ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್‌

ಯುವರತ್ನ, ನಗುಮೊಗದ ದೊರೆ ಪುನೀತ್‌ ರಾಜಕುಮರ್‌ ಅವರು ನಮ್ಮಿಂದ ಅಗಲಿ ಇಂದಿಗೆ ಒಂದು ವರ್ಷ ತುಂಬಿದೆ. ದೈಹಿಕವಾಗಿ ಅಪ್ಪು ನಮ್ಮಜೊತೆ ಇಲ್ಲವೆಂದರೂ ಕನ್ನಡಾಭಿಮಾನಿಗಳ ಹೃದಯಲ್ಲಿ ಅಪ್ಪು ಸದಾ ಅಮರ. ಇನ್ನು ಕನ್ನಡ ಕಂದನ ಪುಣ್ಯಸ್ಮರಣೆ ಪ್ರಯುಕ್ತ ಅಶ್ವಿನಿ ಅವರು ಎಲ್ಲರಿಗೂ ಒಂದು ಪತ್ರ ಬರೆದಿದ್ದಾರೆ.

Written by - Krishna N K | Last Updated : Oct 29, 2022, 04:05 PM IST
  • ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್‌
  • ಇಂದು ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ
  • 2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಪುನೀತ್‌ ಅವರು ನಿಧನರಾದರು
ಅಪ್ಪು ʼನೆನಪಿನ ಸಾಗರದಲ್ಲಿ' ಪತ್ರ ಬರೆದ ಅಶ್ವಿನಿ ಪುನೀತ್ ರಾಜ್‌ಕುಮಾರ್‌ title=

ಬೆಂಗಳೂರು : ಯುವರತ್ನ, ನಗುಮೊಗದ ದೊರೆ ಪುನೀತ್‌ ರಾಜಕುಮರ್‌ ಅವರು ನಮ್ಮಿಂದ ಅಗಲಿ ಇಂದಿಗೆ ಒಂದು ವರ್ಷ ತುಂಬಿದೆ. ದೈಹಿಕವಾಗಿ ಅಪ್ಪು ನಮ್ಮ ಜೊತೆ ಇಲ್ಲವೆಂದರೂ ಕನ್ನಡಾಭಿಮಾನಿಗಳ ಹೃದಯಲ್ಲಿ ಅಪ್ಪು ಸದಾ ಅಮರ. ಇನ್ನು ಕನ್ನಡ ಕಂದನ ಪುಣ್ಯಸ್ಮರಣೆ ಪ್ರಯುಕ್ತ ಅಶ್ವಿನಿ ಅವರು ಎಲ್ಲರಿಗೂ ಒಂದು ಪತ್ರ ಬರೆದಿದ್ದಾರೆ.

ಇಂದು ಅಪ್ಪು ಮೊದಲ ವರ್ಷದ ಪುಣ್ಯಸ್ಮರಣೆ. 2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಪುನೀತ್‌ ಅವರು ನಿಧನರಾದರು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸೋಶಿಯಲ್ ಮೀಡಿಯಾದಲ್ಲಿ ʼನೆನಪಿನ ಸಾಗರದಲ್ಲಿʼ ಎಂಬ ಪೋಸ್ಟ್‌ ಹಾಕಿದ್ದಾರೆ. ʼಅಪ್ಪು ಅವರು ನಮ್ಮ ನೆನಪುಗಳಲ್ಲಿ ಮಾತ್ರವಲ್ಲದೆ, ನಮ್ಮ ಆಲೋಚನೆಗಳು, ಹಾಗೂ ನಾವು ಮಾಡುವ ಸತ್ಕಾರ್ಯಗಳಲ್ಲಿಯೂ ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ.

ಇದನ್ನೂ ಓದಿ: Gandhada Gudi : ಅಪ್ಪು ನನಗೆ ಕಾಲ್‌ ಮಾಡೋಕೆ ದೊಡ್ಡ ಬೆಟ್ಟ ಹತ್ತಿದ್ದರು..!

ಅವರ ಕನಸು ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು ನೂರಾರು ಕುಟುಂಬ ಸದಸ್ಯರು, ಅವರ ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿಯೇ ನನಗೆ ದಾರಿ ಮಾಡಿಕೊಟ್ಟಿದೆ ಅಪ್ಪು ಅವರ ಮೇಲೆ ನಿಮ್ಮೆಲ್ಲರಿಗೆ ಇರುವ ಪ್ರೀತಿ ಮತ್ತು ಗೌರವದಿಂದ ಸದಾ ಕಾಲ ಅವರನ್ನು ಜೀವಂತವಾಗಿರಿಸಿದ್ದಕ್ಕೆ ಎಲ್ಲರಿಗೂ ನನ್ನ ಧನ್ಯವಾದಗಳು, ನಿಮ್ಮ ಅಶ್ವಿನಿ ಪುನೀತ್ ರಾಜ್‌ಕುಮಾರ್ ಎಂದು ಅಭಿಮಾನಿಗಳಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

ಇಂದು ಬೆಳಿಗೆ ರಾಜ್‌ ಕುಟುಂಬ ಅಪ್ಪು ಸಮಾಧಿಗೆ ನಮನ ಸಲ್ಲಿಸಲಿದ್ದಾರೆ. ಈ ವೇಳೆ ಗೀತ ನಮನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ನೇತೃತ್ವದಲ್ಲಿ 24 ಗಂಟೆ ಗಾನ ನಮನ ಸಲ್ಲಿಸಲಾಗುತ್ತಿದೆ. ಪುನೀತ್‌ ರಾಜಕುಮಾರ್‌ ಪುಣ್ಯ ಸ್ಮರಣೆಯ ಪ್ರಯುಕ್ತ ಈಗಾಗಲೇ ಕಂಠೀರವ ಸ್ಟುಡಿಯೋ ಹೊರಗೆ 70 ಕ್ಕೂ ಹೆಚ್ಚು ಕಟೌಟ್‌ಗಳನ್ನು ನಿಲ್ಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News