Actress Sangeetha Krish: ಕಿಚ್ಚ ಸುದೀಪ್‌ ʼನಲ್ಲʼ ಸಿನಿಮಾ ನಟಿ ಸಂಗೀತಾ ಪತಿ ಕೂಡ ಸ್ಟಾರ್‌ ಸೆಲೆಬ್ರಿಟಿ! ಯಾರು ಗೊತ್ತೇ?

kichcha Sudeep Nalla Movie Actress Sangeetha: ಸಂಗೀತಾ 90ರ ದಶಕದಲ್ಲಿ ತಮಿಳು, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿದ್ದರು. ಸದ್ಯ ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ನಟಿಯ ಕೆಲವು ವೈಯಕ್ತಿಕ ಜೀವನದ ವಿಚಾರಗಳನ್ನು ತಿಳದುಕೊಳ್ಳೋಣ.. 
 

1 /6

ನಟಿ ಸಂಗೀತಾ 1997 ರಲ್ಲಿ ಬಿಡುಗಡೆಯಾದ ಮಲಯಾಳಂ ಚಿತ್ರ ಗಂಗೋತ್ರಿ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. ಅದರ ನಂತರ, ಸಂಗೀತಾ ಕಾಲಿವುಡ್‌ಗೆ 1998 ರಲ್ಲಿ ಎಂಟ್ರಿ ಕೊಟ್ಟರು.  

2 /6

ಒಟ್ಟಾರೆ ನಟಿ ಸಂಗೀತಾ ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿದ್ದ ನಟಿಯಾಗಿದ್ದರು.. ವಾವೂರ್, ಥನಮ್, ನೇಪಾಳಿ ಮುಂತಾದ ವಿಭಿನ್ನ ಕಥಾಹಂದರವುಳ್ಳ ಚಿತ್ರಗಳಲ್ಲಿ ಸಂಗೀತಾ ನಟಿಸಿದ್ದಾರೆ.  

3 /6

ನಟಿ ಸಂಗೀತಾ ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿಮನಯದ ನಲ್ಲ ಸಿನಿಮಾದಲ್ಲಿ ನಟಿಸಿದ್ದರು.. ಮಾಡಿದ್ದು ಬೆರಳೆಣಿಕೆ ಸಿನಿಮಾವಾದರೂ ಕನ್ನಡಿಗರಿಗೆ ಇವರೆಂದರೇ ಅಚ್ಚುಮೆಚ್ಚು..  

4 /6

ನಟಿ ಸಂಗೀತಾ ಅವರ ಅಭಿನಯಕ್ಕೆ ಪ್ರಶಂಸೆಗಳು ಮತ್ತು ಅತ್ಯುತ್ತಮ ಪೋಷಕ ನಟಿಗಾಗಿ ತಮಿಳುನಾಡು ಸರ್ಕಾರದಿಂದ ಪ್ರಶಸ್ತಿಯನ್ನು ಪಡೆದರು..  

5 /6

ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದ ಸಂಗೀತಾ, ಗಾಯಕ ಕ್ರಿಶ್ ಅವರನ್ನು ಪ್ರೀತಿಸಿ 2009ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಬ್ಬ ಮಗಳಿದ್ದಾಳೆ. ನಟಿ ವಿಜಯ್ ಅಭಿನಯದ ವಾರಿಸು ಚಿತ್ರದಲ್ಲಿ ಶ್ರೀಕಾಂತ್ ಅವರ ಪತ್ನಿಯಾಗಿ ಕೊನೆಯದಾಗಿ ನಟಿಸಿದ್ದರು.  

6 /6

ಕೊಂಚ ಸಿನಿಮಾಗಳಿಂದ ದೂರವಿರುವ ನಟಿ ಸಂಗೀತಾ ನೀಡಿರುವ ಸಂದರ್ಶನದಲ್ಲಿ ನನಗೆ ತಮಿಳು ಅಷ್ಟೂ ಇಷ್ಟವಿಲ್ಲ, ತೆಲುಗು ಮಾತ್ರ ಇಷ್ಟ. ಸದ್ಯ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಇತ್ತೀಚೆಗೆ ಕಾಮೆಂಟ್‌ ಮಾಡಿದ್ದಾರೆ.. ಸದ್ಯ ಈ ಮಾತು ತಮಿಳು ಅಭಿಮಾನಿಗಳನ್ನು ಕೆರಳಿಸಿದೆ..