Vijay Devarakonda Remuneration : ವಿಜಯ್ ದೇವರಕೊಂಡ, ಸಮಂತಾ ಮತ್ತು ಶಿವ ನಿರ್ವಾಣ ಅವರ ಸಿನಿಮಾ ಖುಶಿ ಸಿನಿಮಾ ಜನರ ನಿರೀಕ್ಷೆಯನ್ನು ಹೆಚ್ಚಿಸಿದೆ.  ವಿಜಯ್‌ ದೇವರಕೊಂಡ ಮತ್ತು ಸಮಂತಾ ರುತ್‌ ಪ್ರುಭು ಈ ಸಿನಿಮಾಗೆ ಪಡೆದ ಸಂಭಾವನೆ ತಿಳಿದರೆ ಶಾಕ್‌ ಆಗುತ್ತದೆ. 


COMMERCIAL BREAK
SCROLL TO CONTINUE READING

ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ವಿಜಯ್ ದೇವರಕೊಂಡ ಈ ಖುಶಿ ಚಿತ್ರಕ್ಕೆ 23 ಕೋಟಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಮಂತಾ ತೆಗೆದುಕೊಂಡಿದ್ದು ನಾಲ್ಕೂವರೆ ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಶಿವ ನಿರ್ವಾಣ ಹನ್ನೆರಡು ಕೋಟಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಜನರು ಆಶ್ಚರ್ಯಗೊಂಡಿದ್ದಾರೆ.  


ಇದನ್ನೂ ಓದಿ: ದರ್ಶನ್‌ನ ಕೆಣಕಬಾರದು...ಒಂದು ವೇಳೆ ಕೆಣಕಿದರೆ ಫೈಯರ್‌ ಫಿಕ್ಸ್‌-ರವಿಚಂದ್ರನ್‌


ಮತ್ತೆ ಕೆಲವು ವರದಿಗಳ ಪ್ರಕಾರ, ವಿಜಯ್ ದೇವರಕೊಂಡ ಹತ್ತರಿಂದ ಹದಿನೈದು ಕೋಟಿ ರೇಂಜ್‌ನಲ್ಲಿ ಸಂಭಾವನೆ ಪಡೆದಿದ್ದಾರೆ ಎಂಬ ಮತ್ತೊಂದು ಮಾತು ಕೇಳಿಬರುತ್ತಿದೆ. ಸಮಂತಾಗೆ ಎರಡರಿಂದ ಎರಡೂವರೆ ಕೋಟಿ ಸಂಭಾವನೆ ಸಿಕ್ಕಿರಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ. ಶಿವನಿರ್ವಾಣ ಹನ್ನೆರಡು ಕೋಟಿ ಎಂದರೆ ನಂಬಲಸಾಧ್ಯ ಎಂದು ಕೆಲವರು ಊಹಿಸಿದ್ದಾರೆ.


ಅಷ್ಟಕ್ಕೂ ಖುಷಿ ಸಿನಿಮಾ ಈಗ ಹಾಟ್ ಟಾಪಿಕ್ ಆಗುತ್ತಿದೆ. ಸೆನ್ಸಾರ್‌ನಿಂದ ಕ್ಲೀನ್ U ಸರ್ಟಿಫಿಕೇಟ್ ಕೂಡ ಸಿಕ್ಕಿದೆ. ಇದೊಂದು ಸಂಪೂರ್ಣ ಕೌಟುಂಬಿಕ ಕಥೆಯ ಚಿತ್ರ ಎಂಬುದು ಟೀಸರ್ ಹಾಗೂ ಟ್ರೇಲರ್ ನಿಂದ ಸ್ಪಷ್ಟವಾಗಿದೆ. ಈ ಚಿತ್ರದಲ್ಲಿ ಯಾವುದೇ ವಯಸ್ಕ ದೃಶ್ಯಗಳಿಲ್ಲ ಎಂದು ಸೆನ್ಸಾರ್ ಪರಿಶೀಲನೆಯಿಂದ ತಿಳಿದುಬಂದಿದೆ. ಈ ಚಿತ್ರ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗುತ್ತಿದೆ.


ಇದನ್ನೂ ಓದಿ: Asia Richest Actress: ಇವರೇ ಏಷ್ಯಾದ ಅತ್ಯಂತ ಶ್ರೀಮಂತ ನಟಿ, 900 ಕೋಟಿಯ ಒಡತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.