ನವದೆಹಲಿ: ಅಮೇರಿಕಾ ಪ್ರವಾಸದಲ್ಲಿರುವ ಬಾಲಿವುಡ್ ಮಾಜಿ ಜೋಡಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮತ್ತೊಮ್ಮೆ ಇಬ್ಬರು ಮಾಜಿ ಲವರ್ಸ್ ಒಳ್ಳೆಯ ಸ್ನೇಹಿತರಾಗಿರಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಕತ್ರಿನಾ ಅವರನ್ನು 'ತಮ್ಮ ಬೇಬಿ' ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಆ ವಿಡಿಯೋ ನೋಡಿ...



ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ವರದಿಗಾರರೊಬ್ಬರು ಇದೇ ಜುಲೈ 15ರಂದು ತಮ್ಮ ಬೀಬಿ ಹುಟ್ಟುಹಬ್ಬ ಇದೆ ಎಂದು ಪ್ರಸ್ತಾಪಿಸಿದ ಕೂಡಲೇ ನಗುತ್ತಾ ಉತ್ತರಿಸಿದ ಸಲ್ಮಾನ್, "ನನ್ನ ಬೇಬಿ ಹುಟ್ಟುಹಬ್ಬ ಜುಲೈ 15ರಂದು ಅಲ್ಲ, ಜುಲೈ 16ರಂದು" ಎಂದಿದ್ದಾರೆ. ಸಲ್ಮಾನ್ ಹಾಗೆ ಹೇಳುತ್ತಿದ್ದಂತೆಯೇ ಕತ್ರಿನಾ ಕೆನ್ನೆ ಕೆಂಪಾಗಿದೆ. ಕೂಡಲೇ ಇದರಿಂದ ಎಚ್ಚೆತ್ತ ಸಲ್ಮಾನ್ "ಈ ಬೇಬಿ ಅಲ್ಲ, ಆ ಬೇಬಿ" ಮಾತು ಬದಲಾಯಿಸಿದ್ದಾರೆ.