ನವದೆಹಲಿ : ಬಿಗ್ ಬಾಸ್ 15' (Biggboss) ಅಕ್ಟೋಬರ್ 2 ರಿಂದ ಆರಂಭವಾಗಲಿದ್ದು, ಈ ಬಾರಿ,  ಜಂಗಲ್ ಥೀಮ್ ಅನ್ನು ಪರಿಚಯಿಸಲಾಗಿದೆ. ಮಧ್ಯಪ್ರದೇಶದ ಪೆಂಚ್ ರಾಷ್ಟ್ರೀಯ ಶಿಬಿರದಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ಆರತಿ ಸಿಂಗ್ ಮತ್ತು ದೇಬೋಲೀನಾ ಭಟ್ಟಾಚಾಯರ್ಜಿ ಉಪಸ್ಥಿತಿಯಲ್ಲಿ ಶೋವನ್ನು ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಆತಿಥೇಯ ಸಲ್ಮಾನ್ ಖಾನ್ (Salman Khan) ಕೂಡ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಜೊತೆ ದೀರ್ಘ ಸಂಬಂಧ :
ತನ್ನ ಜೀವನದಲ್ಲಿ ಯಾರ ಜೊತೆಗಾದರೂ ತಾನು ಸುದೀರ್ಘ ಸಂಬಂಧ ಹೊಂದಿದ್ದರೆ ಅದು ಬಿಗ್ ಬಾಸ್ ಶೋ (Biggboss Show) ಮಾತ್ರ ದು ಸಲ್ಮಾನ್ ಖಾನ್ ಈ ಸಂದರ್ಭದಲ್ಲಿ ಹೇಳಿದ್ದಾರೆ. ಇದಲ್ಲದೆ, ತನ್ನ ಉಳಿದೆಲ್ಲಾ ಸಂಬಂಧಗಳು ಎಂದು ಹೇಳಿ ಅರ್ಧದಲ್ಲಿಯೇ ಮಾತು ನಿಲ್ಲಿಸಿದ ಸಲ್ಮಾನ್ (Salman khan) ನಗು ಬೀರಿದ್ದಾರೆ.  


ಇದನ್ನೂ ಓದಿ : Indian Sign Language Dictionary ಯಲ್ಲಿ ಸ್ಥಾನ ಪಡೆದ ಶಾರುಖ್ ಖಾನ್ !


ಸಲ್ಮಾನ್ ಮತ್ತು ಬಿಗ್ ಬಾಸ್‌ನ ಸಾಮ್ಯತೆಗಳು :
ಇದಲ್ಲದೆ, ತನ್ನ ಮತ್ತು ಬಿಗ್ ಬಾಸ್ ನಡುವೆ ಹಲವು ಸಾಮ್ಯತೆಗಳಿವೆ ಎಂದು ಸಲ್ಮಾನ್ (Salman Khan) ಹೇಳಿದ್ದಾರೆ. 'ಬಿಗ್ ಬಾಸ್ ಮತ್ತು ತಾನು ಇಬ್ಬರೂ ಮದುವೆಯಾಗಿಲ್ಲ (Marriage), ಹಾಗಾಗಿ, ನಾವಿಬ್ಬರೂ ಯಾವುದೇ ಭಯವಿಲ್ಲದೆ, ನಮ್ಮನ್ನು ಬಾಸ್ ಎಂದು ಪರಿಗಣಿಸಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.  


ಸಲ್ಮಾನ್ ಪರೀಕ್ಷೆ ಪ್ರತಿ ವರ್ಷ ನಡೆಯುತ್ತದೆ :
ಈ ಶೋವನ್ನು ನಾನು ಬಹಳ ಪ್ರೀತಿಸುತ್ತೇನೆ, ಇದು ನನ್ನ ತಾಳ್ಮೆ ಮಟ್ಟವನ್ನು ಪರೀಕ್ಷಿಸುತ್ತದೆ. ಪ್ರತಿ ಬಾರಿ ನಾನು ಅತಿಯಾಗಿ ಕೋಪಗೊಂಡಾಗ, ತಾಳ್ಮೆ ಕಳೆದುಕೊಳ್ಳಬಾರದಿತ್ತು ಎಂದು ಅನಿಸುತ್ತದೆ ಮತ್ತು ನಂತರ ಕೋಪವನ್ನು ನಿಯಂತ್ರಿಸಲು ಹೆಚ್ಚು ಪ್ರಯತ್ನಿಸುತ್ತೇನೆ ಎಂದಿದ್ದಾರೆ. 


ಇದನ್ನೂ ಓದಿ : Sonu Sood Income Tax Survey: ತೆರಿಗೆ ವಂಚನೆಯ ಬಗ್ಗೆ ಸೋನು ಸೂದ್ ಹೇಳಿದ್ದೇನು? ಎರಡು ಪಕ್ಷದ ಜನರು ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ