Salman Khan: ಸಲ್ಮಾನ್ ಖಾನ್ 2800 ಕೋಟಿ ಒಡೆಯನಾದ್ರೂ ಹರಿದ ಬೂಟು ಧರಿಸೋದೇಕೆ?
Salman Khan: ಸಲ್ಮಾನ್ ಖಾನ್ ಅವರ ಸರಳ ಜೀವನಶೈಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ ಸೆಟ್ನಲ್ಲಿ ಹರಿದ ಬೂಟುಗಳನ್ನು ಧರಿಸಿ ಸಲ್ಮಾನ್ ಸೆಟ್ಗೆ ಬರುತ್ತಿರುವುದನ್ನು ಸಹ ನಟರು ಬಹಿರಂಗ ಪಡಿಸಿದ್ದಾರೆ.
Salman Khan: ಸಲ್ಮಾನ್ ಖಾನ್ ಬಾಲಿವುಡ್ನ ಶ್ರೀಮಂತ ನಟರಲ್ಲಿ ಒಬ್ಬರು, ಆದರೆ ಅವರ ಜೀವನಶೈಲಿಯ ಸುದ್ದಿ ಜನರನ್ನು ಆಶ್ಚರ್ಯಗೊಳಿಸುತ್ತದೆ. ತನ್ನ ಹೆತ್ತವರೊಂದಿಗೆ ಎರಡು ಕೋಣೆಗಳ ಸಣ್ಣ ಫ್ಲಾಟ್ನಲ್ಲಿ ವಾಸಿಸುತ್ತಾರೆ. ಸರಳವಾದ ಆಹಾರವನ್ನು ಸೇವಿಸಿ, ಸೈಕಲ್ನಲ್ಲಿ ತಿರುಗಾಡುತ್ತಾರೆ. ಅವರ ದಾನದ ಸುದ್ದಿಯೂ ಕಾಲಕಾಲಕ್ಕೆ ಮುನ್ನೆಲೆಗೆ ಬರುತ್ತವೆ. ಕಳೆದ ಮೂರು ದಶಕಗಳಲ್ಲಿ ಸಲ್ಮಾನ್ ಸಾಕಷ್ಟು ಗಳಿಸಿದ್ದಾರೆ ಮತ್ತು ವರದಿಗಳ ಪ್ರಕಾರ, ಇಂದು ಅವರು 2800 ಕೋಟಿ ರೂಪಾಯಿಯ ಒಡೆಯ. ಹೀಗಿದ್ದರೂ ಹರಿದ ಶೂ ಹಾಕಿಕೊಂಡು ಚಿತ್ರದ ಶೂಟಿಂಗ್ ಸೆಟ್ ಗೆ ಬಂದರೆ ಯಾರಿಗಾದರೂ ಅಚ್ಚರಿಯಾಗುವುದು ಸಹಜ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಸಾಲೆ ದೋಸೆ ಸವಿದ ವಿರುಷ್ಕಾ! ಇದರ ಬೆಲೆ ಎಷ್ಟು ಗೊತ್ತಾ?
ಇತ್ತೀಚೆಗೆ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದಲ್ಲಿ ಅವರ ಜೊತೆ ಕೆಲಸ ಮಾಡಿದ ಇಬ್ಬರು ನಟರು ಈ ರಹಸ್ಯವನ್ನು ಬಹಿರಂಗಪಡಿದ್ದಾರೆ. ಈ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿರುವ ಪಾಲಕ್ ತಿವಾರಿ ಮತ್ತು ಜಸ್ಸಿ ಗಿಲ್ ತಮ್ಮ ಮಾಧ್ಯಮ ಸಂದರ್ಶನಗಳಲ್ಲಿ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸೆಟ್ಗಳಲ್ಲಿ ಹರಿದ ಬೂಟುಗಳನ್ನು ಧರಿಸುತ್ತಿದ್ದರು ಎಂದು ಹೇಳಿದ್ದಾರೆ. ಕೋಟಿಗಟ್ಟಲೆ ಹಣವಿದ್ದರೂ ಸಲ್ಮಾನ್ ಖಾನ್ ತುಂಬಾ ಸರಳವಾದ ಜೀವನ ನಡೆದುತ್ತಾರೆ. ಅವರನ್ನು ನೋಡಿದಾಗ ಅವರೇ ಚಿತ್ರದ ನಿರ್ಮಾಪಕರು ಎಂದು ಅನಿಸದೇ ಇದ್ದದ್ದು ಆಶ್ಚರ್ಯವಾಗಿತ್ತು. ಪಾಲಕ್ ತಿವಾರಿ ಅವರು ತಮ್ಮ ಸಂದರ್ಶನದಲ್ಲಿ ಭಾಯಿಜಾನ್ಗೆ ಹರಿದ ಬೂಟುಗಳನ್ನು ಧರಿಸಲು ಕಾರಣವನ್ನು ಕೇಳಿದಾಗ, ಇದು ನನಗೆ ಅತ್ಯಂತ ಕಂಫರ್ಟ್ ಕೊಡುವ ಶೂ ಎಂದು ಸಲ್ಮಾನ್ ಉತ್ತರಿಸಿದರು. ಇಷ್ಟೊಂದು ಸರಳ ಜೀವಿ ಅವರು.
ಸಲ್ಮಾನ್ ಅವರಿಗೆ ಸ್ಟೈಲ್ಗಿಂತ ಕಂಫರ್ಟ್ ಮುಖ್ಯ ಎಂದಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿ ಅವರ ಚಿತ್ರವು ಮೊದಲ ದಿನ ವಿಶೇಷ ಕಲೆಕ್ಷನ್ ಮಾಡಲು ಸಾಧ್ಯವಾಗದಿದ್ದರೂ, ಹಿಂದಿ ಹೃದಯಭಾಗದ ಕೆಲವು ಪ್ರದೇಶಗಳಲ್ಲಿ ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಉತ್ತಮ ಪ್ರದರ್ಶನ ಕಂಡಿದೆ. ಯುಪಿ, ಬಿಹಾರ, ರಾಜಸ್ಥಾನ ಸೇರಿದಂತೆ ಆಂಧ್ರದಲ್ಲಿ ಚಿತ್ರದ ಕಲೆಕ್ಷನ್ ಮಹಾನಗರಗಳಿಗಿಂತ ಉತ್ತಮವಾಗಿದೆ. ಆದರೆ, ಈ ಬಾರಿ ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಚಿತ್ರದ ಓಪನಿಂಗ್ ನಿರೀಕ್ಷೆಗಿಂತ ಕಡಿಮೆಯಾಗಿದೆ.
ಇದನ್ನೂ ಓದಿ: ಬಾಲಯ್ಯ ಧರಿಸುವ ವಿಗ್ ಬೆಲೆ ನಿಮ್ಗೆ ಗೊತ್ತಾ..! ರೇಟ್ ಕೇಳಿದ್ರೆ ಹಾರ್ಟ್ ಅಟ್ಯಾಕ್ ಬರುತ್ತೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.