Citadel India: ಸಿಟಾಡೆಲ್ ಯೂನಿವರ್ಸ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ತಾಯಿಯಾಗಿ ನಟಿಸುವುದಾಗಿ ಸಮಂತಾ ರುತ್ ಪ್ರಭು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಈ ಸರಣಿಯ ಫೌಂಡೇಷನ್‌ ಆವೃತ್ತಿಯನ್ನು ಪ್ರಿಯಾಂಕಾ ಮುನ್ನಡೆಸುತ್ತಿದ್ದರೆ, ಸಮಂತಾ ಕಾರ್ಯಕ್ರಮದ ಭಾರತೀಯ ಕೌಂಟರ್-ಪಾರ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಯ ಪ್ರಕಾರ, ಸಮಂತಾ ರುತ್‌ ಪ್ರಭು ಸಿಟಾಡೆಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ ತಾಯಿಯಾಗಿ ನಟಿಸುವುದಾಗಿ ನಟಿ ದೃಢಪಡಿಸಿದರು ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಆದರೆ, ಇದು ಕೇವಲ 'ತಾಂತ್ರಿಕತೆ' ಎಂದು ಮನರಂಜನಾ ಪೋರ್ಟಲ್ ಒಂದು ಹೇಳಿಕೊಂಡಿದೆ. ಸಿಟಾಡೆಲ್‌ನ ಅಂತರರಾಷ್ಟ್ರೀಯ ಮತ್ತು ಭಾರತೀಯ ಆವೃತ್ತಿಗಳು ಎರಡು ವಿಭಿನ್ನ ಯುಗಗಳಲ್ಲಿ ಹೊಂದಿಸಲಾಗಿದೆ. ಸಿಟಾಡೆಲ್‌ನಲ್ಲಿ ಸಮಂತಾ ಮಗಳಾಗಿ ಪ್ರಿಯಾಂಕಾ ನಟಿಸಿದ್ದಾರೆ ಎನ್ನಲಾಗ್ತಿದೆ. ಆದರೆ ಚಿತ್ರೀಕರಣದ ವೇಳೆಯೂ ಅವರಿಬ್ಬರು ಭೇಟಿಯಾಗಲಿಲ್ಲ ಎಂದು ಕೆಲವು ಮೂಲಗಳು ಹೇಳಿವೆ.


ಇದನ್ನೂ ಓದಿ: 'Mahabharat' ದಾರಾವಾಹಿ ಖ್ಯಾತಿಯ 'ಶಕುನಿ ಮಾಮಾ' ಗುಫಿ ಪೈಂಟಲ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು


ಸಿಟಾಡೆಲ್ ಇಂಡಿಯಾದಲ್ಲಿ ಸಮಂತಾ ರುತ್ ಪ್ರಭು ಮತ್ತು ವರುಣ್ ಧವನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕರಾದ ರಾಜ್ ಮತ್ತು ಡಿಕೆ ಅವರು ಹೆಲ್ಮ್ ಮಾಡಲಿದ್ದಾರೆ. ಸಿಟಾಡೆಲ್ ಇಂಡಿಯಾದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ, ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಕೂಡ ಕಥಾಹಂದರವು ಒಂದಕ್ಕೊಂದು ಸಂಪರ್ಕ ಹೊಂದಿದೆ ಎಂದು ಬಹಿರಂಗಪಡಿಸಿದರು. ರಾಜ್ ಮತ್ತು ಡಿಕೆ ತುಂಬಾ ಅದ್ಭುತ, ಪ್ರತಿಭಾವಂತರು ಮತ್ತು ಅವರು ತಮ್ಮದೇ ಆದ ಸ್ಪಿನ್ ಅನ್ನು ಭಾರತೀಯ ಕಂತಿನಲ್ಲಿ ತರುತ್ತಾರೆ. ಆದ್ದರಿಂದ, ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದರು.


ಪ್ರಸ್ತುತ ಸಿಟಾಡೆಲ್ ಇಂಡಿಯಾ ಚಿತ್ರೀಕರಣ ನಡೆಯುತ್ತಿದ್ದು, ಸಮಂತಾ ಮತ್ತು ವರುಣ್ ಶೀಘ್ರದಲ್ಲೇ ಸರ್ಬಿಯಾಕ್ಕೆ ತೆರಳಲಿದ್ದಾರೆ. ಈ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವುದು ಅದ್ಭುತವಾಗಿದೆ. ನಾವು ಸೆರ್ಬಿಯಾದಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ನಾವು ಅಲ್ಲಿ ಒಂದು ತಿಂಗಳ ಅವಧಿಯ ವೇಳಾಪಟ್ಟಿಯನ್ನು ಹೊಂದಿದ್ದೇವೆ. ಇದು ಬಹಳ ದೊಡ್ಡ ಸರಣಿ. ಸಮಂತಾ ಕಷ್ಟಪಟ್ಟು ದುಡಿಯುವ ನಟಿಯರಲ್ಲಿ ಒಬ್ಬರು ಎಂದು ವರುಣ್ ಇತ್ತೀಚೆಗೆ ಹೇಳಿದ್ದರು. 


ಇದನ್ನೂ ಓದಿ: ದೇವಸ್ಥಾನಕ್ಕೆ ತೆರಳಿದ್ದಕ್ಕೆ ಟ್ರೋಲ್​ ಮಾಡಿದವರಿಗೆ ಖಡಕ್​ ತಿರುಗೇಟು ನೀಡಿದ ಸಾರಾ ಅಲಿ ಖಾನ್​


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.