Actor Jaggesh : ಸೆಲಿಬ್ರಿಟಿಗಳು ಆಗುವುದು ಕಷ್ಟ, ಒಂದು ವೇಳೆ ಸೆಲಿಬ್ರಿಟಿ ಆದರೆ ಅಲ್ಲಿಂದ ಇನ್ನೊಂದು ಕಷ್ಟ ಕಾಡಲು ಪ್ರಾರಂಭವಾಗುತ್ತದೆ. ಅದೇ, ಸಾಮಾನ್ಯರಂತೆ ಬದುಕುವುದೇ ಅಸಾಧ್ಯವಾಗಿ ಹೋಗುತ್ತದೆ. ಎಲ್ಲಿಯೂ ತಮಗಿಷ್ಟ ಬಂದಂತೆ ಇರಲಾಗದು. ಇದೀಗ ಈ ಕುರಿತು ನಟ ಜಗ್ಗೇಶ್‌ ಸುದೀರ್ಘ ಬರಹದ ಮೂಲಕ ಸೆಲೆಬ್ರೆಟಿಗಳ ಬದುಕಿನ ವಿವರಣೆ ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಸೆಲಿಬ್ರಿಟಿ ಆಗಲು ಎಲ್ಲರು ಒಂದಿಲ್ಲಾ ಒಂದುರೀತಿ ಯತ್ನಿಸುತ್ತಾರೆ ಕೆಲವರು ನಟನಟಿ ಕೆಲವರು ರಂಗಕಲಾವಿದರಾಗಿ, ಕೆಲವರು ಟೀವಿ ಕೆಲವರು ತಮ್ಮ ಮೊಬೈಲ್ ಮೂಲಕ ಮತ್ತೆ ಕೆಲವರು ಯೂಟ್ಯೂಬ್ ಮೂಲಕ ಒಟ್ಟಾರೆ ಹೇಗಾದರು ಸರಿ ಸೆಲಿಬ್ರಿಟ್ ಆಗಲೆಬೇಕು ಆಗದಿದ್ದರೆ ಡಿಪ್ರೇಷನ್ ಗೆ ಒಳಗಾಗುತ್ತಾರೆ.


ಇದನ್ನೂ ಓದಿ:ನಟಿಯ ಬೆತ್ತಲೆ ಪ್ರತಿಭಟನೆ ರಹಸ್ಯ ಬಯಲು..! ಹಣ ಪಡೆದು ಈ ರೀತಿ ಮಾಡಿದ್ಲಾ ನಟಿ ಶ್ರೀರೆಡ್ಡಿ..?


ಆದರೆ ನಾನು ಸೆಲಿಬ್ರಿಟಿ ಕನಸು ಕಂಡವನಲ್ಲಾ, ಕಟ್ಟಿಕೊಂಡ ಮಡದಿ ಹಾಗು ಸಾಧಿಸಿ ಸಾಯಬೇಕು ಎಂಬ ಸಾಮಾನ್ಯ ಮನುಷ್ಯನ ಕನಸುಮಾತ್ರ ಆಗಿತ್ತು. ಯಾವ ದೇವರ ವರವೋ ಯಾವ ಗುರುವಿನ ಕೃಪೆಯೋ ಅನ್ನದ ಸೂರಿನ ಜೊತೆ ದೊಡ್ಡ ಹೆಸರು ಪ್ರಾಪ್ತವಾಯಿತು ಜೊತೆಗೆ ನನ್ನ ವೈಯಕ್ತಿಕ ಸಂತೋಷ ಕಮರಿಹೋಯಿತು.


ಒಂದು ಕಾಲದಲ್ಲಿ ಸೇಲ್ಸ್ ಮ್ಯಾನ್ ಆಗಿದ್ದ ಈ ನಟ ಇದೀಗ ಸಿನಿಮಾವೊಂದಕ್ಕೆ 100 ರೂ. ಕೋಟಿ ಪಡೆಯುತ್ತಾರೆ..!


ಇದನ್ನೆಲ್ಲಾ ಬದಿಗೊತ್ತಿ ನಾನು ಎಲ್ಲರಂತೆ ಸ್ವತಂತ್ರ ಜೀವಿಯೋ ಅಥವ ಪಂಜರದಿಂದ ಹಾರಿ ಪರಿಸರ ಸವಿಯೋ ಪಕ್ಷಿಯಂತೆ ಒಬ್ಬಂಟಿಯಾಗಿ ಆನಂದ ಪಡೆಯೋ ಯತ್ನಮಾಡುತ್ತಿದ್ದೇನೆ ಇದರಲ್ಲಿ ಪೂರ್ಣಸಂತೋಷ ಸಿಗುತ್ತಿದೆಯೇ ಸತ್ಯವಾಗಿಯು ಇಲ್ಲಾ ಏನೋ ಒಂದೆಕಡೆ ಗೂಬೆಯಂತೆ ಇರಬಾರದು ಎಂಬ ಸಣ್ಣ ಪರಿವರ್ತನೆ ಅಷ್ಟೆ ಈ ಸೆಲಿಬ್ರಿಟಿಯ ಬದುಕು.


ನಾನು ನನ್ನ ಸಹಾಯಕ ರಸ್ತೆಯಲ್ಲಿ ಸಿಕ್ಕ ತಾಟಿಲಿಂಗು ವ್ಯಾಪಾರಿಯ ಜೊತೆ ವ್ಯಾಪಾರ ಮುಗಿಸಿ ಅವನಿಗೆ ಸಂತೋಷ ಆಗುವಂತೆ ಅವನ ಬಂಡವಾಳ ಎರಡು ಹಣ್ಣಿಗೆ ನೀಡಿದಾಗ ಅವನ ಕಂಗಳ ಆನಂದಭಾಷ್ಪ ಶಿವನ ಜಲಾಭಿಷೇಕದಂತೆ ಬಾಸವಾಯಿತು.


ಇದನ್ನೂ ಓದಿ:28 ವರ್ಷದ ಉದಯೋನ್ಮುಖ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನ..!


ಸೆಲಿಬ್ರಿಟಿಯ ಬದುಕು ಕಂಡು ನೀವು ಸೆಲಿಬ್ರಿಟಿ ಆಗಬೇಕ ಇಲ್ಲಾ ಸೆಲಿಬ್ರಿಟಿಯ ಮೇಲೆ ಪ್ರೀತಿ ಕರುಣೆ ತೋರಬೇಕ ದೇವರು ವಾಸಮಾಡೋ ನಿಮ್ಮ ಹೃದಯಕ್ಕೆ ಸೇರಿದ್ದು. ಜೀವನ ನಾಟಕರಂಗ,ಸಮಾಜವೆ ರಂಗಮಂದಿರ, ದೇವರೆ ಸೂತ್ರದಾರ, ಅಭಿಮಾನಿಗಳೆ ಬಂಧುಮಿತ್ರರು.. ಅಂತ ಬರೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.