#ArabicKuthuChallenge:ವಿಮಾನ ನಿಲ್ದಾಣದಲ್ಲಿ `ಹಲಮಿಟಿ ಹಬಿಬೋ` ಹಾಡಿಗೆ ಸಮಂತಾ ಸ್ಟೆಪ್ಸ್.!
Samantha dance: ನಟಿ ಸಮಂತಾ ರುತ್ ಪ್ರಭು ಅವರು ವಿಮಾನ ನಿಲ್ದಾಣದಲ್ಲಿ ನೃತ್ಯ ಮಾಡಿದ್ದಾರೆ. #ArabicKuthuChallenge ಮೂಲಕ ಅಭಿಮಾನಿಗಳು ತಮ್ಮದೇ ಆದ ನೃತ್ಯ ಆವೃತ್ತಿಗಳ ವಿಡಿಯೋಗಳನ್ನು ಮಾಡುವ ಮೂಲಕ ವೈರಲ್ ಆಗಿದೆ.
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಫ್ಯಾಬ್ ಡ್ಯಾನ್ಸರ್ ಆಗಿದ್ದು, ಇತ್ತೀಚೆಗೆ ಸೂಪರ್ ಸಕ್ಸಸ್ ಆದ ಊ ಅಂತವ ಮಾವಾ ಹಾಡಿನ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. Instagram ನಲ್ಲಿ ಅವರ ಇತ್ತೀಚಿನ ಪೋಸ್ಟ್ ಗಳು ಹಲವು ಕಾರಣಗಳಿಗೆ ವೈರಲ್ ಆಗುತ್ತಿವೆ.
ಇದನ್ನೂ ಓದಿ: "ಮದುವೆಯಾಗಲು ನಾನಿನ್ನೂ ಚಿಕ್ಕವಳು" ಎಂದ 'ಪುಷ್ಪ' ಚೆಲುವೆ.. ಸಂಗಾತಿ ಬಗ್ಗೆ ರಶ್ಮಿಕಾ ಹೇಳಿದ್ದು ಹೀಗೆ
ಇದೀಗ ಥಲಪತಿ ವಿಜಯ್ (Thalapathy Vijay) ಮತ್ತು ಪೂಜಾ ಹೆಗ್ಡೆ ಅವರ 'ಹಲಮಿಟಿ ಹಬಿಬೋ' ಹಾಡಿಗೆ ಸಮಂತಾ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರುವ ಸಮಂತಾ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.
ಡೆನಿಮ್ ಜಾಕೆಟ್, ಗ್ರೇ ಬಸ್ಟಿಯರ್ ಮತ್ತು ಕಪ್ಪು ರಿಪ್ಡ್ ಜೀನ್ಸ್ ಧರಿಸಿ, ಸಮಂತಾ ಏರ್ಪೋರ್ಟ್ ಲುಕ್ ಅನ್ನು ರಾಕ್ ಮಾಡಿದ್ದಾರೆ.
'ಬೀಸ್ಟ್' ತಂಡದ #ArabicKuthuChallenge ಕೂಡ ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ತಮ್ಮದೇ ಆದ ನೃತ್ಯ ಆವೃತ್ತಿಗಳ ವಿಡಿಯೋ ಮಾಡಿದ್ದಾರೆ.
'ಬೀಸ್ಟ್' (Beast) ನೆಲ್ಸನ್ ಬರೆದು ನಿರ್ದೇಶಿಸಿದ ತಮಿಳು ಆಕ್ಷನ್-ಥ್ರಿಲ್ಲರ್ ಚಲನಚಿತ್ರವಾಗಿದೆ. ಇದನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಥಲಪತಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ (Pooja Hegde) ನಟಿಸಿದ್ದಾರೆ.
ಇದನ್ನೂ ಓದಿ: 'ಮೇಡ್ ಇನ್ ಚೈನಾ'.. ಇದು ಪ್ರಾಡಕ್ಟ್ ಅಲ್ಲ, ಕನ್ನಡದ ಡಿಫರೆಂಟ್ ಸಿನಿಮಾ
ಪ್ರಮುಖ ಪಾತ್ರಗಳಲ್ಲಿ ಸೆಲ್ವರಾಘವನ್, ಯೋಗಿ ಬಾಬು, ಶೈನ್ ಟಾಮ್ ಚಾಕೊ, ವಿಟಿವಿ ಗಣೇಶ್, ಅಪರ್ಣಾ ದಾಸ್, ಲಿಲ್ಲಿಪುಟ್ ಫರುಕಿ, ಅಂಕುರ್ ಅಜಿತ್ ವಿಕಲ್, ಸತೀಶ್ ಕೃಷ್ಣನ್, ರೆಡಿನ್ ಕಿಂಗ್ಸ್ಲಿ ಮತ್ತು ಜಾರ್ನ್ ಸುರ್ರಾವ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.