ನವದೆಹಲಿ: ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಮಯೋಸಿಟಿಸ್ ಎಂಬ ಆಟೋಇಮ್ಯೂನ್ ಸ್ಥಿತಿಯಿಂದ ಬಳಲುತ್ತಿರುವುದಾಗಿ ನಟಿ ಸಮಂತಾ ತನ್ನ ಇನ್ಸ್ಟಾಗ್ರಾಮ್‍ ಖಾತೆಯಲ್ಲಿ  ಮಾಹಿತಿ ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ತಮ್ಮ ಮುಂಬರುವ ಚಿತ್ರ ‘ಯಶೋದಾ’ ಟ್ರೈಲರ್‍ಗೆ  ಅಗಾಧ ಪ್ರತಿಕ್ರಿಯೆಗೆ ಅಭಿಮಾನಿಗಳಿಗೆ ಸಮಂತಾ ಧನ್ಯವಾದ ತಿಳಿಸಿದ್ದಾರೆ. ‘ಯಶೋದಾ’ ಟ್ರೈಲರ್‍ಗೆ ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ. ನಾನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಪ್ರೀತಿ ಮತ್ತು ಸಂಪರ್ಕದಿಂದ ಖುಷಿಯಾಗಿದೆ. ಇದು ಜೀವನದಲ್ಲಿ ನಾನು ಎದುರಿಸುತ್ತಿರುವ ಅಂತ್ಯವಿಲ್ಲದ ಸವಾಲುಗಳನ್ನು ನಿಭಾಯಿಸಲು ನನಗೆ ಶಕ್ತಿಯನ್ನು ನೀಡುತ್ತದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Samantha Ruth Prabhu: ವಿಚಿತ್ರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ನಟಿ ಸಮಂತಾ: ಭಾವನಾತ್ಮಕ ಪೋಸ್ಟ್ ನಲ್ಲಿ ಹೇಳಿದ್ದೇನು?


ಆಸ್ಪತ್ರೆಯ ಚಿತ್ರವನ್ನು ಹಂಚಿಕೊಂಡಿರುವ ಸಮಂತಾ, ‘ಕೆಲವು ತಿಂಗಳ ಹಿಂದೆ ನನಗೆ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಯಿತು. ಇದರಿಂದ ಮುಕ್ತಿ ಪಡೆದ ನಂತರ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಎದುರು ನೋಡುತ್ತಿದ್ದೆ. ಆದರೆ ಇದು ನಾನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಹೀಗಾಗಿ ಇದರ ಬಗ್ಗೆ ನಿಮ್ಮ ಜೊತೆ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ’ ಅಂತಾ ಹೇಳಿದ್ದಾರೆ.


ಪುನೀತ್‌ ಶಾಶ್ವತ ರಾಯಭಾರಿಯಾಗಲಿ: ಮಕ್ಕಳಿಗೆ ʻಗಂಧದ ಗುಡಿʼ ಉಚಿತ ವೀಕ್ಷಣೆ ಅವಕಾಶಕ್ಕೆ ಎಎಪಿ ಆಗ್ರಹ


ಮೈಯೋಸಿಟಿಸ್ ಎಂದರೇನು..?


ಮೈಯೋಸಿಟಿಸ್ ಅನ್ನು ಸ್ವಯಂ ನಿರೋಧಕ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ದೇಹದ ಸ್ನಾಯುಗಳು ತೀವ್ರವಾಗಿ ಪರಿಣಾಮ ಬೀರುತ್ತವೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ಸ್ನಾಯು ನೋವು, ಆಯಾಸ, ತಿನ್ನಲು ಮತ್ತು ಕುಡಿಯಲು ತೊಂದರೆ ಮತ್ತು ಉಸಿರಾಟದ ತೊಂದರೆ. ಪುರುಷರಿಗಿಂತ ಮಹಿಳೆಯರು ಈ ಕಾಯಿಲೆಗೆ ಹೆಚ್ಚು ಗುರಿಯಾಗುತ್ತಾರೆ ಮತ್ತು ಇದು ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ.


ಮೈಯೋಸಿಟಿಸ್‍ನಲ್ಲಿ ಡರ್ಮಟೊಮಿಯೊಸಿಟಿಸ್, ಇನ್ಕ್ಲೂಷನ್-ದೇಹ, ಜುವೆನೈಲ್ ಮೈಯೋಸಿಟಿಸ್, ಪಾಲಿಮಿಯೊಸಿಟಿಸ್ ಮತ್ತು ಟಾಕ್ಸಿಕ್ ಮೈಯೋಸಿಟಿಸ್ ಎಂಬ 5 ವಿಧಗಳಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ