Salman khan : ಇತ್ತೀಚೆಗಷ್ಟೆ ಸಲ್ಮಾನ್‌ ಕಾನ್‌ ಅವರು ತಮ್ಮ 59 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ, ಇಂದಿಗೂ ಕೂಡ ಅವರ ಅಭಿಮಾನಿಗಳನ್ನು ಕಾಡುವುದು ಒಂದೆ ಪ್ರಶ್ನೆ ನಟ ಸಲ್ಮಾನ್‌ ಖಾನ್‌ ಯಾವಾಗ ಮದುವೆಯಾಗುತ್ತಾರೆ ಎಂದು. 


COMMERCIAL BREAK
SCROLL TO CONTINUE READING

ನಟ ಸಲ್ಮಾನ್‌ ಖಾನ್‌ ಅವರ ಹೆಸರು ಹಲವಾರು ನಟಿಯರೊಂದಿಗೆ ತಳುಕು ಹಾಕಿಕೊಂಡಿದೆ. ಆದರೆ, ನಟ ಇಂದಿಗೂ ಮದುವೆಯಾಗದೆ ಉಳಿದಿದ್ದಾರೆ. ಹಾಗಂತಾ ಸಲ್ಮಾನ್‌ ಖಾನ್‌ ಅವರ ಮದುವೆ ಈ ಮುಂಚೆ ನಿಶ್ಚಯವಾಗಿಲ್ಲ ಎಂದು ಅರ್ಥವಲ್ಲ. ನಟ ಸಲ್ಮಾನ್‌ ಖಾನ್‌ ಅವರ ಮದುವೆ ಒಂದು ಕಾಲದಲ್ಲಿ ನಟಿ ಹಾಗೂ ಮಾಜಿ ಮಿಸ್‌ ಇಂಡಿಯಾ ಸಂಗೀತಾ ಬಿಜಲಾನಿ ಅವರೊಂದಿಗೆ ನಿಶ್ಚಯವಾಗಿತ್ತು. 90ರ ದಶಕದಲ್ಲಿ ಆರಂಭವಾದ ಇವರ ಪ್ರೇಮಕಥೆ ವಿವಾಹದ ವರೆಗೂ ಬಂದು ನಿಂತಿತ್ತು. 


ಇತ್ತೀಚೆಗೆ ಸಂಗೀತಾ ಬಿಜಲಾನಿ ಅವರು ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು, ಇದರಲ್ಲಿನ ಸ್ಪರ್ಧಿ ಸಂಗೀತಾ ಅವರನ್ನು, "ನಿಮ್ಮ ಹಾಗೂ ಸಲ್ಮಾನ್‌ ಖಾನ್‌ ಅವರ ಮದುವೆ ಕಾರ್ಡ್‌ಗಲು ರೆಡಿಯಾಗಿತ್ತಂತೆ ಅದು ನಿಜವೇ?" ಎಂದು ಪ್ರಶ್ನೆ ಕೇಳಿದ್ದರು, ಇದನ್ನು ಕೇಳಿ ಸ್ಥಳದಲ್ಲಿದ್ದವರೆಲ್ಲಾ ಅಚ್ಚರಿಗೊಂಡಿದ್ದರು. ನಂತರ ಇದಕ್ಕೆ ಉತ್ತರಿಸಿದ ಸಂಗೀತಾ ಅವರು " ಹೌದು, ಅದು ಸುಳ್ಳಂತೂ ಅಲ್ಲ" ಎಂದು ಉತ್ತರಿಸುವ ಮೂಲಕ ಹಲವು ದಿನಗಲಿಂದ ಅಭಿಮಾನಿಗಳಿಗಿದ್ದ ಪ್ರಶ್ನೆಗೆ ಕ್ಲಾರಿಟಿ ಕೊಟ್ಟಿದ್ದರು. 


ಸಲ್ಮಾನ್ ಖಾನ್ ಮತ್ತು ಸಂಗೀತಾ ಬಿಜಲಾನಿ 1986 ರಲ್ಲಿ ಪ್ರೀತಿಸಲು ಆರಂಭಿಸಿದ್ದರು. ವರ್ಷಗಳ ಕಾಲ ಜೊತೆ ಇದ್ದ ನಂತರ ಈ ಜೋಡಿ ಮದುವೆಯಾಗಲು ನಿರ್ಧಾರ ಮಾಡಿದ್ದರು. ಮೇ 27, 1994 ರಂದು ಈ ಜೋಡಿಯ ಮದುವೆ ನಿಗದಿಯಾಗಿತ್ತು. ಮದುವೆ ಆಮಂತ್ರಣ ಕೂಡ ರೆಡಿಯಾಗಿತ್ತು. ಆದರೆ ನಂತರ ಆದೇನಾಯಿತೋ ಏನೋ, ಸಂಗೀತಾ ಹಾಗೂ ಸಲ್ಮಾನ್‌ ಖಾನ್‌ ಹಸೆಮಣೆ ಏರಲೇ ಇಲ್ಲ. ಮದುವೆಗೆ ಒಂದು ತಿಂಗಳ ಮೊದಲು ಸಲ್ಮಾನ್ ಖಾನ್‌ ನಟಿ ಸೋಮಿ ಅಲಿ ಖಾನ್‌ ಅವರ ಜೊತೆ ಅಫೇರ್‌ ಇಟ್ಟುಕೊಂಡಿದ್ದ ಕಾರಣ ಸಂಗೀತಾ ಬಿಜಲಾನಿ ಅವರು ಸಲ್ಮಾನ್‌ ಖಾನ್‌ ಅವರೊಂದಿಗೆ ಮದುವೆ ಮುರಿದುಕೊಂಡಿದ್ದರು. 


ಸಲ್ಮಾನ್‌ ಖಾನ್‌ ಅವರು ಸೋಮಿಯವರನ್ನು ತಮ್ಮ ಕೋಣೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಾಣಿಸಿಕೊಂಡಿದ್ದು. ಇದನ್ನು ನೋಡಿದ ಸಂಗೀತಾ ಅವರು ಸಲ್ಮಾನ್‌ ಖಾನ್‌ ಅವರ ಜೊತೆ ಜಗಳ ಮಾಡಿದ್ದರು. ಜಗಳವೆಲ್ಲಾ ಆದ ನಂತರ ಸಲ್ಮಾನ್‌ ಖಾನ್‌ ಬದಲಾಗುತ್ತಾರೆ ಎಂದು ಸಂಗೀತಾ ಅವರು ಭಾವಿಸಿದ್ದರು. ಇತ್ತ ಸಂಗೀತಾ ಅವರೊಂದಿಗೆ ಜಗಳ ವಾಡಿಕೊಳ್ಳುತ್ತಿದ್ದಂತೆ ಸಲ್ಮಾನ‌ ಕಾನ್‌ ನೇರವಾಗಿೋಮಿ ಅವರ ಬಳಿ ಹೋಗಿ ಎಲ್ಲವನ್ನುಹೇಳಿಕೊಂಡಿದ್ದು, ಇವರಿಬ್ಬರ ವಿಘಟನೆಗೆ ಕಾರಣವಾಯಿತು ಎಂದು ಸಂದರ್ಶನವೊಂದರಲ್ಲಿ ಸಂಗೀತಾ ಅವರು ಹೇಳಿಕೊಂಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.