28 ವರ್ಷದ ಉದಯೋನ್ಮುಖ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನ..!

Music Director Praveen death :  ಪ್ರವೀಣ್ ಕುಮಾರ್ ಅವರ ಪ್ರತಿಭೆಗೆ ಸಿನಿ ಪ್ರೇಕ್ಷಕ ಫಿದಾ ಆಗಿದ್ದ. ಸಂಗೀತ ಕ್ಷೇತ್ರದಲ್ಲಿ ಪ್ರವೀಣ್ ಕುಮಾರ್ ಅಚ್ಚಳಿಯದ ಹೆಸರು ಅಂತ ಕೆಲ ಗಣ್ಯರು ಸಹ ಹೊಗಳುತ್ತಿದ್ದರು. ಆದರೆ ಯುವ ಸಂಗೀತ ನಿರ್ದೇಶಕ, ಇಂದು ಬೆಳಗ್ಗೆ 6:30ಕ್ಕೆ ಹಠಾತ್ ನಿಧನರಾಗಿದ್ದು, ಸಿನಿರಂಗವನ್ನೇ ಬೆಚ್ಚಿ ಬಿಳಿಸಿದೆ.

Written by - Krishna N K | Last Updated : May 2, 2024, 06:24 PM IST
    • ಪ್ರವೀಣ್ ಕುಮಾರ್ ಅವರ ಪ್ರತಿಭೆಗೆ ಸಿನಿ ಪ್ರೇಕ್ಷಕ ಫಿದಾ ಆಗಿದ್ದ.
    • ಸಂಗೀತ ಕ್ಷೇತ್ರದಲ್ಲಿ ಪ್ರವೀಣ್ ಕುಮಾರ್ ಅಚ್ಚಳಿಯದ ಹೆಸರು
    • ಸ್ಟಾರ್‌ ಪಟ್ಟಕ್ಕೇರುವ ಹೊತ್ತಿನಲ್ಲೇ ಪ್ರವೀಣ್‌ ಕೊನೆಯುಸಿರೆಳೆದಿದ್ದಾರೆ.
28 ವರ್ಷದ ಉದಯೋನ್ಮುಖ ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ನಿಧನ..! title=

Music Director Praveen : ಚಿತ್ರರಂಗಕ್ಕೆ ಬರಬೇಕು ಎನ್ನುವವರಿಗೆ ಅವಕಾಶಗಳು ಸುಲಭವಾಗಿ ಸಿಗುವುದಿಲ್ಲ. ಹೀಗಾಗಿಯೇ ಹಲವು ಸವಾಲುಗಳನ್ನು ಮೆಟ್ಟಿನಿಂತು ಸಾಧನೆ ಮಾಡಬೇಕಾಗುತ್ತದೆ. ಈ ಪೈಕಿ ಯುವ ಪ್ರತಿಭೆ ಪ್ರವೀಣ್ ಕುಮಾರ್ ಸಾಕಷ್ಟು ಕಟ್ಟು ಪಟ್ಟು ಕೊನೆಗೆ ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿದರು. ಆದರೆ ಸ್ಟಾರ್‌ ಪಟ್ಟಕ್ಕೇರುವ ಹೊತ್ತಿನಲ್ಲೇ ಪ್ರವೀಣ್‌ ಕೊನೆಯುಸಿರೆಳೆದಿದ್ದಾರೆ. 

ಹೌದು.. ತಮಿಳು ಸಿನಿರಂಗದಲ್ಲಿ ರಾಕಥಾನ್, ಮೇಡಗು ಎಂಬ ಸಿನಿಮಾಗಳಿಗೆ ಸಂಗೀತ ನೀಡಿರುವ ಪ್ರವೀಣ್ ಕುಮಾರ್ ಅವರ ಪ್ರತಿಭೆಗೆ ಸಿನಿ ಪ್ರೇಕ್ಷಕ ಫಿದಾ ಆಗಿದ್ದ. ಸಂಗೀತ ಕ್ಷೇತ್ರದಲ್ಲಿ ಪ್ರವೀಣ್ ಕುಮಾರ್ ಅಚ್ಚಳಿಯದ ಹೆಸರು ಅಂತ ಕೆಲ ಗಣ್ಯರು ಸಹ ಹೊಗಳುತ್ತಿದ್ದರು. ಆದರೆ ಯುವ ಸಂಗೀತ ನಿರ್ದೇಶಕ, ಇಂದು ಬೆಳಗ್ಗೆ 6:30ಕ್ಕೆ ಹಠಾತ್ ನಿಧನರಾಗಿದ್ದು, ಸಿನಿರಂಗವನ್ನೇ ಬೆಚ್ಚಿ ಬಿಳಿಸಿದೆ.

ಇದನ್ನೂ ಓದಿ: ಹರಿ ಹರ ವೀರಮಲ್ಲು ಟೀಸರ್‌ ಔಟ್‌..! ಅಬ್ಬರಿಸಿ ಬೊಬ್ಬಿರಿದ ಪವರ್‌ ಸ್ಟಾರ್‌ ‌ಪವನ್‌ ಕಲ್ಯಾಣ್‌

ಕೆಲ ವಾರಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರವೀಣ್‌ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈ ಹಿನ್ನೆಲೆ ಅವರನ್ನು ನಿನ್ನೆ ಮಧ್ಯಾಹ್ನ ಓಮಂದೂರರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ನಿರಂತರ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಪ್ರವೀಣ್‌ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಂಜಾವೂರಿನಲ್ಲಿ ನಡೆಯಲಿದೆ. ಪ್ರತಿಭಾವಂತ ಸಂಗೀತ ಸಂಯೋಜಕ ಪ್ರವೀಣ್ ಕುಮಾರ್ ಅವರು 28ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದು, ಚಿತ್ರರಂಗ ಮತ್ತು ಅವರ ಕುಟುಂಬದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News