Pooja Gandhi Marriage: ಮುಂಗಾರು ಮಳೆ ಸಿನಿಮಾದ ಮೂಲಕ ಸ್ಯಾಂಡಲ್ವುಡ್’ನಲ್ಲಿ ಖ್ಯಾತಿ ಪಡೆದ ಪೂಜಾ ಗಾಂಧಿ ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿದೆ. ನವೆಂಬರ್ 29ರಂದು ಬೆಂಗಳೂರಿನ ಲಾಜಿಸ್ಟಿಕ್‌ ಕಂಪನಿಯ ಮಾಲೀಕ ವಿಜಯ್‌ ಜೊತೆ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಪೂಜಾ ಗಾಂಧಿ ಯಾವುದೇ ಅಪ್ಡೇಟ್ ನೀಡಿಲ್ಲ,


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ತಂಡ ಟಿ20 ವಿಶ್ವಕಪ್’ನಲ್ಲಿ 'ಸೀರಿಯಸ್ ಚಾಲೆಂಜರ್' ಆಗಿ ಕಣಕ್ಕಿಳಿಯಲಿದೆ ಎಂದ ರವಿಶಾಸ್ತ್ರಿ


ಅಂದಹಾಗೆ ನಟಿ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದು ವಿಜಯ್ ಅವರೇ ಎನ್ನಲಾಗಿದೆ. ಬಂಗಾಳಿ ಮೂಲದವರಾದ ಪೂಜಾ ಗಾಂಧಿ ಸ್ಯಾಂಡಲ್ವುಡ್’ಗೆ ಎಂಟ್ರಿ ಕೊಡುವಾಗ ಕನ್ನಡ ಬರುತ್ತಿರಲಿಲ್ಲ. ಆ ಬಳಿಕ ವಿಜಯ್ ಸಹಾಯ ಪಡೆದುಕೊಂಡಿದ್ದರಂತೆ. ಇದೀಗ ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುತ್ತಿರುವ ಪೂಜಾ, ಸಿನಿಮಾದಲ್ಲಿ ನಟನೆ ಮಾಡುತ್ತಾ ಡಬ್ಬಿಂಗ್‌ ಕೂಡ ತಾವೇ ಮಾಡುತ್ತಿದ್ದಾರೆ.


ಇನ್ನು ಪೂಜಾ ಗಾಂಧಿ ಮತ್ತು ವಿಜಯ್‌ ಅವರು ನವೆಂಬರ್ 29ರಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ:ಮಹಿಳೆಯರ ದೇಹದ ಈ ಭಾಗದಲ್ಲಿ ಕೂದಲು ಇರೋದು ಶುಭಸಂಕೇತ: ಇವರಷ್ಟು ಲಕ್ಕಿ ಜಗತ್ತಲ್ಲಿ ಮತ್ಯಾರೂ ಇರಲ್ಲ


ಈ ಹಿಂದೆ 2012ರಲ್ಲಿ ಪೂಜಾ ಗಾಂಧಿ ಕೈಗಾರಿಕೋದ್ಯಮಿ ಆನಂದ್‌ ಗೌಡ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಎಂಗೇಜ್‌ಮೆಂಟ್‌ ಆದ ಕೆಲ ತಿಂಗಳಲ್ಲೇ ಈ ಮದುವೆ ಪ್ರಸ್ತಾಪ ಮುರಿದುಬಿದ್ದಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ