ನಾಗಚೈತನ್ಯನಿಂದ 200 ಕೋಟಿ ರೂ.ಗಳ ಜೀವನಾಂಶ ತಿರಸ್ಕರಿಸಿದ ನಟಿ ಸಮಂತಾ..! ಕಾರಣವೇನು ಗೊತ್ತೇ

ಟಾಲಿವುಡ್‌ನ ಚಿರಪರಿಚಿತ ದಂಪತಿಗಳಾಗಿದ್ದ ಸಮಂತಾ ಮತ್ತು ನಾಗಚೈತನ್ಯ ಶನಿವಾರದಂದು ವಿಚ್ಚೇದನವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲಾ ವಂದತಿಗಳಿಗೆ ತೆರೆ ಎಳೆದರು.

Written by - Zee Kannada News Desk | Last Updated : Oct 3, 2021, 06:14 PM IST
  • ಟಾಲಿವುಡ್‌ನ ಚಿರಪರಿಚಿತ ದಂಪತಿಗಳಾಗಿದ್ದ ಸಮಂತಾ ಮತ್ತು ನಾಗಚೈತನ್ಯ ಶನಿವಾರದಂದು ವಿಚ್ಚೇದನವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲಾ ವಂದತಿಗಳಿಗೆ ತೆರೆ ಎಳೆದರು.
  • ವರದಿಗಳ ಪ್ರಕಾರ, ಮದುವೆ ಇತ್ಯರ್ಥದ (ಜೀವನಾಂಶ) ಭಾಗವಾಗಿ, ನಾಗ ಚೈತನ್ಯ ಅವರು ಸಮಂತಾಗೆ 200 ಕೋಟಿ ರೂ.ಗಳನ್ನು ಆಫರ್ ಮಾಡಿದ್ದರು,
  • ಆದರೆ ನಟಿ ಸ್ವಯಂ-ನಿರ್ಮಿತ ವ್ಯಕ್ತಿಯಾಗಿದ್ದರಿಂದ ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.
ನಾಗಚೈತನ್ಯನಿಂದ 200 ಕೋಟಿ ರೂ.ಗಳ ಜೀವನಾಂಶ ತಿರಸ್ಕರಿಸಿದ ನಟಿ ಸಮಂತಾ..! ಕಾರಣವೇನು ಗೊತ್ತೇ  title=

ನವದೆಹಲಿ: ಟಾಲಿವುಡ್‌ನ ಚಿರಪರಿಚಿತ ದಂಪತಿಗಳಾಗಿದ್ದ ಸಮಂತಾ ಮತ್ತು ನಾಗಚೈತನ್ಯ ಶನಿವಾರದಂದು ವಿಚ್ಚೇದನವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಎಲ್ಲಾ ವಂದತಿಗಳಿಗೆ ತೆರೆ ಎಳೆದರು.

ವರದಿಗಳ ಪ್ರಕಾರ, ಮದುವೆ ಇತ್ಯರ್ಥದ (ಜೀವನಾಂಶ) ಭಾಗವಾಗಿ, ನಾಗ ಚೈತನ್ಯ ಅವರು ಸಮಂತಾಗೆ 200 ಕೋಟಿ ರೂ.ಗಳನ್ನು ಆಫರ್ ಮಾಡಿದ್ದರು, ಆದರೆ ನಟಿ ಸ್ವಯಂ-ನಿರ್ಮಿತ ವ್ಯಕ್ತಿಯಾಗಿದ್ದರಿಂದ  ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಾಲ್ಕು ವರ್ಷಗಳ ದಾಂಪತ್ಯದ ನಂತರ ಬೇರೆಯಾದ ನಾಗಚೈತನ್ಯ-ಸಮಂತಾ ಜೋಡಿ

ಪ್ರಮುಖ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾದ ವರದಿಯು ಸಂಬಂಧ ಕೊನೆಗೊಂಡ ನಂತರ ಸಮಂತಾ (Samantha) ಎದೆಗುಂದಿದಳು ಆದರೆ ಆಕೆ ಸದ್ಯಕ್ಕೆ ಕೆಲಸದತ್ತ ಗಮನ ಹರಿಸುತ್ತಿದ್ದಾಳೆ ಎಂದು ಹೇಳಿಕೊಂಡಿದೆ.'ಸಮಂತಾ ಪ್ರತಿದಿನ ಎದ್ದು ಕೆಲಸಕ್ಕೆ ಹೋಗುವುದು ಸುಲಭವಲ್ಲ.ಅವರು ತೀವ್ರವಾಗಿ ಎದೆಗುಂದಿದ್ದರು.ಆದರೆ ತನ್ನ ವೈಯಕ್ತಿಕ ಜೀವನದ ಕಾರಣದಿಂದ ಅವಳು ಸಂಬಂಧಿಸಿರುವ ಯಾವುದೇ ಪ್ರಾಜೆಕ್ಟ್ ಹಿಂದೆ ಉಳಿಯುವುದನ್ನು ಅವರು ಬಯಸುವುದಿಲ್ಲ.ಅವರು ಯಾವಾಗಲೂ ಸಂಪೂರ್ಣ ವೃತ್ತಿಪರಳಾಗಿದ್ದರು ಮತ್ತು ಪ್ರತಿ ದಿನವೂ ಧೈರ್ಯಶಾಲಿಯಾಗಿ ನಿಲ್ಲುತ್ತಾರೆ. ವೃತ್ತಿಪರವಾಗಿಲ್ಲದಿರುವುದು ಅವರಲ್ಲಿಲ್ಲ, ಎಂದು ಮೂಲ ಹೇಳಿದೆ.

ಇದನ್ನೂ ಓದಿ: "ಸಂಭ್ರಮಿಸಬೇಕಾಗಿರುವುದು ಮದುವೆಗಳನ್ನಲ್ಲ, ವಿಚ್ಚೇದನಗಳನ್ನು"- ರಾಮ್ ಗೋಪಾಲ್ ವರ್ಮಾ

ಶನಿವಾರ, ಸಮಂತಾ ಮತ್ತು ನಾಗ ಚೈತನ್ಯ ತಮ್ಮ ಪ್ರತ್ಯೇಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರು. ದಂಪತಿಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅಭಿಮಾನಿಗಳಿಗೆ ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಮನವಿ ಮಾಡಿದರು.

"ನಮ್ಮ ಎಲ್ಲ ಹಿತೈಷಿಗಳಿಗೆ, ಸುದೀರ್ಘ ಆಲೋಚನೆಯ ನಂತರ, ಚಾಯ್ ಮತ್ತು ನಾನು ನಮ್ಮ ಸ್ವಂತ ಮಾರ್ಗಗಳನ್ನು ಅನುಸರಿಸಲು ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ,ಅದು ನಮ್ಮ ಸಂಬಂಧದ ಮೂಲಭೂತವಾಗಿ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು ಮತ್ತು ನಾವು ಮುಂದುವರಿಯಲು ಬೇಕಾದ ಗೌಪ್ಯತೆಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ.ನಿಮ್ಮ ಬೆಂಬಲಕ್ಕೆ ಧನ್ಯವಾದಗಳು, ”ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News