Samantha Shaakuntalam review : ಬಹುಭಾಷಾ ನಟಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ʼಶಾಕುಂತಲೆʼ ಇಂದು ತೆರೆ ಕಂಡಿದೆ. ಈ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ಅಲ್ಲದೆ, ಟಾಲಿವುಡ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಈ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತು ಪಾತ್ರವನ್ನು ನಿರ್ವಹಿಸಿದ್ದರೆ, ಮೋಹನ್ ಬಾಬು, ಪ್ರಕಾಶ್ ರಾಜ್, ಮಧುಬಾಲಾ ಮತ್ತು ಗೌತಮಿ ಇತರ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಮಂತಾ ಆರೋಗ್ಯ ಸಮಸ್ಯೆ ಹಾಗೂ ಇತರೆ ಕಾರಣದಿಂದಾಗಿ ಹಲವು ಬಾರಿ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಕೊನೆಗೂ ಇಂದು ಶಾಕುಂತಲೆ ತೆರೆ ಮೇಲೆ ಅಪ್ಪಳಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ರಿಲೀಸ್‌ ಆಗಿದೆ. ಸಿನಿಮಾ ಹೇಗಿದೆ ಎಂಬುದನ್ನು ವಿಮರ್ಶೆಯಲ್ಲಿ ತಿಳಿಯೋಣ..


ಇದನ್ನೂ ಓದಿ:ತಂದೆ ಮತ್ತು ಮಗನ ಜೊತೆ ಮಲಗಿದ್ದ ಏಕೈಕ ನಟಿ ಈಕೆ-ಉಮೈರ್ ಸಂಧು ಟ್ವೀಟ್‌ಗೆ ನಟಿ ಗರಂ..!


ಶಾಕುಂತಲೆ ಕಥೆ : ಶಕುಂತಲೆಯ ಜನನದಿಂದ ಈ ಕಥೆ ಪ್ರಾರಂಭವಾಗುತ್ತದೆ. ಇಂದ್ರನು ವಿಶ್ವಾಮಿತ್ರನ ತಪಸ್ಸನ್ನು ಮುರಿಯಲು ಮೇನಕೆಯನ್ನು ಬಳಸುತ್ತಾನೆ ಮತ್ತು ಅವರಿಬ್ಬರನ್ನೂ ಪ್ರೀತಿಸುವಂತೆ ಮಾಡುತ್ತಾನೆ. ಶಕುಂತಲೆ ಅವರ ಪ್ರೀತಿಯ ಸಂಕೇತವಾಗಿ ಜನಿಸುತ್ತಾಳೆ. ಆದರೆ ಮೇನಕಾ ಅಪ್ಸರೆಯಾದುದರಿಂದ ದೇವಲೋಕಕ್ಕೆ ಹೋಗಿ ತನ್ನ ಮಗುವನ್ನು ಶಕುಂತಲೆಯ ಪಕ್ಷಿಗಳಿಗೆ ಒಪ್ಪಿಸಬೇಕಾಯಿತು. ಕಣ್ವ ಆಶ್ರಮದಲ್ಲಿ ಬೆಳೆದ ಶಕುಂತಲಾ (ಸಮಂತಾ)ಳನ್ನು ಮೊದಲ ನೋಟದಲ್ಲೇ ದುಶ್ಯಂತ ಮಹಾರಾಜ (ದೇವ್ ಮೋಹನ್) ಪ್ರೀತಿಸುತ್ತಾನೆ. ನಂತರ ಇಬ್ಬರು ಗಾಂಧರ್ವ ವಿವಾಹವಾಗುತ್ತಾರೆ. ಅಲ್ಲದೆ, ದೈಹಿಕವಾಗಿ ಒಂದಾಗುತ್ತಾರೆ. ನಂತರ ದುಷ್ಯಂತ ಮರಳಿ ರಾಜ್ಯಕ್ಕೆ ಹೋಗುವುದು, ದುರ್ವಾಸು ಮುನಿಯ ಶಾಪ, ಇಬ್ಬರ ಅಗಲಿಕೆಯ ನಂತರ ಶಾಕುಂತಲೆ ಹೇಗೆ ತನ್ನ ಶಾಪದಿಂದ ವಿಮೋಚನೆಗೊಂಡು ಪತಿಯನ್ನು ಸೇರುತ್ತಾಳೆ ಎನ್ನುವುದೇ ಕಥೆ.


ಇದು ಹೊಸದಾಗಿ ಬರೆದ ಕಥೆಯಲ್ಲ, ಕಾಳಿದಾಸ ವಿರಚಿತ ʼಅಭಿಜ್ಞಾನ ಶಾಕುಂತಲಂʼ ಕಾದಂಬರಿ ಆಧರಿಸಿದ ಚಿತ್ರ ಎಂದು ಈಗಾಗಲೇ ನಿರ್ದೇಶಕ ಗುಣಶೇಖರ್ ಘೋಷಿಸಿದ್ದಾರೆ. ಈ ಸಿನಿಮಾ ಪೌರಾಣಿಕ ಕಥೆಯಾಗಿರುವುದರಿಂದ ಇಂದಿನ ಪೀಳಿಗೆಗೆ ಕನೆಕ್ಟ್ ಆಗುವ ಸಾಧ್ಯತೆ ಕೊಂಚ ಕಡಿಮೆ. ಅಲ್ಲದೆ ಸಂಭಾಷಣೆಗಳು ಸಂಪೂರ್ಣವಾಗಿ ಧರ್ಮಗ್ರಂಥದ ಭಾಷೆಯಲ್ಲಿರುವುದರಿಂದ ಪೌರಾಣಿಕ ಸಿನಿಮಾ ನೋಡುತ್ತಿರುವ ಭಾವನೆ ಮೂಡುತ್ತದೆ. ಆದ್ರೆ, 3D ಎಫೆಕ್ಟ್ ಚಲನಚಿತ್ರಕ್ಕೆ ಬಲ ನೀಡಿದೆ. ಬೆರಗುಗೊಳಿಸುವ ದೃಶ್ಯಗಳು ಹೆಚ್ಚು ಆಸಕ್ತಿಕರವಾಗಿದೆ. ಕಥೆಯ ಮಧ್ಯದಲ್ಲಿ, ದೇವತೆಗಳು ಮತ್ತು ರಾಕ್ಷಸರ ನಡುವಿನ ಯುದ್ಧವು ಇಂಟ್ರೆಸ್ಟಿಂಗ್ ಆಗಿದೆ. 


ಇದನ್ನೂ ಓದಿ:ಮೂರು ವರ್ಷಗಳ ನಂತರ ಮತ್ತೇ ತೆರೆ ಮೇಲೆ ಬರುವ ಇಚ್ಚೆಯಲ್ಲಿದ್ದಾರಂತೆ ಈ ನಟಿ..!


ನಟ ಮತ್ತು ನಟಿಯರ ವಿಷಯಕ್ಕೆ ಬಂದರೆ, ಸಮಂತಾ ಶಕುಂತಲಾ ಪಾತ್ರವನ್ನು ಸಂಪೂರ್ಣವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ, ಸಮಂತಾ ಸ್ವಯಂ ಡಬ್ಬಿಂಗ್ ನೀಡಿರುವುದರಿಂದ ಸ್ವಲ್ಪ ಡ್ರೈ ಅನಿಸುತ್ತದೆ. ಈ ಹಿಂದೆ ಚಿನ್ಮಯ್ ಅವರು ಸಮಂತಾಗೆ ಧ್ವನಿ ನೀಡುತ್ತಿದ್ದರು. ದೇವ್ ಮೋಹನ್ ದುಷ್ಯಂತ ಮಹಾರಾಜನ ಪಾತ್ರದಲ್ಲಿ ತಮ್ಮದೇ ಶೈಲಿಯಲ್ಲಿ ನಟಿಸಿದ್ದಾರೆ. ಅಲ್ಲು ಅರ್ಹಾ ಕೊನೆಯ ಕಾಲು ಗಂಟೆಯಲ್ಲಿ ಪರದೆ ಮೇಲೆ ಕಾಣಿಸಿಕೊಂಡು, ಪ್ರೇಕ್ಷಕರ ಉತ್ಸಾಹಕ್ಕೆ ಕಾರಣರಾಗುತ್ತಾರೆ. 


ತಾಂತ್ರಿಕ ತಂಡ : ತಾಂತ್ರಿಕ ವಿಷಯಕ್ಕೆ ಬಂದರೆ, ನಿರ್ದೇಶಕರಾಗಿ ಗುಣಶೇಖರ್ ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಆಯ್ದುಕೊಂಡ ವಿಷಯ ಇಂದಿನ ಪೀಳಿಗೆಗೆ ಎಷ್ಟರ ಮಟ್ಟಿಗೆ ಕನೆಕ್ಟ್ ಆಗುತ್ತೆ ಎನ್ನುವುದರ ಮೇಲೆ ಈ ಸಿನಿಮಾದ ಭವಿಷ್ಯ ನಿಂತಿದೆ ಎಂದು ಹೇಳಬಹುದು. ಸಾಯಿ ಮಾಧವ್ ಬುರ್ರಾ ನೀಡಿದ ಸಂಭಾಷಣೆಗಳು ಆಕರ್ಷಕವಾಗಿವೆ. ಮಣಿ ಶರ್ಮಾ ಅವರ ಹಾಡುಗಳು ಮನಮೋಹಕ ಶೈಲಿಯಲ್ಲಿವೆ. 3ಡಿ ಮತ್ತು ವಿಷುಯಲ್ ಎಫೆಕ್ಟ್ ಗಳು ಸಿನಿಮಾವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ. ಅಂತಿಮವಾಗಿ, ಒಂದು ಪದದಲ್ಲಿ ಹೇಳುವುದಾದರೆ ಸಮಂತಾ ಶಾಕುಂತಲಂ ಒಂದು ಅದ್ಭುತ 'ದೃಶ್ಯ ಕಾವ್ಯ'..ಎಂದರೆ ತಪ್ಪಾಗುವುದಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.