Mumbai Drugs Party Updates: 'ಇದು NCB ಕಚೇರಿ, ಪ್ರೊಡಕ್ಷನ್ ಹೌಸ್ ಅಲ್ಲ:' ಅನನ್ಯಾ ಪಾಂಡೆಳನ್ನು ತರಾಟೆಗೆ ತೆಗೆದುಕೊಂಡ ಸಮೀರ್ ವಾಂಖೆಡೆ

Mumbai Drugs Party Updates - ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಿನ್ನೆ ಸತತ ಎರಡನೇ ದಿನ ವಿಚಾರಣೆಗಾಗಿ ಕರೆಸಿತ್ತು. ಬೆಳಗ್ಗೆ 11 ಗಂಟೆಗೆ NCB ಅನನ್ಯಳನ್ನು ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅನನ್ಯಾ ಮಾತ್ರ ಮಧ್ಯಾಹ್ನ 2.30ಕ್ಕೆ NCB ಕಚೇರಿ ತಲುಪಿದ್ದಳು. ಇದರಿಂದ ತೀವ್ರ ಆಕ್ರೋಶಗೊಂಡ ಸಮೀರ್ ವಾಂಖೆಡೆ ಅನನ್ಯಳನ್ನು ತರಾಟೆಗೆ ತೆರೆದುಕೊಂಡಿದ್ದಾರೆ. 

Written by - Nitin Tabib | Last Updated : Oct 23, 2021, 10:46 AM IST
  • ಅನನ್ಯಾ ಪಾಂಡೆಳನ್ನು ತರಾಟೆಗೆ ತೆಗೆದುಕೊಂಡ NCB.
  • ಅನನ್ಯಾಳಿಗೆ ಕಾನೂನಿನ ಮಹತ್ವದ ಪಾಠ ಹೇಳಿಕೊಟ್ಟ ಜೋನಲ್ ಡೈರೆಕ್ಟರ್.
  • ವಿಚಾರಣೆಗೆ ಅನನ್ಯ ತಡವಾಗಿ ಆಗಮಿಸುತ್ತಿದ್ದಳು.
Mumbai Drugs Party Updates: 'ಇದು NCB ಕಚೇರಿ, ಪ್ರೊಡಕ್ಷನ್ ಹೌಸ್ ಅಲ್ಲ:' ಅನನ್ಯಾ ಪಾಂಡೆಳನ್ನು ತರಾಟೆಗೆ ತೆಗೆದುಕೊಂಡ ಸಮೀರ್ ವಾಂಖೆಡೆ

Mumbai Drugs Party Updates - ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ (NCB) ಅಧಿಕಾರಿ ಸಮೀರ್ ವಾಂಖೆಡೆ (Sameer Wankhede) ಅವರು ನಟ ಚಂಕಿ ಪಾಂಡೆ (Chanki Pandey) ಅವರ ಪುತ್ರಿ ಅನನ್ಯಾ ಪಾಂಡೆಳನ್ನು ನಿನ್ನೆ ವಿಚಾರಣೆಯ ವೇಳೆ  ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅನನ್ಯ ಪಾಂಡೆ (Ananya Pandey) ಶುಕ್ರವಾರದ ವಿಚಾರಣೆಗೆ ತಡವಾಗಿ ಹಾಜರಾಗಿದ್ದಾಳೆ. ಅದರ ನಂತರ NCB ವಲಯ ನಿರ್ದೇಶಕರು ವಿಚಾರಣೆ ವೇಳೆ ಆರಂಭಕ್ಕೂ ಮುನ್ನವೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇಂದು ಕೂಡ ಅನನ್ಯಾ ಪಾಂಡೆಳನ್ನು ವಿಚಾರಣೆಗೆ ಕರೆಯಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಮೂರುವರೆ ಗಂಟೆ ತಡವಾಗಿ ವಿಚಾರಣೆಗೆ ತಲುಪಿದ ಅನನ್ಯ 
ಎನ್‌ಸಿಬಿ ಶುಕ್ರವಾರ ಸತತ ಎರಡನೇ ದಿನ ಅನನ್ಯಾಳನ್ನು ವಿಚಾರಣೆಗೆ ಕರೆದಿತ್ತು. ಇದಕ್ಕಾಗಿ ಎನ್‌ಸಿಬಿ ಅನನ್ಯಾಗೆ ಬೆಳಿಗ್ಗೆ 11 ಗಂಟೆಯ ಸಮಯವನ್ನು ನೀಡಿತ್ತು ಆದರೆ ಅನನ್ಯಾ ಮಧ್ಯಾಹ್ನ 2:30 ಕ್ಕೆ ಎನ್‌ಸಿಬಿ ಕಚೇರಿಯನ್ನು ಲಳುಪಿದ್ದಾಳೆ. ಇದರಿಂದ ಕೋಪಗೊಂಡ ವಾಂಖೆಡೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಗುರುವಾರವೂ ಸಹ ಎನ್‌ಸಿಬಿ, ಅನನ್ಯಾಗೆ ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಬರಲು ಸಮಯ ನೀಡಿತ್ತು, ಆದರೆ ಅವರು ಸಂಜೆ 4 ಗಂಟೆಗೆ ತಲುಪಿದ್ದಳು ಇದರಿಂದಾಗಿ ಎನ್‌ಸಿಬಿಗೆ  ತನ್ನ ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. 

ಇದನ್ನೂ ಓದಿ-NCB at Shahrukh Khan’s Residence: ಶಾರುಖ್ ಖಾನ್ ನಿವಾಸ ಮನ್ನತ್ ಮೇಲೂ NCB ದಾಳಿ

ಈ ರೀತಿ ಸತತ ಎರಡನೇ ದಿನ ಕೂಡ ವಿಚಾರಣೆಗೆ ತಡವಾಗಿ ಆಗಮಿಸಿರುವುದರಿಂದ, ನಿನ್ನೆ ಅಂದರೆ ಶುಕ್ರವಾರ ಅನನ್ಯಾ ಪಾಂಡೆ ಮೇಲೆ ಸಮೀರ್ ವಾಂಖೆಡೆ ಕೋಪಗೊಂಡಿದ್ದಾರೆ ಮತ್ತು ಕಾನೂನಿನ ಮಹತ್ವವನ್ನು ಆಕೆಗೆ ತಿಳಿಸಿದ್ದಾರೆ. ಈ ವೇಳೆ ಅನನ್ಯಾಳನ್ನು ತರಾಟೆಗೆ ತೆಗೆದುಕೊಂಡ ಸಮೀರ್ ವನ್ಖೆದೆ,  "ನಿಮಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗಳು ಸೂಚಿಸಲಾಗಿತ್ತು ಮತ್ತು ನೀವು ಈಗ ಬರುತ್ತಿರುವಿರಿ. ಅಧಿಕಾರಿಗಳು ನಿಮಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾ?  ಇದು ಪ್ರೊಡಕ್ಷನ್ ಹೌಸ್ ಅಲ್ಲ ಆದರೆ ಕೇಂದ್ರ ಏಜೆನ್ಸಿಯ ಕಚೇರಿಯಾಗಿದೆ, ಆದ್ದರಿಂದ ನಿಮಗೆ ಸೂಚಿಸಲಾಗಿರುವ ಸಮಯಕ್ಕೆ ಹಾಜರಾಗಬೇಕು' ಎಂದು ಹೇಳಿದ್ದಾರೆ. 

ಇದನ್ನೂ ಓದಿ-Aryan Khan Drug Case: ಬಾಲಿವುಡ್ ನಟಿ ಅನನ್ಯ ಪಾಂಡೆ ಮನೆ ಮೇಲೆ NCB ದಾಳಿ

ಪ್ರಕರಣ ಏನು?
ಮುಂಬೈ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ NCB ಅಧಿಕಾರಿಗಳು ತನ್ನ ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಹಾಗೂ ಆತನ ಸಹಪಾಗಿಗಳು ಪ್ರಸ್ತುತ ಮುಂಬೈ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಇನ್ನೊಂದೆಡೆ ಈ ಪ್ರಕರಣದಲ್ಲಿ ಇದೀಗ ಅನನ್ಯಾ ಪಾಂಡೆ ಕೂಡ NCB ರೇಡಾರ್ ನಲ್ಲಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅನನ್ಯಾ ಪಾಂಡೆಳನ್ನು ಎರಡನೇ ಬಾರಿಗೆ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ನಿಗದಿತ ಸಮಯಕ್ಕಿಂತ ಮೂರುಗಂಟೆ ತಡವಾಗಿ ಅನನ್ಯಾ NCB ಕಚೇರಿಗೆ ತಲುಪಿದ್ದಳು. ಆಕೆ ಈ ರೀತಿ ತಡವಾಗಿ NCB ಕಚೇರಿ ತಲುಪುವುದು NCB ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ-ಡ್ರಗ್ಸ್ ಬಗ್ಗೆ Aryan Khan ಮತ್ತು Ananya Panday ನಡುವಿನ ಮಾತುಕತೆ ವಾಟ್ಸ್ ಆಪ್ ಚಾಟ್ ನಲ್ಲಿ ಬಹಿರಂಗ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News