ಮುಂಬೈ: ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಸಾವು ಪ್ರಕರಣದ ಡ್ರಗ್ಸ್ ಆಂಗಲ್ ಬಾಲಿವುಡ್ ನ ಖ್ಯಾತನಾಮರ ಹೆಸರಿನ ಜೊತೆಗೆ ತಳಕುಹಾಕಿಕೊಂಡಿದೆ. ಪ್ರಸ್ತುತ ಈ ಪ್ರಕರಣದಲ್ಲಿ ಹಲವು ಖ್ಯಾತನಾಮರ ಹೆಸರುಗಳು ಬಹಿರಂಗಗೊಳ್ಳುತ್ತಿವೆ. ಈ ಪಟ್ಟಿಯಲ್ಲಿ ಈಗಾಗಲೇ ದೀಪಿಕಾ ಪಡುಕೋಣೆ ಸೇರಿದಂತೆ ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಹಾಗೂ ರಾಕುಲ್ ಪ್ರೀತ್ ಸಿಂಗ್ ನಂತಹ ಖ್ಯಾತ ನಟಿಯರ ಹೆಸರು ಶಾಮೀಲಾಗಿದೆ. ಸದ್ಯ ಬಂದಿರುವ ವರದಿಯೊಂದರ ಪ್ರಕಾರ, ಈ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಹೆಸರು ಕೂಡ ಶಾಮೀಲಾಗುವ ಲಕ್ಷಣಗಳು ಗೋಚರಿಸತೊಡಗಿವೆ.  ಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಡ್ರಗ್ಸ್ ಪ್ರಕರಣದಲ್ಲಿ ಕೇಳಿಬಂದಿರುವ ಕ್ವಾನ್ ಕಂಪನಿಯಲ್ಲಿ ಸಲ್ಮಾನ್ ಖಾನ್ ಖಾನ್ ಕಂಪನಿಯೂ ಕೂಡ ಪಾಲುದಾರಿಕೆ ಹೊಂದಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Drugs Case: Deepika Padukone 'ಹ್ಯಾಲೊವಿನ್ ಪಾರ್ಟಿ' ಸತ್ಯ ಬಹಿರಂಗ


ಲೀಗಲ್ ಟೀಂ ಹೇಳಿಕೆ
ಈ ವರದಿಗಳು ಬಹಿರಂಗಗೊಳ್ಳುತ್ತಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಈ ವರದಿಗಳಿಗೆ ಬ್ರೇಕ್ ನೀಡಲು ಸಲ್ಮಾನ್ ಖಾನ್ ತಂಡ ಹೇಳಿಕೆಯೊಂದನ್ನು ಜಾರಿಗೊಳಿಸಿದೆ.  ತನ್ನ ಹೇಳಿಕೆಯಲ್ಲಿ ತಂಡ, "ಮಾಧ್ಯಮಗಳ ಒಂದು ಗುಂಪು ಕ್ವಾನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ತಮ್ಮ ಕ್ಲೈಂಟ್ ಹೆಚ್ಚುವರಿ ಪಾಲು ಹೊಂದಿದ್ದಾರೆ ಎಂದು ವರದಿ ಮಾಡುತ್ತಿದ್ದು, ಕ್ವಾನ್ ಕಂಪನಿಯ ಜೊತೆಗೆ ತಮ್ಮ ಕ್ಲೈಂಟ್ ಪ್ರತ್ಯಕ್ಷವಾಗಲಿ ಅಥವಾ ಅಪ್ರತ್ಯಕ್ಷ ರೂಪದಲ್ಲಿ ಯಾವುದೇ ಪಾಲುದಾರಿಕೆಯನ್ನು ಹೊಂದಿಲ್ಲ. ಹೀಗಾಗಿ ತಪ್ಪು ವರದಿಗಳನ್ನು ಪ್ರಕಟಿಸುವುದರಿಂದ ಹಿಂದೆ ಸರೆಯುವಂತೆ ವಿನಂತಿಸಲಾಗುತ್ತದೆ" ಎಂದು ಹೇಳಿದೆ.


ಇದನ್ನು ಓದಿ-  ಝೀ ನ್ಯೂಸ್ ಬಳಿ ದೀಪಿಕಾ ಪಡುಕೋಣೆ ಅವರ 'ಡ್ರಗ್ಸ್ ಚಾಟ್' EXCLUSIVE


ಸಲ್ಮಾನ್ ಖಾನ್ ಹೆಸರು ಬಹಿರಂಗಗೊಳ್ಳುತ್ತಲೇ ಪ್ರತಿಕ್ರಿಯೆ ನೀಡಿರುವ ದಬಂಗ್ -3 ಚಿತ್ರ ನಿರ್ದೇಶಕ ನಿಖಿಲ್ ದ್ವಿವೇದಿ, ಸಲ್ಮಾನ್ ಖಾನ್ ರಕ್ಷಣೆಗೆ ಮುಂದಾಗಿ, "ಈ ವರದಿಗಳು ಸಂಪೂರ್ಣ ಸದ್ಯಕ್ಕೆ ದೂರವಾಗಿವೆ ಮತ್ತು ತಪ್ಪಾಗಿವೆ. ಸಲ್ಮಾನ್ ಖಾನ್ ಅವರ ಯಾವುದೇ ಕಂಪನಿ ಕ್ವಾನ್ ಕಂಪನಿ ಅಥವಾ ಅದರ ಯಾವುದೇ ಅಂಗ ಸಂಸ್ಥೆಯ ಜೊತೆಗೆ ಪಾಲುದಾರಿಕೆ ಹೊಂದಿಲ್ಲ . ಇಂದಿನ ಕಾಲದಲ್ಲಿ ಇಂತಹ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಇದೊಂದು ನೋವುತರುವ ಹಾಗೂ ನಾಚಿಕೆಗೇಡಿತನದ ಕೆಲಸವಾಗಿದೆ" ಎಂದಿದ್ದಾರೆ.


ಇದನ್ನು ಓದಿ- ಡ್ರಗ್ಸ್ ಪ್ರಕರಣ: ಎನ್‌ಸಿಬಿಯ ರಾಡಾರ್‌ನಲ್ಲಿರುವ ನಟ-ನಟಿಯರ ಪೂರ್ಣ ಪಟ್ಟಿಯನ್ನು ನೋಡಿ


ಕ್ವಾನ್ ಟ್ಯಾಲೆಂಟ್ ಕಂಪನಿಯಲ್ಲಿ  ಜಯಾ ಶಾಹ್ ಹಾಗೂ ದಿಶಾ ಸಾಲಿಯಾನ್ ಕೂಡ ಕೆಲಸ ಮಾಡಿದ್ದರೆ ಎಂಬುದು ಇಲ್ಲಿ ಉಲ್ಲೇಖನೀಯ. ಇದೆ ಕಂಪನಿಯ ಜೊತೆಗೆ ದೀಪಿಕಾ ಪಡುಕೋಣೆ ಅವರ ಟ್ಯಾಲೆಂಟ್ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಕೂಡ ಸಂಬಂಧ ಹೊಂದಿದ್ದಾರೆ.