Pushpa The Rule: ಪುಷ್ಪ 2 ಹೊಸ ಪೋಸ್ಟರ್ ರಿಲೀಸ್‌.. ಅಲ್ಲು ಅರ್ಜುನ್ ಅವತಾರ ಕಂಡು ಹೀಗಂದ್ರು ಕ್ರಿಕೆಟಿಗ ವಾರ್ನರ್!

Pushpa The Rule New Poster: ಇಂದು ಸೌತ್‌ ಸಿನಿಮಾ ಸ್ಟಾರ್‌ ಅಲ್ಲು ಅರ್ಜುನ್‌ ಹುಟ್ಟು ಹಬ್ಬ. ಈ ವಿಶೇಷ ದಿನದಂದು ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಪುಷ್ಪ: ದಿ ರೂಲ್‌ ಚಿತ್ರತಂಡ ಅಲ್ಲು ಅರ್ಜುನ್‌ ಹೊಸ ಪೋಸ್ಟರ್‌ನ್ನು ರಿಲೀಸ್‌ ಮಾಡಿದೆ. 

Written by - Chetana Devarmani | Last Updated : Apr 8, 2023, 02:19 PM IST
  • ಪುಷ್ಪ 2 ಹೊಸ ಪೋಸ್ಟರ್ ರಿಲೀಸ್‌
  • ಅಲ್ಲು ಅರ್ಜುನ್ ಬರ್ತ್‌ ಡೇಗೆ ಸರ್‌ಪ್ರೈಸ್‌
  • ಲುಕ್‌ ಕಂಡು ಹೀಗಂದ್ರು ಕ್ರಿಕೆಟಿಗ ವಾರ್ನರ್!
Pushpa The Rule: ಪುಷ್ಪ 2 ಹೊಸ ಪೋಸ್ಟರ್ ರಿಲೀಸ್‌.. ಅಲ್ಲು ಅರ್ಜುನ್ ಅವತಾರ ಕಂಡು ಹೀಗಂದ್ರು ಕ್ರಿಕೆಟಿಗ ವಾರ್ನರ್!   title=
Pushpa The Rule

Pushpa The Rule New Poster: ಇಂದು ದಕ್ಷಿಣದ ಸೂಪರ್‌ಸ್ಟಾರ್ ಮತ್ತು ಪುಷ್ಪ ಚಲನಚಿತ್ರ ನಟ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದಂದು ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ವಿಶೇಷ ಉಡುಗೊರೆ ದೊರೆತಿದೆ. ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪುಷ್ಪ: ದಿ ರೂಲ್‌ನ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆ ಉಟ್ಟಿದ್ದಾರೆ. ಡಾರ್ಕ್ ಮೇಕಪ್ ಮಾಡಿದ್ದಾರೆ. ಕೆಂಪು ಮತ್ತು ನೀಲಿ ಬಣ್ಣಗಳಿಂದ ಮುಖಕ್ಕೆ ಮೇಕಪ್‌ ಮಾಡಿದ್ದಾರೆ. ಅಲ್ಲದೆ ಮೂಗು ಮತ್ತು ಕಿವಿಗಳಲ್ಲಿ ಆಭರಣಗಳನ್ನು ಧರಿಸಿದ್ದಾರೆ. ಅಲ್ಲು ಅರ್ಜುನ್ ಇಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪೋಸ್ಟರ್ ಅನ್ನು ಹಂಚಿಕೊಳ್ಳುವಾಗ, ಅಲ್ಲು ಅರ್ಜುನ್ "ಪುಷ್ಪಾ ಅದ್ಯಾಯ ಪ್ರಾರಂಭ" ಎಂದು ಬರೆದಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Allu Arjun (@alluarjunonline)

 

ಪೋಸ್ಟರ್ ಶೇರ್ ಆದ ತಕ್ಷಣ ಹಲವು ಖ್ಯಾತ ವ್ಯಕ್ತಿಗಳು ಕಾಮೆಂಟ್ ಮಾಡಿದ್ದಾರೆ. ರಾಶಿ ಖನ್ನಾ ಕಾಮೆಂಟ್ ಬಾಕ್ಸ್‌ನಲ್ಲಿ "ವೋಹ್ಹ್" ಎಂದು ಬರೆದಿದ್ದಾರೆ. ದಿಶಾ ಪಟಾನಿ ಮತ್ತು ಹುಮಾ ಖುರೇಷಿ ಫೈರ್ ಎಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ. ಇದಲ್ಲದೇ ಕ್ರಿಕೆಟಿಗ ಡೇವಿಡ್ ವಾರ್ನರ್ ‘ಐ ಕಾಂಟ್ ವೇಯ್ಟ್’ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಗಳ ಜೊತೆ ವಿಡಿಯೋ ಮಾಡಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ : ಅಲ್ಲು ಅರ್ಜುನ್‌ಗೆ ಸಿನಿಮಾ, ಬ್ಯುಸಿನೆಸ್‌ನಿಂದ ಕೋಟಿಗಟ್ಟಲೆ ಆದಾಯ! ಸೌತ್‌ ಸ್ಟಾರ್‌ ಐಷಾರಾಮಿ ಜೀವನ ಹೇಗಿದೆ ಗೊತ್ತಾ?

ಈ ಹಿಂದೆ, ಚಿತ್ರದ ನಿರ್ಮಾಪಕರು ಪುಷ್ಪ 2 ರ ಕ್ಲಿಪ್ ಅನ್ನು ಬಿಡುಗಡೆ ಮಾಡಿದ್ದರು. ಈ ಕ್ಲಿಪ್ ಅನ್ನು 'ಪುಷ್ಪ ಕಹಾ ಹೈ' ಹೆಸರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ತಕ್ಷಣ ವೈರಲ್ ಆಗಿತ್ತು. ಇದನ್ನು ಇಲ್ಲಿಯವರೆಗೆ 18 ಮಿಲಿಯನ್ ಬಳಕೆದಾರರು ವೀಕ್ಷಿಸಿದ್ದಾರೆ.

 

 

ಪುಷ್ಪಾ ಚಿತ್ರದ ಮೊದಲ ಭಾಗ ಶ್ರೀಗಂಧದ ಕಳ್ಳಸಾಗಾಣಿಕೆಯನ್ನು ಆಧರಿಸಿದೆ. ಕಳ್ಳಸಾಗಾಣಿಕೆಯ ಹಿಂದೆ ಪುಷ್ಪಾ ಅವರ ಶಕ್ತಿ ತೋರಲಾಗಿದೆ. ಇದರಲ್ಲಿ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಮಂದಣ್ಣ ಜೊತೆಗಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತು. ಈ ಚಿತ್ರವು 2021 ರಲ್ಲಿ ಬಿಡುಗಡೆಯಾಯಿತು. ಅದರ 'ಊ ಅಂಟವಾ', 'ಶ್ರೀವಲ್ಲಿ' ಮತ್ತು 'ಸಾಮಿ ಸಾಮಿ' ಹಾಡುಗಳು ಬಹಳ ಪ್ರಸಿದ್ಧವಾದವು. ಪುಷ್ಪಾ ದ ರೂಲ್ ಅನ್ನು ಸುಕುಮಾರ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ಮೈತ್ರಿ ಮೂವೀ ಮೇಕರ್ಸ್‌ನ ನವೀನ್ ಯೆರ್ನೇನಿ ನಿರ್ಮಿಸಿದ್ದಾರೆ. ಈ ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ : Rashmika Mandanna: ವಿಜಯ್ ಜೊತೆ ರಶ್ಮಿಕಾ ಡೇಟಿಂಗ್.. ಒಂದೇ ಮನೆಯಲ್ಲಿ ವಾಸ! ಅದೊಂದು ಸಾಕ್ಷಿ ಸಮೇತ ಸಿಕ್ಕಿಬಿದ್ದ ನ್ಯಾಷನಲ್ ಕ್ರಶ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News