ಸಂಭ್ರಮ (Sambhrama) ಸಿನಿಮಾ ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ ನಡಿ ಅನಿಲ್‌ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ರಂಗಭೂಮಿ‌ ಕಲಾವಿದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹೊಸ ಪ್ರತಿಭೆಗಳಾದ ವೀರೇಂದ್ರ ಶೆಟ್ಟಿ, ಅಭಯ್ ವೀರ್, ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ , ಸ್ಪೂರ್ತಿ ಹಾಗೂ ಸವಿತಾ ಚಿತ್ರದಲ್ಲಿ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಬಿಗ್‌ ಬಿ​? ಸಿದ್ಧವಾಗುತ್ತಿದೆ ಅಮಿತಾಬ್‌ ಬಚ್ಚನ್ ನಟನೆಯ ಮಿನಿ ಸಿನಿ ಸೀರಿಸ್!​


ಸಂಭ್ರಮ ಒಂದು ಯೂತ್ ಫುಲ್ ಎಂಟರ್ ಟೈನರ್ ಸಿನಿಮಾವಾಗಿದೆ. ಈ ಚಿತ್ರಕ್ಕೆ ಮ್ಯೂಸಿಕಲ್ ಮಾಂತ್ರಿಕ ಮನೋಮೂರ್ತಿ (Manomurthy) ಸಂಗೀತ ನಿರ್ದೇಶನ ಮಾಡಿದ್ದಾರೆ. ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಸಿನಿಮಾ ಶೂಟಿಂಗ್‌ ಮಾಡಲಾಗಿದೆ. 


[[{"fid":"234344","view_mode":"default","fields":{"format":"default","field_file_image_alt_text[und][0][value]":"Sambhrama ","field_file_image_title_text[und][0][value]":"ಸಂಭ್ರಮ "},"type":"media","field_deltas":{"1":{"format":"default","field_file_image_alt_text[und][0][value]":"Sambhrama ","field_file_image_title_text[und][0][value]":"ಸಂಭ್ರಮ "}},"link_text":false,"attributes":{"alt":"Sambhrama ","title":"ಸಂಭ್ರಮ ","class":"media-element file-default","data-delta":"1"}}]]


ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿರುವ ಸಂಭ್ರಮ ಸಿನಿಮಾದಲ್ಲಿ ಒಟ್ಟು 10 ಹತ್ತು ಹಾಡುಗಳಿದ್ದು, ಜಯಂತ್ ಕಾಯ್ಕಿಣಿ (Jayant Kaykini) ಮೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಚಿನ್ಮಯ್ ಭಾವಿಕೆರೆ, ವೀರೇಂದ್ರ ಶೆಟ್ಟಿ, ಶ್ರೀ ಸಂಭ್ರಮ ಸಾಹಿತ್ಯದ ಹಾಡುಗಳು ಸಿನಿಮಾದಲ್ಲಿರಲಿವೆ.


ಇದನ್ನೂ ಓದಿ: Puneet Rajkumar: 102 ಕವಿಗಳು ಬರೆದರು ಅಪ್ಪು ಮೇಲೆ ಕವನ!


ಸಿಂಕ್ ಸೌಂಡ್ ಬಳಸಿ ಸಿನಿಮಾವನ್ನು ಶೂಟ್ ಮಾಡಲಾಗಿದೆ. ವಿನಯ್ ಕುಮಾರ್ ಎಸ್ ವಿಕೆ, ಮಂಜುನಾಥ್ ಹೆಗ್ಡೆ ಕ್ಯಾಮೆರಾ ವರ್ಕ್, ತೇಜಸ್ ರಾಜ್ ಸಂಕಲನ ಸಿನಿಮಾಕ್ಕಿದ್ದು, ಮಾಡಿದ್ದು, ರಾಮಕೃಷ್ಣ ನಿಗಾದೆ, ನಾಗರಾಜ್ ಗುಡಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.


ಸಂಭ್ರಮ ಚಿತ್ರತಂಡ ಯುಗಾದಿ (Ugadi) ಹಬ್ಬಕ್ಕೆ ಮೊದಲ ಹಾಡು ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಕಹಳೆ ಮೊಳಗಿಸಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.