Sonu Sood Income Tax Survey: ಬಾಲಿವುಡ್ ನಟ ಸೋನು ಸೂದ್ ಇತ್ತೀಚಿನ ದಿನಗಳಲ್ಲಿ ತೆರಿಗೆ ವಂಚನೆ ಆರೋಪವನ್ನು ಎದುರಿಸುತ್ತಿದ್ದಾರೆ. ಐಟಿ ಅಧಿಕಾರಿಗಳು ಸೋನು 20 ಕೋಟಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಸೋನು ಸೂದ್ ಈ ವಿಷಯದಲ್ಲಿ ತಮ್ಮ ಮೌನ ಮುರಿದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನು, ನಾನು ಯಾವತ್ತೂ ತಪ್ಪು ಮಾಡಿಲ್ಲ ನನಗೆ ಎರಡು ಬಾರಿ ರಾಜ್ಯಸಭಾ ಸ್ಥಾನದ ಆಫರ್ ಕೂಡ ಬಂದಿವೆ ಎಂದು ಸೋನು ಹೇಳಿದ್ದಾರೆ.
ನನಗೆ ಕೇಳಲಾಗಿರುವ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ
ಈ ಕುರಿತು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸೋನು(Sonu Sood), "ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ. ಇನ್ನೂ, ತೆರಿಗೆ ಅಧಿಕಾರಿಗಳು ಸತತ 4 ದಿನಗಳ ಕಾಲ ನನ್ನನ್ನು ಪ್ರಶ್ನಿಸಿದ್ದಾರೆ. ಆ ವಿಚಾರಣೆಯ ವೇಳೆ ಅವರು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ನಾನು ಅವರಿಗೆ ಸರಿಯಾದ ಉತ್ತರಗಳನ್ನು ನೀಡಿದ್ದೇನೆ, ಅವರಿಗೆ ಬೇಕಾದ ದಾಖಲೆಗಳನ್ನು ನಾನು ಒದಗಿಸಿದ್ದೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ-'ಮರ್ದ್ ಕಿ ಬಾಡಿ ವಾಲಿ' ಎಂದು ಟ್ರೋಲ್ ಮಾಡಿದ್ದಕ್ಕೆ ನಟಿ ತಪ್ಸಿ ನೀಡಿದ ಪ್ರತಿಕ್ರಿಯೆ ಏನು ಗೊತ್ತೇ?
ಎರಡು ಬಾರಿ ರಾಜ್ಯಸಭಾ ಸದಸ್ಯತ್ವದ ಆಫರ್ ಬಂದಿದೆ
ಈ ಕುರಿತು ಹೇಳಿಕೆ ನೀಡಿರುವ ಸೋನು ಸೂದ್, 'ನನಗೆ ಎರಡು ಬಾರಿ ಎರಡು ವಿಭಿನ್ನ ಪಕ್ಷಗಳ ವತಿಯಿಂದ ರಾಜ್ಯಸಭಾ ಸದಸ್ಯತ್ವದ ಆಫರ್ ಬಂದಿದೆ. ನಮಗೆ ಕೇಳಲಾಗಿರುವ ಪ್ರಶ್ನೆಗಳಿಗೆ ನಾವು ದಾಖಲೆಗಳನ್ನು ಒದಗಿಸುವ ಮೂಲಕ ಉತ್ತರಿಸಿದ್ದೇವೆ. ಅದು ನನ್ನ ಕರ್ತವ್ಯ ಕೂಡ ಹೌದು' ಎಂದು ಹೇಳಿದ್ದಾರೆ.
ಇದನ್ನೂ ಓದಿ-Pornography films case: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಜಾಮೀನು
ರಾಜಕೀಯ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ ಸೋನು ಹೇಳಿದ್ದೇನು?
ಈ ದಾಳಿಯ ಹಿಂದೆ 'ರಾಜಕೀಯ ಉದ್ದೇಶ' ಎಂಬ ಪ್ರಶ್ನೆಗೆ ಉತ್ತರಿಸಿರುವ ಸೋನು ಸೂದ್, ನಾನು ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಮತ್ತು ನಾನು ಪ್ರಸ್ತುತ ಶಿಕ್ಷಣದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದೇನೆ . ನಾನು ಮುಕ್ತ ಮನಸ್ಸಿನವನು. ಯಾವುದೇ ರಾಜ್ಯವು ನನಗೆ ಕರೆ ಮಾಡಿದಾಗ, ನಾನು ಖಂಡಿತವಾಗಿಯೂ ಅವರಿಗೆ ಸಹಾಯ ಮಾಡುತ್ತೇನೆ. ಏನಾಯಿತು ಎಂದು ನಾನು ವಿಚಲಿತನಾಗುವುದಿಲ್ಲ ಎಂದು ಸೋನು ಹೇಳಿದ್ದಾರೆ. ಅಥವಾ ನಾನು ನಿಲ್ಲಿಸಲು ಹೋಗುತ್ತಿಲ್ಲ, ಕೆಲಸ ಮುಂದುವರಿಯುತ್ತದೆ. ಇನ್ನೂ ಮೈಲುಗಳಷ್ಟು ದೂರ ಸಾಗಬೇಕಿದೆ. ಮತ್ತು ನಾನು ಜನರಿಗೆ ಸಹಾಯ ಮಾಡಲು ಹಗಲು ರಾತ್ರಿ ಕೆಲಸ ಮಾಡುತ್ತೇನೆ ಎಂದು ಸೋನು ಹೇಳಿದ್ದಾರೆ.
ಇದನ್ನೂ ಓದಿ-ತನ್ನ ಪೋಷಕರ ವಿರುದ್ಧವೇ ತಮಿಳು ಸೂಪರ್ ಸ್ಟಾರ್ ವಿಜಯ್ ಕೋರ್ಟ್ ಮೊರೆ ಹೋಗಿದ್ದೇಕೆ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ