Salman Khan Confirms New Relationship: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಪರಿಚಯದ ಅಗತ್ಯವಿಲ್ಲ. ಸಲ್ಮಾನ್ ಖಾನ್ ಉದ್ಯಮದ ದೊಡ್ಡ ಮತ್ತು ಪ್ರಸಿದ್ಧ ನಟರಲ್ಲಿ ಒಬ್ಬರು, ಅವರ ಅಭಿಮಾನಿಗಳು ಪ್ರಪಂಚದಾದ್ಯಂತ ಇದ್ದಾರೆ. ಸಲ್ಮಾನ್ ಖಾನ್ ತಮ್ಮ ಚಲನಚಿತ್ರಗಳು, ನಟನೆ ಜೊತೆಗೆ ತಮ್ಮ ಫಿಟ್ನೆಸ್‌ನಿಂದಲೂ ಹೆಸರುವಾಸಿಯಾಗಿದ್ದಾರೆ. ಇಲ್ಲಿಯವರೆಗೂ ಮದುವೆಯಾಗದಿರುವ ಸಲ್ಮಾನ್‌ ಖಾನ್‌ ಸದ್ಯ ಬಾಲಿವುಡ್‌ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌. ಸಲ್ಮಾನ್ ಖಾನ್ ಅವರ ಸುದೀರ್ಘ ವೃತ್ತಿಜೀವನದಲ್ಲಿ, ಅವರ ಹೆಸರು ಅನೇಕ ನಟಿಯರೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ ಅವರು ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆಯಾಗಲಿದೆ. ಈ ವೇಳೆ ಸಲ್ಲು ಮನಸ್ಸಿನಲ್ಲಿ ಮತ್ತೆ ಪ್ರೀತಿ ಚಿಗುರೊಡೆದ ವಿಚಾರ ಎಲ್ಲೆಡೆ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಸಲ್ಮಾನ್‌ ಖಾನ್‌ ಹೆಸರನ್ನು ನಟಿ ಪೂಜಾ ಹೆಗ್ಡೆ ಜೊತೆಗೆ ಲಿಂಕ್ ಮಾಡಲಾಗುತ್ತಿದೆ. ಪೂಜಾ ಹೆಗ್ಡೆ ಮತ್ತು ಸಲ್ಮಾನ್ ಖಾನ್ ಡೇಟಿಂಗ್ ವದಂತಿಗಳು ಬಲು ಜೋರಾಗಿ ವೈರಲ್‌ ಆಗುತ್ತಿವೆ. ಈ ನಡುವೆ ಸಲ್ಮಾನ್ ಖಾನ್ ಅವರ ಹೊಸ ಸಂದರ್ಶನ ವೈರಲ್ ಆಗಿದೆ, ಇದರಲ್ಲಿ ನಟ ತನ್ನ ಗೆಳತಿಯ ಹೆಸರನ್ನು ಬಹಿರಂಗಪಡಿಸದೆ ಸಂಬಂಧವನ್ನು ಖಚಿತಪಡಿಸಿದ್ದಾರೆ. 


 


ನವರಸ ನಾಯಕ ಜಗ್ಗೇಶ್ ಅವರಿಂದ ಬಿಡುಗಡೆಯಾಯಿತು "ಉಂಡೆನಾಮ" ಚಿತ್ರದ ಟ್ರೇಲರ್ 


ಲ್ಮಾನ್ ಖಾನ್ ಅವರನ್ನು ಬಾಲಿವುಡ್‌ನ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಎಂದು ಕರೆಯಲಾಗುತ್ತದೆ ಮತ್ತು ಅವರು ತಮ್ಮ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಎಂದಿಗೂ ಚರ್ಚಿಸಿಲ್ಲ. ಇತ್ತೀಚೆಗೆ, ಫಿಲ್ಮ್‌ಫೇರ್ ಪ್ರಶಸ್ತಿಗಳ ಸುದ್ದಿಗೋಷ್ಠಿಯಲ್ಲಿ, ಸಲ್ಮಾನ್ ತಮ್ಮ ಮುಂದಿನ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಶೀರ್ಷಿಕೆಯನ್ನು ಬಳಸಿಕೊಂಡು ತಮ್ಮ ಹೊಸ ಸಂಬಂಧವನ್ನು ಖಚಿತಪಡಿಸಿದ್ದಾರೆ.


ಈ  ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ಸಲ್ಮಾನ್ ಇಡೀ ದೇಶಕ್ಕೆ ಸಹೋದರ ಎಂಬ ರೀತಿಯಲ್ಲಿ ತಮ್ಮ ಪ್ರಶ್ನೆಯನ್ನು ಪ್ರಾರಂಭಿಸಿದರು ಮತ್ತು ಸಲ್ಮಾನ್ ನಂತರ ಸಂಭಾಷಣೆಯನ್ನು ಮಧ್ಯದಲ್ಲಿ ತಡೆದರು. "ಅವನು ಇಡೀ ಭಾರತಕ್ಕೆ ಸಹೋದರನಲ್ಲ, ಅವನು ಒಬ್ಬರ ಜೀವವೂ ಹೌದು!' ಎಂದು ಮುಗುಳ್ನಗುತ್ತ ಸಲ್ಮಾನ್‌ ಹೇಳಿದರು. ಸಲ್ಮಾನ್‌ನ ಈ ಹೇಳಿಕೆಗೆ ಅಲ್ಲಿದ್ದವರೆಲ್ಲ ಭಾರೀ ಘರ್ಜನೆ ಶುರು ಮಾಡಿದರು. ಒಟ್ಟಾರೆ ಸಲ್ಮಾನ್‌ ಖಾನ್‌ ಮತ್ತು ಪೂಜಾ ಹೆಗ್ಡೆ ಡೇಟಿಂಗ್‌ ವದಂತಿ ನಡುವೆ ಸಲ್ಮಾನ್‌ ತಾವು ಒಂದು ಹುಡುಗಿಯ ಜೀವ ಎಂದು ಪರೋಕ್ಷವಾಗಿ ಹೇಳಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. 


ಇದನ್ನೂ ಓದಿ: ಪುಷ್ಪ 2 ಹೊಸ ಪೋಸ್ಟರ್ ರಿಲೀಸ್‌.. ಅಲ್ಲು ಅರ್ಜುನ್ ಅವತಾರ ಕಂಡು ಹೀಗಂದ್ರು ಕ್ರಿಕೆಟಿಗ ವಾರ್ನರ್!