ಮುಂಬಯಿ : ಸಲ್ಮಾನ್ ಖಾನ್ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೇ ಹೆಸರು ಪಡೆದವರು.ಸಲ್ಮಾನ್ ಖಾನ್ ಗೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎದುರಾಗುವ ಪ್ರಶ್ನೆ ಮದುವೆ ಯಾವಾಗ? ಪ್ರತಿ ಬಾರಿ ಈ ಪ್ರಶ್ನೆ ಎದುರಾದಾಗಲೂ  ಸಲ್ಮಾನ್ ನಕ್ಕು ಆ ಪ್ರಶ್ನೆಯಿಂದ ಜಾರಿಕೊಳ್ಳುತ್ತಾರೆ. 


COMMERCIAL BREAK
SCROLL TO CONTINUE READING

ಇನ್ನೂ ಮದುವೆಯಾಗಿಲ್ಲ ಎಂದರೆ ಸಲ್ಮಾನ್ ಗೆ ಮದುವೆ ಮೇಲೆ ಆಸಕ್ತಿ ಇಲ್ಲ ಎಂದಲ್ಲ. ಸಲ್ಮಾನ್ ಗರ್ಲ್ ಫ್ರೆಂಡ್ಸ್ ಗಳ ಪಟ್ಟಿ ಬಹಳ ದೊಡ್ಡದಿದೆ.ಖ್ಯಾತ ನಟಿಯರೊಂದಿಗೆ ಸಲ್ಮಾನ್ ಹೆಸರು ಥಳಕು ಹಾಕಿಕೊಂಡಿದೆ. ಕೆಲವು ನಟಿಯರ ಜೊತೆ ಇನ್ನೇನು ಮದುವೆ ಪಕ್ಕಾ ಎನ್ನುವ ಮಾತು ಕೂಡಾ ಬಾಲಿವುಡ್ ಅಂಗಳದಲ್ಲಿ ಜೋರಾಗಿಯೇ ಕೇಳಿಬಂದಿತ್ತು.ಇನ್ನೊಂದು ಮೂಲದ ಪ್ರಕಾರ ಒಂದು ಕಾಲದಲ್ಲಿ ಸಲ್ಮಾನ ಮದುವೆಯ ಆಮಂತ್ರಣ ಪತ್ರಿಕೆ ಕೂಡಾ ಪ್ರಿಂಟ್ ಮಾಡಿಸಿದ್ದರಂತೆ.ಆದರೆ ಕೊನೆ ಘಳಿಗೆಯಲ್ಲಿ ಮದುವೆ ನಿರ್ಧಾರ ಬದಲಾಗಿದೆ.ಈಗ ವಯಸ್ಸು 58 ಆದರೂ ಗರ್ಲ್ ಫ್ರೆಂಡ್ಸ್, ಲವರ್ ಗರ್ಲ್ಸ್ ಇದ್ದರೂ ಸಲ್ಮಾನ್ ಇಂದಿಗೂ ಒಂಟಿ.


ಇದನ್ನೂ ಓದಿ : Actress Sangeetha Krish: ಕಿಚ್ಚ ಸುದೀಪ್‌ ʼನಲ್ಲʼ ಸಿನಿಮಾ ನಟಿ ಸಂಗೀತಾ ಪತಿ ಕೂಡ ಸ್ಟಾರ್‌ ಸೆಲೆಬ್ರಿಟಿ! ಯಾರು ಗೊತ್ತೇ?


ಕಟಕಟೆಯಲ್ಲಿ ಹೊರ ಬಂದ ಸತ್ಯ : 
ತಾನು ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದಕ್ಕೆ ಖುದ್ದು ಸಲ್ಮಾನ್ ಖಾಸಗಿ ವಾಹಿನಿಯೊಂದರ ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಉತ್ತರಿಸಿದ್ದಾರೆ. ಮದುವೆಯಾಗುವ ಎಲ್ಲಾ ಇರಾದೆ ಇತ್ತು.ಆದರೆ ಯಾಕೋ ಮದುವೆಯಾಗಬೇಕು  ಅಂದುಕೊಂಡವರೆಲ್ಲಾ ಒಬ್ಬೊಬ್ಬರೇ ಬಿಟ್ಟು ಹೋಗುವುದಕ್ಕೆ ಆರಂಭಿಸಿದರು. ಮೊದಲನೇ ಹುಡುಗಿ ಹೋದಾಗ ತಪ್ಪು ಆಕೆಯದ್ದೇ ಅಂದುಕೊಂಡೆ. ಎರಡನೇ ಹುಡುಗಿ ಬಿಟ್ಟು ಹೋದಾಗಲೂ ಕೊರತೆ ಇರುವುದು ಆಕೆಯಲ್ಲಿಯೇ ಅಂದುಕೊಂಡೆ. ಮೂರನೆ, ನಾಲ್ಕನೇ ಹುಡುಗಿ ಕೂಡಾ ಹೀಗೆ ಮಾಡಿದಾಗ ಯೋಚನೆ 60 *40 ಕ್ಕೆ ಬಂತು. ಆದರೆ ಇದು ಮುಂದುವರೆದುಕೊಂಡು ಹೋದಾಗ ಕೊರತೆ ಇರುವುದು ನನ್ನಲ್ಲಿಯೇ ಎನ್ನುವುದು ಸಾಬೀತಾಯಿತು ಎಂದಿದ್ದಾರೆ. 


ಬಹುಶಃ ಹುಡುಗಿಯರ ನಿರೀಕ್ಷೆಯನ್ನು ನಾನು ಮುಟ್ಟುತ್ತಿಲ್ಲ.ಅವರು ಬಯಸುವ ಜೀವನ ನಾನು ಕೊಡಬಲ್ಲೇನಾ ಎನ್ನುವ ಬಗ್ಗೆ ನನಗೆ ಅಂಜಿಕೆ ಇದೆ.ಹಾಗಾಗಿ ನಾನೇ ಅವರ ನೀರೀಕ್ಷೆಯ ಮಟ್ಟ  ತಲುಪಿಲ್ಲ ಎನ್ನುವ ಸತ್ಯವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಯಾವ ಅಳುಕೂ ಇಲ್ಲದೆ ಸಲ್ಮಾನ್ ಒಪ್ಪಿಕೊಂಡಿದ್ದಾರೆ.  


 ಇದನ್ನೂ ಓದಿ : ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡಲಿದ್ದಾರೆ ಸಲ್ಮಾನ್‌ ಖಾನ್‌ ಮಾಜಿ ಗೆಳತಿ! ಐಶ್ವರ್ಯ ರೈ ಅಥವಾ ಕತ್ರಿನಾ ಕೈಫ್?‌


ಇದರ ಜೊತೆಗೆ ನನಗೆ ಮದುವೆಯಾಗದಿದ್ದರೂ ಮಗು ಹೊಂದುವ ಆಸೆ ಇತ್ತು.ಆದರೆ ಬದಲಾದ ಕಾನೂನು ವ್ಯವಸ್ಥೆಯಿಂದ ಅದು ಸ್ವಲ್ಪ ಕಷ್ಟವಾಯಿತು.ಮಕ್ಕಳೆಂದರೆ ನನಗೆ ತುಂಬಾ ಇಷ್ಟ.ಆದರೆ ಏನು ಮಾಡುವುದು ಈಗ ಮಗು ಬೇಕು ಎಂದರೆ ತಾಯಿ ಕೂಡಾ ಜೊತೆಯಲ್ಲಿ ಬರುತ್ತಾಳೆ ಎಂದು ಹೇಳುತ್ತಾ ಜೋರಾಗಿ ನಕ್ಕಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ