Rishab Shetty : ಬಿದ್ದಲ್ಲಿಯೇ ಬೆಳೆಯಬೇಕು ಎಂಬ ಮಾತಿದೆ. ಆ ಮಾತು ರಿಷಬ್‌ ಶೆಟ್ಟಿ ಅವರ ವಿಚಾರದಲ್ಲಿ ಸೂಕ್ತ ಎನಿಸುತ್ತಿದೆ. ನಂಬಿಕೆ ಕಳೆದುಕೊಳ್ಳದೇ ಶ್ರಮಪಟ್ಟರೆ ಯಶಸ್ಸು ಸಿಕ್ಕೇ ಸಿಗುತ್ತದೆ. 7 ವರ್ಷಗಳ ಹಿಂದೆ ಮಂಗಳೂರಿನ ಯಾವ ಮಲ್ಟಿಪ್ಲೆಕ್ಸ್‌ ನಲ್ಲಿ ತಮ್ಮ ಸಿನಿಮಾದ ಒಂದೇ ಒಂದು ಶೂ ಪ್ರದರ್ಶನ ಕಾಣಲು ಪರದಾಡಿದ್ದರೋ, ಇಂದು ಅಲ್ಲಿಯೇ ಕಾಂತಾರ ಸಿನಿಮಾದ ಎಲ್ಲಾ ಶೋಗಳೂ ಹೌಸ್‌ಫುಲ್‌ ಆಗಿವೆ. 


COMMERCIAL BREAK
SCROLL TO CONTINUE READING

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಮತ್ತು ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ನಿರ್ಮಾಣದ   ಕಾಂತಾರ ಸಿನಿಮಾವು ಬಾಕ್ಸ್ ಆಫೀಸ್‌ ಮಾತ್ರವಲ್ಲ ಜನರ ಮನಸ್ಸನ್ನು ಸಹ ಗೆಲ್ಲುತ್ತಿದೆ. ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲೂ ಹೆಚ್ಚು ಶೋಗಳು ಹೌಸ್‌ ಫುಲ್ ಪ್ರದರ್ಶನ ಕಾಣುತ್ತಿವೆ. ಬೇರೆ ಭಾಷೆಯ ಜನ ಕೂಡ ರಿಷಬ್‌ ಶೆಟ್ಟಿಯ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಈ ಮಧ್ಯೆ ಅವರ 7 ವರ್ಷಗಳ ಹಿಂದಿನ ಪೋಸ್ಟ್‌ ಒಂದು ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿದೆ. 


ಇದನ್ನೂ ಓದಿ : ದೀಪಿಕಾ - ರಣವೀರ್‌ ಸಂಬಂಧದಲ್ಲಿ ಬಿರುಕು.! ರಣವೀರ್‌ ಸಿಂಗ್‌ ಹೀಗೆ ಹೇಳಿದ್ದೇಕೆ?


2016 ಜನವರಿ 22 ರಂದು ರಿಷಬ್ ಶೆಟ್ಟಿ ನಿರ್ದೇಶನದ ರಿಕ್ಕಿ ಚಿತ್ರ ಬಿಡುಗಡೆಯಾಗಿತ್ತು. ಆಗಿನ್ನು ರಿಷಬ್‌ ಶೆಟ್ಟಿ ಇಷ್ಟೊಂದು ಹೆಸರು ಮಾಡಿರಲಿಲ್ಲ. ರಿಕ್ಕಿ ರಿಷಬ್‌ ನಿರ್ದೇಶನದ ಮೊದಲ ಸಿನಿಮಾ ಆಗಿತ್ತು. ರಕ್ಷಿತ್ ಶೆಟ್ಟಿ ಹೀರೋ ಆಗಿ ನಟಿಸಿದ್ದರು. ಹರಿಪ್ರಿಯಾ ನಾಯಕಿಯಾಗಿದ್ದರು. ಒಂದೊಳ್ಳೆ ಕತೆ ಜೊತೆ ಪ್ರೇಮ ಕಹಾನಿ ಹೇಲಲು ಬಂದಿದ್ದ ರಿಕ್ಕಿ ಸಿನಿಮಾ ಅಂದುಕೊಂಡಮಟ್ಟದ ಸಕ್ಸಸ್‌ ಕೊಡಲಿಲ್ಲ. ಚಿತ್ರಮಂದಿರದ ಸಮಸ್ಯೆಯೇ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಅದರಲ್ಲೂ ಮಲ್ಟಿಪ್ಲೆಕ್ಸ್‌ನಲ್ಲಿ ಶೋ ಪಡೆಯಲು ಹರಸಾಹಸವನ್ನೇ ಮಾಡಬೇಕಿತ್ತು. ಇದೇ ಕಾರಣಕ್ಕಾಗಿ ರಿಷಬ್ ಶೆಟ್ಟಿ ಅಂದು ಇಂತಹದ್ದೊಂದು ಪೋಸ್ಟ್‌ ನ್ನು ಹಾಕಿಕೊಂಡಿದ್ದರು. 


 


Lady Finger Benefits : ಬೆಂಡೆಕಾಯಿಯಲ್ಲಿದೆ ಈ ರೋಗಗಳಿಗೆ ಪರಿಹಾರ.!


ಇದೀಗ ಮಂಗಳೂರಿನ ಅದೇ ಮಲ್ಟಿಪ್ಲೆಕ್ಸ್‌ನಲ್ಲಿ ಕಾಂತಾರ ಸಿನಿಮಾದ 10 ಕ್ಕೂ ಅಧಿಕ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿವೆ. ಅಲ್ಲದೇ ಸಿನಿಮಾ ನೋಡಲು ಬಯಸಿದರೂ ಟಿಕೆಟ್‌ ಸಿಗದೇ ಪ್ರೇಕ್ಷಕರು  ಪರದಾಡುವಂತಾಗಿದೆ. ಈ ಬಿಗ್‌ ಸಕ್ಸಸ್‌ ಖುಷಿಯಲ್ಲಿರುವಾಗ ನೆಟ್ಟಿಗರೊಬ್ಬರು ಅಂದು ರಿಷಬ್ ಮಾಡಿದ್ದ ಟ್ವೀಟ್ ನೆನಪಿಸಿ 'ಕಾಲಾಯಾ ತಸ್ಮೈ ನಮಃ' ಎಂದು ಪೋಸ್ಟ್‌ ಮಾಡಿದ್ದಾರೆ. ಇದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಸಿದ್ದು, ಒಂದೊಳ್ಳೆ ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಬರೆದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.