Darshan murder case latest updates : ನಟ ದರ್ಶನ ಹಾಗೂ ಪವಿತ್ರ ಗೌಡ ಸೇರಿ 13 ಜನರನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರಿಪಡಿಸಿ ಆರು ದಿನ ಪೊಲೀಸ್ ಕಸ್ಟಡಿಗೆ ‌ಪಡೆದುಕೊಂಡಿದ್ದರು. ಇಂದು ಸಹ ಡಿಸಿಪಿ ಗಿರೀಶ್ ನಾಲ್ಕು ಗಂಟೆಗಳ ಕಾಲ ನಟ ದರ್ಶನ  ವಿಚಾರಣೆ ನಡೆಸಿದ್ದಾರೆ. ಆದರೆ ದರ್ಶನ್ ಮಾತ್ರ ನಂದೇನೂ ತಪ್ಪಿಲ್ಲ ಎಂದು ಹೇಳಿದ್ದಾನಂತೆ. ಇನ್ನೂ ನಗರ ಪೊಲೀಸ್ ಆಯುಕ್ತ ದಯಾನಂದ್ ಸಹ ವಿಚಾರಣೆ ದರ್ಶನ್ ವಿಚಾರಣೆ ನಡೆಸಿದ ಸಮಯದಲ್ಲಿ ತನಗೆ ಏನೂ ಗೊತ್ತಿಲ್ಲವೆಂಬತೆ ದರ್ಶನ್ ನವರಂಗಿ ಆಟವಾಡಿದ್ದಾನೆ.


COMMERCIAL BREAK
SCROLL TO CONTINUE READING

ಇನ್ನೂ ಚಿತ್ರದುರ್ಗದಲ್ಲಿ ಜೂನ್ 8 ರಂದು ಬೆಳಗ್ಗೆ 11 ಗಂಟೆಗೆ ರೇಣುಕಾಸ್ವಾಮಿಯನ್ನು ರಾಘವೇಂದ್ರ & ಟೀಂ ನಿಂದ ಕಿಡ್ನಾಪ್ ಮಾಡಲಾಗಿತ್ತು. ಚಿತ್ರದುರ್ಗದಿಂದ ನೇರವಾಗಿ ಮಧ್ಯಾಹ್ನದ ವೇಳೆಗೆ ಆರ್.ಆರ್.ನಗರ ಪಟ್ಟಣಗೆರೆ ಶೆಡ್ ಬಳಿ ಕರೆದೊಯ್ದಿದ್ದರು. ಅಷ್ಟೋತ್ತಿಗಾಗಲೇ ವಿನಯ್, ಕಾರ್ತಿಕ್, ಪ್ರದೋಶ್, ನಿಖಿಲ್, ಕೇಶವಮೂರ್ತಿ, ನಂದೀಶ್, ದೀಪಕ್, ನಾಗರಾಜ್ ಶೆಡ್ ಬಳಿ ಇದ್ರು. ರೇಣುಕಾಸ್ವಾಮಿ ಕರೆದುಕೊಂಡು ಹೋಗುತ್ತಿದ್ದ ಹಾಗೇ ಹಿಗ್ಗಾಮುಗ್ಗಾ ಥಳಿಸಿದ್ರು. ಸಂಜೆ ಐದರ ಸುಮಾರಿಗೆ ಶೆಡ್ ಗೆ  ದರ್ಶನ್ ಹಾಗೂ ಪವಿತ್ರಗೌಡ ಎಂಟ್ರಿ ಕೊಟ್ಟಿದ್ದಾರೆ. ಮೊದಲೇ ಕೋಪದಲ್ಲಿದ್ದ ದರ್ಶನ್ ನಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆಯಾಗಿದೆ.


ಇದನ್ನೂ ಓದಿ:ಯುವ ರಾಜ್‌ಕುಮಾರ್ ಆ ನಟಿಯ ಜೊತೆಗೆ ಸಿಕ್ಕಿಬಿದ್ದ ಸಾಕ್ಷಿ ಇದೆಯಾ!? ಶ್ರೀದೇವಿ ಪರ ವಕೀಲರು ಹೇಳಿದ್ದೇನು?


ಇನ್ನೂ ದರ್ಶನ್ ಹಲ್ಲೆ ಮಾಡುವ ವೇಳೆ ದರ್ಶನ್ ಮುಂದೆ ಬಿಲ್ಡಪ್ ಕೊಡಲು ರೇಣುಕಾಸ್ವಾಮಿ ಮೇಲೆ ದರ್ಶನ್ ಸಹಚರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದರ್ಶನ್ ಸಮ್ಮುಖದಲ್ಲೆ ಗೋಡೆ ಹಾಗೂ ನೆಲಕ್ಕೆ ರೇಣುಕಾಸ್ವಾಮಿಯನ್ನ ಎತ್ತಿಬಿಸಾಡಿದ್ದಾರೆ. 


ಸಂಜೆ 5:30 ರ ಸುಮಾರಿಗೆ ದರ್ಶನ್ ಶೆಡ್ ನಿಂದ  ದರ್ಶನ್ ಹಾಗೂ ಪವಿತ್ರಾಗೌಡ ವಾಪಸ್ ಆಗಿದ್ದಾರೆ. ಅಷ್ಟೋತ್ತಿಗಾಗಲೇ ರೇಣುಕಾಸ್ವಾಮಿ ಅರೆಜೀವವಾಗಿದ್ದ. ದರ್ಶನ್ ಹೋದ ನಂತರವೂ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ಮುಂದುವರೆಸಿದ್ದಾರೆ. ಏಟು ತಾಳಲಾರದೇ ಸಂಜೆ 6 ರ ಸುಮಾರಿಗೆ ಶೆಡ್ ನಲ್ಲಿ  ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಕಡೆಗೆ ಕೊಲೆಯಾಗಿರುವ ಬಗ್ಗೆ ದರ್ಶನ್ ಗೆ ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿ ದರ್ಶನ್ ಶಿಷ್ಯರು ತಿಳಿಸಿದ್ದಾರೆ.


ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗಲು 30 ಲಕ್ಷ ರೂ. ಡೀಲ್‌..! ಸ್ಪೋಟಕ ಮಾಹಿತಿ ಬಹಿರಂಗ


ಇನ್ನು ಕೊಲೆ ಮಾಡಿದ ಆರೋಪಿಗಳ ಪೈಕಿ ಒಬ್ಬ ಪಶ್ಚಿಮ ವಲಯದಲ್ಲಿ ಪರಿಚಯಸ್ಥ ಪಿಎಸ್ಐಗೆ ಕರೆ ಮಾಡಿ, ಹಣದ ವ್ಯವಹಾರದಲ್ಲಿ ನನ್ನ ಸ್ನೇಹಿತರು ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಆ ಕಡೆಯಿಂದ ಉತ್ತರಿಸಿದ್ದ ಪಿಎಸ್ಐ ಬಾಡಿಯನ್ನ ಸಾಗಿಸಿ ನೀವು ಸರೆಂಡರ್‌ ಆಗಿ ಎಂದಿದ್ದಾರೆ. ಇನ್ನೂ ಕೊಲೆ ವಿಷಯ ಗೊತ್ತಾದ ತಕ್ಷಣ ಗಾಬರಿಯಾದ  ದರ್ಶನ್, ರೇಣುಕಾಸ್ವಾಮಿ ಮೃತ ದೇಹ ಸಾಗಿಸಲು ಆರೋಪಿಗಳಿಗೆ 30 ಲಕ್ಷ ಹಣ ನೀಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳಲು ನಾಲ್ವರಿಗೆ ತಿಳಿಸಿ ಮೈಸೂರಿಗೆ ತೆರಳಿದ್ದಾನೆ. 


ಆರೋಪಿಗಳ ಪೈಕಿ ಪ್ರದೋಷ್ ಗೆ ನೀಡಿದ್ದ 30 ಲಕ್ಷ ಹಣ ನೀಡಿ ಮರ್ಡರ್ ನಾವೇ ಮಾಡಿದ್ದಾಗಿ ಒಪ್ಪಿಕೊಳ್ಳಲು ದರ್ಶನ್ ಸೂಚಿಸಿದ್ದಾನೆ. ಹೀಗಾಗಿ ಪೊಲೀಸರ ಮುಂದೆ ಬಂದ ಪ್ರದೋಶ್, ಕಾರ್ತಿಕ್, ರಾಘವೇಂದ್ರ ತೆರಳಿ ಸರೆಂಡರ್ ಆಗಿದ್ದಾರೆ. ಸದ್ಯ ಆರೋಪಿಗಳಿಗೆ ದರ್ಶನ್ ಕೊಟ್ಟ 30 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪಿಎಸ್ಐ ನನ್ನ ಸಾಕ್ಷಿಯಾಗಿ ಪರಿಗಣಿಸಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.