಟ್ರವ್ಯಾಪಿ ಸ್ಟಾರ್ ನಿರ್ದೇಶಕರಾಗಿದ್ದಾರೆ. ಮೊದಲ ಚಿತ್ರ ಉಗ್ರಂ ಕನ್ನಡದಲ್ಲಿ ಉತ್ತಮ ಯಶಸ್ಸನ್ನು ಕಂಡಿತು ಮತ್ತು ಆ ನಂತರ ಕೆಜಿಎಫ್ ಎರಡು ಚಿತ್ರಗಳಿಂದ ವರ್ಡ್‌ವೈಡ್‌ ಜನಪ್ರಿಯರಾದರು.. ಈಗ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ಸಲಾರ್ ಚಿತ್ರದ ಮೂಲಕ ಬರುತ್ತಿದ್ದಾರೆ. ಈ ಸಿನಿಮಾದ ಪ್ರಚಾರ ಮಾಡದಿದ್ದರೂ ಒಂದಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ... 

ಇತ್ತೀಚೆಗೆ, ಪ್ರಶಾಂತ್ ನೀಲ್ ಅವರು ಸಲಾರ್ ಚಿತ್ರದ ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ ಅವರು ಹಲವು ಆಸಕ್ತಿದಾಯಕ ವಿಷಯಗಳನ್ನು ಹೇಳಿದ್ದಾರೆ. ಪ್ರಶಾಂತ್ ನೀಲ್ ಅವರ ಎಲ್ಲಾ ಸಿನಿಮಾಗಳು ಡಾರ್ಕ್ ಚೌಕಟ್ಟಿನಲ್ಲಿವೆ... ಹೆಚ್ಚಿನ ಬಣ್ಣಗಳು ಗೋಚರಿಸುವುದಿಲ್ಲ... ಮತ್ತು ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಕೂಡ ಆಗಿವೆ.. ಇದಲ್ಲದೇ ಇದೀಗ ಬರಲಿರುವ ಸಲಾರ್ ಕೂಡ ಕತ್ತಲಿನಲ್ಲೇ ಇದೆ... ಆದರೆ ಇದಕ್ಕೆ ಕಾರಣ ಏನು ಎಂದು ಪ್ರಶಾಂತ್ ನೀಲ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ... 

ಇದನ್ನೂ ಓದಿ-Rashmika Mandanna: "ನನ್ನ ಜೀವನದಲ್ಲಿ ಬಂದಿದ್ದಕ್ಕೆ ಧನ್ಯವಾದಗಳು" ನ್ಯಾಷನಲ್‌ ಕ್ರಷ್ ಲವ್ ಪೋಸ್ಟ್ ಯಾರಿಗಾಗಿ?

ಈ ಬಗ್ಗೆ ಮಾತನಾಡಿದ ಪ್ರಶಾಂತ್‌ ನೀಲ್... "ನನಗೆ ಒಸಿಡಿ (ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್) ಸಮಸ್ಯೆ ಇದೆ. ನನಗೆ ಹೆಚ್ಚಿನ ಬಣ್ಣಗಳು ಇಷ್ಟವಾಗುವುದಿಲ್ಲ.. ಹಾಗಾಗಿಯೇ ನನ್ನ ಸಿನಿಮಾಗಳು ಕತ್ತಲಲ್ಲೇ ರೆಡಿಯಾಗುತ್ತವೆ.. ನನ್ನ ವೈಯಕ್ತಿಕ ವಿಚಾರಗಳು ಅಲ್ಲಿನ ಪರದೆಯ ಮೇಲೆ ಪ್ರತಿಫಲಿಸುತ್ತವೆ. ಆದರೆ ನನ್ನ ಸಿನಿಮಾಗಳು ಒಂದಕ್ಕೊಂದು ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ OCD ಹೊಂದಿರುವ ಜನರು ಕೇವಲ ಎಲ್ಲವನ್ನೂ ಸ್ವಚ್ಛವಾಗಿರಿಸಿಕೊಳ್ಳುವುದು.. ಮಾಡಿದ್ದನ್ನು ಮತ್ತೆ ಮತ್ತೆ ಮಾಡುವ ಸಮಸ್ಯೆಗಳು ಮಾತ್ರವಲ್ಲದೆ ವಿಭಿನ್ನ ಆಲೋಚನೆಗಳು ಮತ್ತು ಬಣ್ಣಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ"...

ಅಲ್ಲದೆ.. ಕೆಜಿಎಫ್ ಮತ್ತು ಸಲಾರ್ ಸಿನಿಮಾಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಪ್ರಶಾಂತ್ ನೀಲ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸಿ ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿದ್ದು, ಇಬ್ಬರು ಆತ್ಮೀಯ ಗೆಳೆಯರು ಶತ್ರುಗಳಾಗುವ ಕಥೆ ಇದಾಗಿದೆ ಎಂದು ಹೇಳಿದ್ದಾರೆ.. 

ಇದನ್ನೂ ಓದಿ-Salar: ಸಲಾರ್ ಚಿತ್ರದ ನಾಯಕ ಯಶ್! ಟ್ರೈಲರ್ ನಲ್ಲಿ ಆ ದೃಶ್ಯವನ್ನು ಗಮನಿಸಿದ್ದೀರಾ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News