ಅನೈತಿಕ ಸಂಬಂಧದ ಕುರಿತ ವದಂತಿಗಳಿಗೆ ನಟಿ ಸಮಂತಾ ಹೇಳಿದ್ದೇನು ಗೊತ್ತೇ?
ನಟಿ ಸಮಂತಾ ರುತ್ ಪ್ರಭು ಅವರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ, ಮಕ್ಕಳನ್ನು ಬಯಸಲಿಲ್ಲ ಮತ್ತು ಗರ್ಭಪಾತಕ್ಕೆ ಒಳಗಾಗಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯೆಯಾಗಿ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ: ನಟಿ ಸಮಂತಾ ರುತ್ ಪ್ರಭು ಅವರು ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ, ಮಕ್ಕಳನ್ನು ಬಯಸಲಿಲ್ಲ ಮತ್ತು ಗರ್ಭಪಾತಕ್ಕೆ ಒಳಗಾಗಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯೆಯಾಗಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ ವಾರವಷ್ಟೇ ತಮ್ಮ ವಿಚ್ಚೇದನದ ಸಂಗತಿಯನ್ನು ಬಹಿರಂಗಪಡಿಸಿದ್ದ ಸಮಂತಾ (Samantha) ಈಗ ತಮ್ಮ ಕುರಿತಾಗಿ ಹರಡಿರುವ ವದಂತಿಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಈಗ ಅವರು ಇನ್ಸ್ಟಾ ಗ್ರಾಂ ಸ್ಟೋರಿಯಲ್ಲಿ ತಮ್ಮ ಮೇಲಾಗುತ್ತಿರುವ ವೈಯಕ್ತಿಕ ದಾಳಿಗಳು ತಮ್ಮನ್ನು ಎಂದಿಗೂ ಅಲುಗಾಡಿಸಲು ಸಾಧ್ಯವಿಲ್ಲ' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನಕ್ಕೆ ನಾಗಾರ್ಜುನ್ ಹೇಳಿದ್ದೇನು ಗೊತ್ತೇ?
"ವೈಯಕ್ತಿಕ ಬಿಕ್ಕಟ್ಟಿಗೆ ನಿಮ್ಮ ಭಾವನಾತ್ಮಕ ಹೂಡಿಕೆ ನನ್ನನ್ನು ಆವರಿಸಿದೆ. ಆಳವಾದ ಸಹಾನುಭೂತಿ, ಕಾಳಜಿಯನ್ನು ತೋರಿಸಿದಕ್ಕಾಗಿ ಮತ್ತು ಸುಳ್ಳು ವದಂತಿಗಳು ಮತ್ತು ಹರಡುತ್ತಿರುವ ಕಥೆಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಅವರು ಹೇಳುತ್ತಾರೆ, ನನಗೆ ಅನೈತಿಕ ಸಂಬಂಧಗಳಿವೆ, ಎಂದಿಗೂ ಮಕ್ಕಳನ್ನು ಬಯಸಲಿಲ್ಲ, ನಾನು ಅವಕಾಶವಾದಿ ಮತ್ತು ಈಗ ನಾನು ಗರ್ಭಪಾತ ಮಾಡಿದ್ದೇನೆ" ಎಂದೆಲ್ಲಾ ಹೇಳುತ್ತಾರೆ ಎಂದು ಅವರು ಬರೆದುಕೊಂಡಿದ್ದಾರೆ.ನಾಗಚೈತನ್ಯನಿಂದ 200 ಕೋಟಿ ರೂ.ಗಳ ಜೀವನಾಂಶ ತಿರಸ್ಕರಿಸಿದ ನಟಿ ಸಮಂತಾ..! ಕಾರಣವೇನು ಗೊತ್ತೇ
"ವಿಚ್ಛೇದನವು ಅತ್ಯಂತ ನೋವಿನ ಪ್ರಕ್ರಿಯೆ. ನನಗೆ ಗುಣವಾಗಲು ಸಮಯವನ್ನು ಅನುಮತಿಸುವುದನ್ನು ಬಿಡಿ. ವೈಯಕ್ತಿಕವಾಗಿ ನನ್ನ ಮೇಲೆ ಈ ದಾಳಿ, ಪಟ್ಟುಬಿಡದೆ ನಡೆದಿದೆ. ಆದರೆ ನಾನು ಇದನ್ನು ನಿಮಗೆ ಭರವಸೆ ನೀಡುತ್ತೇನೆ, ನಾನು ಇದನ್ನು ಅಥವಾ ಅವರು ಹೇಳುವ ಬೇರೆ ಯಾವುದನ್ನೂ ನಾನು ಎಂದಿಗೂ ಅನುಮತಿಸುವುದಿಲ್ಲ, ಎಂದು ಅವರು ಹೇಳಿದರು.
ಸಮಂತಾ ಮತ್ತು ಚೈತನ್ಯ ನಾಲ್ಕು ವರ್ಷಗಳ ಹಿಂದೆ ಗೋವಾದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಮಾರಂಭಗಳಲ್ಲಿ ವಿವಾಹವಾದರು.
ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.