ನವದೆಹಲಿ: Aryan Khan Drugs Case - ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ನನ್ನು ಬಂಧಿಸಿದ ಎನ್ ಸಿಬಿ ಅಧಿಕಾರಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede) ಇದೀಗ ವಿವಾದಕ್ಕೆ ಸಿಳುಕುತ್ತಿರುವಂತೆ ಗೋಚರಿಸುತ್ತಿದೆ. ಎನ್‌ಸಿಪಿ ನಾಯಕ ನವಾಬ್ ಮಲಿಕ್ ಸಮೀರ್ ವಾಂಖೆಡೆ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಮೀರ್ ನೇತೃತ್ವದಲ್ಲಿ ಡ್ರಗ್ಸ್ ಪ್ರಕರಣಗಳಲ್ಲಿ ನಿರಂತರ ಕ್ರಮ ಕೈಗೊಳ್ಳಲಾಗಿದೆ. ಹೈಪ್ರೊಫೈಲ್ ರೇವ್ ಪಾರ್ಟಿ ಡ್ರಗ್ ಪ್ರಕರಣದ ಹೆಚ್ಚಿನ ತನಿಖೆಯೂ ಸಮೀರ್ ನೇತೃತ್ವದಲ್ಲಿ ನಡೆಯುತ್ತಿದೆ. ಸಮೀರ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಎರಡೂ ಚರ್ಚೆಯಲ್ಲಿವೆ. ಅಂದ ಹಾಗೆ, ಸಮೀರ್ ಮತ್ತು ಶಾರುಖ್ ಖಾನ್ ಈ ಹಿಂದೆಯೂ ಕೂಡ ಪರಸ್ಪರ ಮುಖಾಮುಖಿಯಾಗಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾದೀತು. 


COMMERCIAL BREAK
SCROLL TO CONTINUE READING

ಶಾರುಖ್ ಮೇಲೆಯೂ ಕೂಡ ಕ್ರಮ ಜರುಗಿಸಿದ್ದ ಸಮೀರ್ ವಾಂಖೆಡೆ
ಆಂಗ್ಲ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಇಂದಿನಿಂದ ಸುಮಾರು 10 ವರ್ಷಗಳ ಹಿಂದೆ ಅಂದರೆ 2011 ರಲ್ಲಿ ಸಮೀರ್ ವಾಂಖೆಡೆ ಈ ಕ್ರಮ ಕೈಗೊಂಡಿದ್ದರು. ಹೌದು 2011 ರಲ್ಲಿ ಶಾರುಕ್ ತಮ್ಮ ಕುಟುಂಬ ಸಮೇತ ಲಂಡನ್ ಹಾಗೂ ಹಾಲೆಂಡ್ ಪ್ರವಾಸದಿಂದ ಭಾರತಕ್ಕೆ ಮರಳಿದ್ದರು. ಆಗ ಸಮೀರ್ ವಾಂಖೆಡೆ ಕಸ್ಟಮ್ ಅಧಿಕಾರಿಯಾಗಿದ್ದರು ಹಾಗೂ ಅವರು ಏರ್ಪೋರ್ಟ್ ನಲ್ಲಿ ಶಾರುಖ್ ಅವರನ್ನು ತಡೆದಿದ್ದರು. ಶಾರುಕ್ ಅವರನ್ನು ತಡೆ ಹಿಡಿಯಲು ಸಮೀರ್ ಬಳಿ ಇದ್ದ ಒಂದೇ ಒಂದು ಆಪ್ಶನ್ ಅಂದರೆ, ಶಾರುಕ್ ತಮ್ಮೊಂದಿಗೆ ಸುಮಾರು 20 ಬ್ಯಾಗ್ ಗಳಿದ್ದವು.


ಇದನ್ನೂ ಓದಿ-Aryan Khan Case : ಮುಂಬೈ ರೇವ್ ಪಾರ್ಟಿ ಪ್ರಕರಣದ ಈ ಇಬ್ಬರು ಆರೋಪಿಗಳಿಗೆ ಬಿಗ್ ರಿಲೀಫ್!


ಶಾರುಕ್ ಪುತ್ರ ಆರ್ಯನ್ ಖಾನ್ ಮೇಲೆ ಸಮೆರ್ ವಾಂಖೆಡೆ ಕ್ರಮ
ಈ ವೇಳೆ ಸಮೀರ್ ವಾಂಖೆಡೆ ಶಾರುಖ್ ಖಾನ್ ಅವರನ್ನು ಬಹಳ ಹೊತ್ತು ವಿಚಾರಣೆ ನಡೆಸಿದ್ದರು. ಅಷ್ಟೇ ಅಲ್ಲ, ಮಿತಿಗಿಂತ ಹೆಚ್ಚು ಸರಕು ತಂದಿದ್ದಕ್ಕಾಗಿ ಶಾರುಖ್ ಖಾನ್ ಗೆ ಒಂದೂವರೆ ಲಕ್ಷ ರೂಪಾಯಿ ದಂಡವನ್ನೂ ಸಹ ವಿಧಿಸಿದ್ದರು. ಈ ಪ್ರಕರಣ ಮುಗಿದ ಬಳಿಕ ಇದೀಗ 10 ವರ್ಷಗಳ ನಂತರ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಈ ವೇಳೆ ಡ್ರಗ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಆರ್ಯನ್ ನನ್ನು ಬಂಧಿಸಿದ್ದಾರೆ (Sameer Wankhede Arrested Shahrukh Khan). ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2 ರಂದು ರೇವ್ ಪಾರ್ಟಿಯಿಂದ ವಾಹಕ್ಕೆ ಪಡೆದು, ನಂತರ ಆತನನ್ನು ಬಂಧಿಸಲಾಗಿದೆ. ಎನ್‌ಸಿಬಿ ಶಾರುಕ್ ಮಗನ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದೆ.


ಇದನ್ನೂ ಓದಿ-Kareena Kapoor: ‘ಹೀಗೆ ಮಾಡಿದರೆ ವಿಚ್ಛೇದನ ಪಡೆಯುತ್ತೇನೆ’ ಎಂದು ಕರೀನಾ ಕಪೂರ್ ಹೇಳಿದಾಗ..!


ಇಂದು ಮತ್ತೆ ವಿಚಾರಣೆ ನಡೆಸಿದೆ
ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಅವರ ಜಾಮೀನು ಅರ್ಜಿಯನ್ನು ಅಕ್ಟೋಬರ್ 20 ರಂದು ತಿರಸ್ಕರಿಸಲಾಗಿದೆ. ಬಾಂಬೆ ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯ ವಿಚಾರಣೆಯು ಅಕ್ಟೋಬರ್ 26 ರಂದು ಹಲವಾರು ಗಂಟೆಗಳ ಕಾಲ ನಡೆದಿದೆ. ಇದೀಗ ಈ ಪ್ರಕರಣದ ವಿಚಾರಣೆ ಬುಧವಾರ ಅಂದರೆ ಇಂದು ಮತ್ತೆ ನಡೆಯಲಿದೆ. ಹೈಪ್ರೊಫೈಲ್ ರೇವ್ ಪಾರ್ಟಿ ಡ್ರಗ್ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಸದ್ಯ ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.


ಇದನ್ನೂ ಓದಿ-Aryan Khan : ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವಿನ ವಾಟ್ಸಾಪ್ ಚಾಟ್‌ ಬಹಿರಂಗ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ