'ಜಯಂತ್ ಕಾಯ್ಕಿಣಿ' ಎಂದೇ ಪ್ರಸಿದ್ಧಿ ಪಡೆದಿರುವ ಜಯಂತ್ ಗೌರೀಶ್ ಕಾಯ್ಕಿಣಿ ಜನವರಿ 24, 1955ರಲ್ಲಿ ಗೋಕರ್ಣದಲ್ಲಿ ಜನಿಸಿದರು. ಮೆದು ಮಾತಿನ, ಮೇಲು ದನಿಯ ವ್ಯಕ್ತಿತ್ವ ಅವರದು. ಸಾಹಿತ್ಯ ಪ್ರಕಾರಗಳ ಹಲವು ಭಾಗಗಳಲ್ಲಿ ಕವಿಯಾಗಿ, ಕಥೆಗಾರನಾಗಿ, ಸಂಭಾಷಣಾಕಾರನಾಗಿ, ಅಂಕಣಕಾರನಾಗಿ, ಕಥೆಗಾರನಾಗಿ ಸಾಗರದಾಚೆಗೂ ನೆಲೆನಿಂತಿರುವ ಕನ್ನಡಿಗರ ನೆಚ್ಚಿನ ಲೇಖಕ ಜಯಂತ್ ಕಾಯ್ಕಿಣಿ.
ಹೆಚ್ಚಾಗಿ ಮಳೆ ಹಾಡುಗಳನ್ನೇ ಬರೆದಿರುವ ಇವರಿಗೆ 'ಮುಂಗಾರು ಮಳೆ' ಚಿತ್ರದ ಹಾಡುಗಳು ಇನ್ನೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುವ ಅವಕಾಶವನ್ನು ಒದಗಿಸಿದವು. ಇವರ ಪ್ರಖ್ಯಾತಿಯ ಕಿರೀಟಕ್ಕೆ ಇನ್ನೂ ಹಲವಾರು ಪ್ರಶಸ್ತಿಯ ಗರಿಗಳು ಲಭಿಸಿದವು. ಮುಂಗಾರು ಮಳೆಯ "ಅನಿಸುತಿದೆ ಯಾಕೋ ಇಂದು" ಹಾಡಿನ ಉತ್ತಮ ಸಾಹಿತ್ಯಕ್ಕಾಗಿ 2006ರಲ್ಲಿ ಜಯಂತ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯು ದೊರಕಿತು.
ಜನ್ಮದಿನದ ಸಂತಸದಲ್ಲಿರುವ ನೆಚ್ಚಿನ ಲೇಖಕ 'ಜಯಂತ್ ಕಾಯ್ಕಿಣಿ' ಅವರ ಕೆಲವು ಹಾಡುಗಳ ಮೆಲುಕು ನಿಮಗಾಗಿ...
* ಮುಂಗಾರು ಮಳೆ ಚಿತ್ರದ 'ಅನಿಸುತಿದೆ ಯಾಕೋ ಇಂದು'
* ಚಿಗುರಿದ ಕನಸು ಚಿತ್ರದ 'ಓ... ಆಜಾರೆ'
* ಗಾಳಿಪಟ ಚಿತ್ರದ 'ಮಿಂಚಾಗಿ ನೀನು ಬರಲು'
* ಅಣ್ಣಾ ಬಾಂಡ್ ಚಿತ್ರದ 'ಏನೆಂದು ಹೆಸರಿಡಲಿ'
* ಗೆಳೆಯ ಚಿತ್ರದ 'ಈ ಸಂಜೆ ಯಾಕಾಗಿದೆ'
* ಮಿಲನ ಚಿತ್ರದ 'ಮಳೆ ನಿಂತು ಹೋದ ಮೇಲೆ'
* ಮೊಗ್ಗಿನ ಮನಸ್ಸು ಚಿತ್ರದ 'ಮಳೆ ಬರುವ ಹಾಗಿದೆ'
* ಮನಸಾರೆ ಚಿತ್ರದ 'ಎಲ್ಲೋ ಮಳೆಯಾಗಿದೆ ಇಂದು'
* ಕೃಷ್ಣನ್ ಲವ್ ಸ್ಟೋರಿ ಚಿತ್ರದ 'ಹೃದಯವೆ ಬಯಸಿದೆ ನಿನ್ನನೂ...'
* ಪರಮಾತ್ಮ ಚಿತ್ರದ 'ಪರವಶನಾದೇನೂ...'