ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮಹಾರಾಷ್ಟ್ರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಈ ಸಂಬಂಧ ದೆಹಲಿಯ ತಿಹಾರ್ ಜೈಲಿನಲ್ಲಿರುವ ಕುಖ್ಯಾತ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ವಿಚಾರಣೆಗಾಗಿ ಪುಣೆ ಗ್ರಾಮಾಂತರ ಪೊಲೀಸರು ದೆಹಲಿಗೆ ತಲುಪಿದ್ದಾರೆ.


COMMERCIAL BREAK
SCROLL TO CONTINUE READING

ಲಾರೆನ್ಸ್ ಬಿಷ್ಣೋಯ್ ವಿಚಾರಣೆ  


ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಪತ್ರ ಬಂದ ಹಿನ್ನೆಲೆ ಮಹಾರಾಷ್ಟ್ರ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಸಲ್ಮಾನ್ ಜೊತೆಗೆ ಅವರ ಮನೆಯ ಹೊರಗೂ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಇದೆಲ್ಲದರ ನಡುವೆ ಸಲ್ಮಾನ್ ಖಾನ್‍ಗೆ ಬೆದರಿಕೆ ಪತ್ರ ಕಳುಹಿಸಿದವರನ್ನು ಪೊಲೀಸರು ಪತ್ತೆ ಮಾಡಿದ್ದಾರೆಂಬ ದೊಡ್ಡ ಸುದ್ದಿ ಹೊರಬಿದ್ದಿದೆ.


ಇದನ್ನೂ ಓದಿ: ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು 9000 ರೂ.ಮೌಲ್ಯದ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದ ಈ ನಟಿ..!


ಪೊಲೀಸರಿಂದ ಪ್ರಮುಖ ಮಾಹಿತಿ ಬಹಿರಂಗ 


ಸಲ್ಮಾನ್ ಖಾನ್‍ಗೆ ಬೆದರಿಕೆ ಹಾಕಲು ಮೂವರು ಮುಂಬೈಗೆ ಬಂದಿದ್ದರು. ಅಲ್ಲಿ ಸೌರಭ್ ಮಹಾಕಲ್ ಅವರನ್ನು ಭೇಟಿಯಾಗಿದ್ದರು. ಈ ಸಂಬಂಧ ಮಹಾಕಲ್ ಅವರನ್ನು ಮುಂಬೈನ ಕ್ರೈಂ ಬ್ರಾಂಚ್ ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಕೇವಲ ಪ್ರಚಾರಕ್ಕಾಗಿ ಸಲ್ಮಾನ್ ಖಾನ್‌ಗೆ ಗ್ಯಾಂಗ್ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದ ಮಹಾಕಲ್, ವಿಚಾರಣೆ ವೇಳೆ ಎಲ್ಲ ವಿವರಗಳನ್ನು ನೀಡಿದ್ದಾನೆ. ಇದೇ ವೇಳೆ ಬೆದರಿಕೆ ಪತ್ರ ನೀಡಿದವರನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ.


ಹಣಕ್ಕಾಗಿ ತಂದೆ-ಮಗನಿಗೆ ಬೆದರಿಕೆ


ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಈ ಮೂವರು ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರವನ್ನು ಕಳುಹಿಸಿದ್ದರು. ಗ್ಯಾಂಗ್‌ಸ್ಟರ್ ವಿಕ್ರಮ್ ಬ್ರಾರ್ ಕೂಡ ಸಂಚಿನಲ್ಲಿ ಭಾಗಿಯಾಗಿದ್ದು, ಬೆದರಿಕೆ ಹಾಕುವುದು ಅವರ ಉದ್ದೇಶವಾಗಿತ್ತು ಎಂಬುದು ಈ ಪ್ರಕರಣದ ತನಿಖೆಯಿಂದ ಸ್ಪಷ್ಟವಾಗಿದೆ. ಜೀವ ಬೆದರಿಕೆ ಹಾಕುವ ಮೂಲಕ ಹಣ ಪಡೆದುಕೊಳ್ಳುವುದು ಆರೋಪಿಗಳ ಉದ್ದೇಶವಾಗಿತ್ತು ಎಂದು ತಿಳಿದುಬಂದಿದೆ.  


ಇದನ್ನೂ ಓದಿ: ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಕ್ರಿಕೆಟರ್‌ ಬಟ್ಲರ್..!‌


ವಿಕ್ರಮ್ ಬ್ರಾರ್ ಯಾರು?


ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪತ್ರದ ಹಿಂದಿನ ಮಾಸ್ಟರ್‌ಮೈಂಡ್ ವಿಕ್ರಮಜಿತ್ ಸಿಂಗ್ ಬ್ರಾರ್. ಈ ರಾಜಸ್ಥಾನದ ಕುಖ್ಯಾತ ದರೋಡೆಕೋರ ಆನಂದ್‌ಪಾಲ್‌ಗೆ ನಿಕಟನಾಗಿದ್ದ. ಆದರೆ, ಆನಂದಪಾಲ್‌ನ ಎನ್‌ಕೌಂಟರ್ ನಂತರ ಆತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ್ದ ಎಂದು ತಿಳಿದುಬಂದಿದೆ.


ಸಲೀಂ ಖಾನ್‍ಗೆ ಜೀವ ಬೆದರಿಕೆ ಪತ್ರ   


ರಾಜಸ್ಥಾನದ ಜಲೋರ್ ಜಿಲ್ಲೆಯಿಂದ ಬಂದಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮೂವರು ಸದಸ್ಯರಲ್ಲಿ ಒಬ್ಬ ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಬೆಳಗ್ಗೆ ವಾಕಿಂಗ್‍ ಬಳಿಕ ಬೆಂಚ್ ಮೇಲೆ ಕುಳಿತಿದ್ದ ಸಲೀಂ ಖಾನ್‌ಗೆ ಬೆದರಿಕೆ ಪತ್ರ ನೀಡಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಮಹಾಕಲ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಪಂಜಾಬಿನ ಖ್ಯಾತ ಸಿಂಗರ್ ಸಿಧು ಮೂಸೆವಾಲಾರನ್ನು ಹತ್ಯೆ ಮಾಡಿದಂತೆ ಸಲೀಂ ಮತ್ತು ಸಲ್ಮಾನ್ ಖಾನ್‍ರನ್ನು ಹತ್ಯೆ ಮಾಡುವುದಾಗಿ ಆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಬೆದರಿಕೆ ಪತ್ರದಲ್ಲಿ ಆರೋಪಿಗಳು ‘GB.' ಮತ್ತು LB ಎಂಬ ಸಿಕ್ರೇಟ್ ಪದಗಳನ್ನು ಬಳಸಿದ್ದರು. ಈ ಪತ್ರವನ್ನು ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಬರೆದಿದ್ದಾರೆ ಅನ್ನೋದು ಈ ಪದಗಳಿಂದ ತಿಳಿದುಬಂದಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.