Haripriya : ಸ್ಯಾಂಡಲ್‌ವುಡ್‌ನ ಸಿಂಹಪ್ರಿಯ ಜೋಡಿ ಎರಡು ತಿಂಗಳ ಹಿಂದೆ ಎಲ್ಲರಿಗೂ ಸರ್‌ಪ್ರೈಸ್‌ ಕೊಟ್ಟು ಮದುವೆಯಾಗಿದ್ದರು. ಇದೀಗ ಮತ್ತೊಮ್ಮೆ ಎಲ್ಲರಲ್ಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟುಹಾಕಿತ್ತು ಹರಿಪ್ರಿಯಾ ಅವರ ಪೋಸ್ಟ್‌. ಎಲ್ಲರೂ ಏನೇನೋ ಕಲ್ಪನೆ ಮಾಡ್ಕೊಂಡು, ಸಿಹಿ ಸುದ್ದಿ ಕೊಡ್ತಾರೇನೋ ಅಂತ ಕಾದು ಕುಳಿತಿದ್ದರು. ಇದೀಗ ಹರಿಪ್ರಿಯಾ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅದೂ ಎಲ್ಲರಿಗೂ ಸಂತಸ ತಂದಿದೆ. 


COMMERCIAL BREAK
SCROLL TO CONTINUE READING

ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ.‌ ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿಗಳಲ್ಲಿ ಸಿಂಹಪ್ರಿಯ ಜೋಡಿಯೂ ಒಂದು. ಫ್ಯಾನ್ಸ್‌ಗೆ ಸರ್ಪ್ರೈಸ್‌ ಕೊಡೋದ್ರಲ್ಲಿ ಈ ಲವ್‌ ಬರ್ಡ್ಸ್‌ ಎತ್ತಿದ ಕೈ. ಮತ್ತೊಮ್ಮೆ ಇನ್‌ಸ್ಟಾಗ್ರಾಮ್‌ ಮೂಲಕವೇ ಜನರ ತಲೆಗೆ ಹುಳಬಿಟ್ಟು, ಈಗ ಅದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ. 


ಇದನ್ನೂ ಓದಿ: ಹಿಂದೂ ವಿರೋಧಿ, ಉರಿಗೌಡ,ನಂಜೇಗೌಡ ವಿರುದ್ಧ ಬರಹ: ನಟ ಅಂಹಿಸಾ ಚೇತನ್ ಬಂಧನ


ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿ ಇದೇ ವರ್ಷ ಜನವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಷ್ಟು ದಿನ ಮದುವೆ, ಹನಿಮೂನ್ ಅನ್ನುತ್ತ ಫುಲ್‌ ಬ್ಯುಸಿಯಾಗಿದ್ದ ಈ ಕ್ಯೂಟ್‌ ಕಪಲ್‌ ಈಗ ಮತ್ತೆ ವೃತ್ತಿಜೀವನಕ್ಕೆ ಮರಳಿದ್ದಾರೆ. ಇದೀಗ ಹರಿಪ್ರಿಯಾ ಬಿಗ್ ಅಪ್‌ಡೇಟ್ ಒಂದನ್ನು ನೀಡಿದ್ದಾರೆ. 


 


 

 

 

 



 

 

 

 

 

 

 

 

 

 

 

A post shared by Hariprriya (@iamhariprriya)


 


ನಟಿ ಹರಿಪ್ರಿಯಾ ಇದೀಗ ಹೊಸ ಯೂಟೂಬ್‌ ಚಾನೆಲ್‌ ಒಂದನ್ನು ಓಪನ್‌ ಮಾಡಲಿದ್ದಾರೆ. ಈ ಬಗ್ಗೆ ಪ್ರಮೋಷನ್‌ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈ ಯೂಟೂಬ್‌ ಚಾನೆಲ್‌ ವಿಶೇಷ ಏನು? ಯಾವುದರ ಕುರಿತಾಗಿ ಮಾಹಿತಿ ನೀಡ್ತಾರೆ? ಎಂಬ ವಿಚಾರ ಮಾತ್ರ ಹೊರಬಿದ್ದಿಲ್ಲ. 


ಇದನ್ನೂ ಓದಿ:Pathaan On OTT: ಶಾರುಖ್ ಖಾನ್ ನಟನೆಯ ಪಠಾಣ್ ನಾಳೆ OTT ನಲ್ಲಿ ಬಿಡುಗಡೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.