ಐಶ್ವರ್ಯ ಜೊತೆಗಿನ ಮನಸ್ತಾಪದ ಮಧ್ಯೆಯೇ ಕಂಡು ಬಂತು ಸಲ್ಮಾನ್ - ಅಭಿಷೇಕ್ ಸ್ನೇಹ ! ಇಲ್ಲಿದೆ ವಿಡಿಯೋ
Salman Khan and Abhishek Bachchan:ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಮೊದಲು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ತಬ್ಬಿಕೊಂಡು ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
Salman Khan and Abhishek Bachchan: ಸಲ್ಮಾನ್ ಖಾನ್ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನ ಎರಡೂ ಸದಾ ಚರ್ಚೆಯಲ್ಲಿರುತ್ತದೆ. ಸಲ್ಮಾನ್ ಖಾನ್ ಗೆ ಸಂಬಂಧಿಸಿದ ಪ್ರತಿಯೊಂದು ಸುದ್ದಿಗೂ ಅವರ ಅಭಿಮಾನಿಗಳು ಭಾರೀ ಮಹತ್ವ ನೀಡುತ್ತಾರೆ. ಆದರೆ, ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಲ್ಮಾನ್ ವಿಡಿಯೋವೊಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹೌದು, ನಿನ್ನೆ ಸಂಜೆಯಿಂದ ಸಲ್ಮಾನ್ ಖಾನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಮೊದಲು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ತಬ್ಬಿಕೊಂಡು ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
ಅಭಿಷೇಕ್ ಬಚ್ಚನ್ ಅವರನ್ನು ಅಪ್ಪಿಕೊಂಡ ಸಲ್ಮಾನ್ ಖಾನ್! :
ಸಲ್ಮಾನ್ ಖಾನ್ ಡಿಸೆಂಬರ್ 21 ರ ಗುರುವಾರ ಸಂಜೆ ಹಿಂದಿ ಚಲನಚಿತ್ರೋದ್ಯಮದ ಖ್ಯಾತ ನಿರ್ಮಾಪಕ ಆನಂದ್ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯ ಅನೇಕ ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಖಾನ್ ವೇದಿಕೆಯನ್ನು ಹತ್ತುತ್ತಿರುವುದನ್ನು ಕಾಣಬಹುದು. ಅಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಕೂಡಾ ಇರುವುದನ್ನು ಗಮನಿಸಬಹುದು. ಇಲ್ಲಿ ಸಲ್ಮಾನ್ ಖಾನ್ ಮೊದಲು ಅಮಿತಾಬ್ ಬಚ್ಚನ್ ಬಳಿಗೆ ತೆರಳಿ ಕೈಕುಲುಕುತ್ತಾನೆ ಮತ್ತು ಅಪ್ಪಿಕೊಳ್ಳುತ್ತಾನೆ. ಅಮಿತಾಬ್ ಕೂಡಾ ಸಲ್ಮಾನ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುವುದನ್ನು ಕಾಣಬಹುದು. ನಂತರ ಸಲ್ಮಾನ್ ಅಷ್ಟೇ ಸ್ನೇಹ ಮತ್ತು ಪ್ರೀತಿ ಪೂರ್ವಕವಾಗಿ ಅಭಿಷೇಕ್ ಬಚ್ಚನ್ ಅವರನ್ನು ಕೂಡ ತಬ್ಬಿಕೊಂಡಿದ್ದಾರೆ.
ಇದನ್ನೂ ಓದಿ : ಸಲಾರ್ BGM: ಥಿಯೇಟರ್‌ನಲ್ಲಿ ಮ್ಯೂಸಿಕ್ ಕೇಳಿ ಬೆಚ್ಚಿಬಿದ್ರಾ ಪ್ರೇಕ್ಷಕರು?
ಯಾವ ರೀತಿಯ ಮನಸ್ತಾಪಕ್ಕೂ ಜಾಗವಿಲ್ಲ :
ಮೂವರು ತಾರೆಯರ ವೀಡಿಯೋ ನೋಡಿದಾಗ ಅವರ ನಡುವೆ ಯಾವುದೇ ರೀತಿಯ ಮನಸ್ತಾಪ ಇದ್ದಂತೆ ಕಾಣುತ್ತಿಲ್ಲ. ಮನರಂಜನಾ ಸುದ್ದಿಗಳ ಪ್ರಕಾರ, ಐಶ್ವರ್ಯಾ ಜೊತೆಗಿನ ಬ್ರೇಕಪ್ ನಂತರ ಸಲ್ಮಾನ್ ಅಭಿಷೇಕ್ ಅವರನ್ನು ತಬ್ಬಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಸಲ್ಮಾನ್ ಮತ್ತು ಅಭಿಷೇಕ್ ಮುಖದಲ್ಲಿರುವ ಸಂತಸ ನೋಡಿದರೆ ಅವರಿಬ್ಬರ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ : ಬಿಗ್‌ಬಾಸ್ ವಿನಯ್ ಗೆಲುವಿಗಾಗಿ ಧ್ವನಿ ಎತ್ತಿದ ನಿಶಿತಾ: ತಂಗಿ ಗಂಡನಿಗೆ ಅತ್ತಿಗೆಯ ಫುಲ್ ಸಪೋರ್ಟ್!
ಸಿನಿಮಾ ನಿರ್ಮಾಪಕ ಆನಂದ್ ಪಂಡಿತ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್, ಅಮಿತಾಬ್ ಅಥವಾ ಅಭಿಷೇಕ್ ಮಾತ್ರವಲ್ಲದೆ, ಇತರ ಅನೇಕ ತಾರೆಯರು ಭಾಗವಹಿಸಿದ್ದರು. ಶಾರುಖ್ ಖಾನ್, ಹೃತಿಕ್ ರೋಷನ್, ರಾಕೇಶ್ ರೋಷನ್, ಸೋನು ನಿಗಮ್, ಅಮೀಶಾ ಪಟೇಲ್ ಸೇರಿದಂತೆ ಹಲವು ತಾರೆಯರು ಆನಂದ್ ಪಂಡಿತ್ ಹುಟ್ಟುಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.