Kalki 2898 AD Updates: ಕಲ್ಕಿ 2898 AD ಸಿನಿಮಾ ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ, ಮೇಕಿಂಗ್‌ನಿಂದಲೇ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೀಗ ಇದೇ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸಾಥ್‌ ನೀಡಿದ್ದಾರೆ. ಅಂದರೆ, ಕಲ್ಕಿ ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ಬುಜ್ಜಿ ವಾಹನವನ್ನು ರೈಡ್‌ ಮಾಡಿದ್ದಾರೆ. ಅದೂ ಕುಂದಾಪುರದಲ್ಲಿ ಎಂಬುದು ವಿಶೇಷ!


COMMERCIAL BREAK
SCROLL TO CONTINUE READING

ಭೈರವನ ಆಪ್ತ ಬುಜ್ಜಿ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ ಕಂಪನಿಯ ಆನಂದ್‌ ಮಹೀಂದ್ರ ಸಹ ಇತ್ತೀಚೆಗಷ್ಟೇ ಈ ವಾಹನ ಏರಿದ್ದರು. ಇದೀಗ ಇದೇ ವಾಹನ ಕುಂದಾಪುರಕ್ಕೆ ಬಂದಿದೆ. ಸ್ಟೈಲಿಶ್‌ ಲುಕ್‌ನಲ್ಲಿ ಬುಜ್ಜಿಯನ್ನು ರೈಡ್‌ ಮಾಡಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು ವೈಜಯಂತಿ ಮೂವೀಸ್‌ ತನ್ನ ಅಧಿಕೃತ ಟ್ವಿಟರ್‌ ಪುಟದಲ್ಲಿ ಶೇರ್‌ ಮಾಡಿದ್ದು, ಕಲ್ಕಿ X ಕಾಂತಾರ ಎಂಬ ಕ್ಯಾಪ್ಷನ್‌ ನೀಡಿದೆ. 


ಇದನ್ನೂ ಓದಿ: ಈ ನಟಿಗೂ ಅಶ್ಲೀಲ ಮೆಸೇಜ್‌, ವಿಡಿಯೋ ಕಳಿಸಿದ್ದನಂತೆ ರೇಣುಕಾಸ್ವಾಮಿ.! 


ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ ಸಾಕಷ್ಟು ಸದ್ದು ಮಾಡುತ್ತಿದೆ. ವಿಭಿನ್ನ ಬಗೆಯ ಪ್ರಪಂಚವನ್ನೇ ತೋರಿಸಿದ್ದಾರೆ ನಿರ್ದೇಶಕರು. ಕಾಶಿಯನ್ನು ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ಅದರ ಉಳಿವಿಗಾಗಿ ನಡೆಯುವ ಹೋರಾಟವಿದು. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌ ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. 


 



 


'ಕಲ್ಕಿ 2898 AD' ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‌ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.


ಇದನ್ನೂ ಓದಿ: ಹೆಚ್ಚಾಯಿತು ‘ಕಲ್ಕಿ 2898 ಎಡಿ’ ಫೀವರ್..‌! ರಿಲೀಸ್‌ಗೂ ಮುನ್ನವೇ ಹೊಸ ದಾಖಲೆ ಬರೆದ ಡಾರ್ಲಿಂಗ್‌ ಸಿನಿಮಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.