ಬೆಂಗಳೂರು. ಸರ್ಜಾ ಫ್ಯಾಮಿಲಿಯಲ್ಲಿ (Sarja Family) ಇವತ್ತು ಡಬ್ಬಲ್ ಖುಷಿ. ಮೂರು ವರ್ಷದ ಬ್ರೇಕ್ ನಂತರ ಧ್ರುವ ಸರ್ಜಾ ಅಭಿನಯದ ಪೊಗರು (Pogaru Release) ತೆರೆ ಮೇಲೆ ಭರ್ಜರಿ ಎಂಟ್ರಿ ಕೊಟ್ಟಿದೆ. ಧ್ರುವ ಸರ್ಜಾ (Dhruva Sarja)  ಲುಕ್ ಗೆ  ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಮತ್ತೊಂದೆಡೆ ಚಿರಂಜೀವಿ ಸರ್ಜಾ (Chiranjeevi Sarja) ಅಭಿನಯದ ರಾಜಮಾರ್ತಾಂಡ ಟ್ರೇಲರ್ (Rajamartanda Trailer) ರಿಲೀಸ್ ಆಗಿದೆ. ಅದರಲ್ಲೊಂದು ಸ್ಪೆಷಾಲಿಟಿ ಕೂಡಾ ಇದೆ. ರಾಜಮಾರ್ತಾಂಡ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು, ಮತ್ಯಾರೂ ಅಲ್ಲ ಜ್ಯೂನಿಯರ್ ಚಿರು (Junior Chiru). ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ (Meghana Raj)  ಮುದ್ದು ಕಂದ ಈ ಜೂ. ಚಿರು. ತಮ್ಮ ಮುದ್ದು ಕೈಗಳಿಂದಲೇ ವಿಡಿಯೋ ಪ್ಲೇ ಮಾಡುವ ಮೂಲಕ, ಜೂ. ಚಿರು ರಾಜಮಾರ್ತಾಂಡ ಟ್ರೇಲರ್ ರಿಲೀಸ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಬೆಳಗ್ಗೆ 7 ಗಂಟೆಗೆ ರಾಜಮಾರ್ತಾಂಡ ಚಿತ್ರದ ಟ್ರೇಲರ್ (trailer) ಬಿಡುಗಡೆಯಾಗಿದೆ. ಚಿರು ಅಭಿಮಾನಿಗಳಿಗೆ ಇದರಿಂದ ತುಂಬಾ ಸಂತಸವಾಗಿದೆ. ರಾಜಾ ಮಾರ್ತಾಂಡ ಟ್ರೇಲರ್ ಗೆ ಕಂಠದಾನ ಮಾಡಿದ್ದು ಧ್ರುವ ಸರ್ಜಾ.  ರಾಜಮಾರ್ತಾಂಡ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರ. 


 

 

 

 



 

 

 

 

 

 

 

 

 

 

 

A post shared by Meghana Raj Sarja (@megsraj)


 


ಇದನ್ನೂ ಓದಿ : Raghavendra Rajkumar: ಆಸ್ಪತ್ರೆಗೆ ದಾಖಲಾದ ನಟ ರಾಘವೇಂದ್ರ ರಾಜಕುಮಾರ್..!


ಪೊಗರು (Pogaru) ರಿಲೀಸ್ ಆಗುತ್ತಿರುವ ಥಿಯೇಟರ್ ಗಳಲ್ಲಿಯೇ ರಾಜಮಾರ್ತಾಂಡ ಟ್ರೇಲರ್ ಕೂಡಾ ತೋರಿಸಲು ಸಿದ್ದತೆ ನಡೆದಿದೆ.  ಒಂದೇ ದಿನ ಸಹೋದರರಿಬ್ಬರೂ ಬಿಗ್ ಸ್ಕ್ರೀನ್ನಲ್ಲಿ ರಾರಾಜಿಸಲಿದ್ದಾರೆ. ಧ್ರುವ ಸರ್ಜಾ ಸಿನೆಮಾ ಮತ್ತು ಚಿರಂಜೀವಿ ಸರ್ಜಾ (Chiranjeevi Sarja) ಟ್ರೇಲರ್ ಟಾಕೀಸ್ ಗಳಲ್ಲಿ  ಆರ್ಭಟಿಸುತ್ತಿವೆ. 


ಚಿರಂಜೀವಿ ಸರ್ಜಾ ಜೂ. 7, 2020ರಂದು ಕೊನೆಯುಸಿರೆಳೆದಿದ್ರು. ಅಕ್ಟೋಬರ್ 22, 2020ರಂದು ಜೂ. ಚಿರು ಜನನವಾಗಿತ್ತು.


ಇದನ್ನೂ ಓದಿ : 'ಸಿಂಬಾ' ಅಭಿಮಾನಿಗಳಿಗೆ 'ಜೂ.ಸರ್ಜಾ'ರನ್ನು ಪರಿಚಯಿಸಿದ ಮೇಘನಾ ರಾಜ್.!


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.