VIDEO: ಬಿಡುಗಡೆಯಾಗುತ್ತಲೇ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದೆ ಈ ಚಿತ್ರದ ಟ್ರೈಲರ್

ಸೈಬರ್ ಕ್ರೈಂ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಇಂಟರ್ ನೆಟ್ ನಲ್ಲಿ ಹಂಚಿಕೊಳ್ಳಲಾಗುವ ಸಣ್ಣ ಪುಟ್ಟ ಮಾಹಿತಿಗಳು ಯಾವ ರೀತಿಯ ಗಂಡಾಂತರಕ್ಕೆ ದಾರಿಯಾಗುತ್ತವೆ ಮತ್ತು ಎಷ್ಟು ಹಾನಿ ಉಂಟುಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ನೀಡಲಿದೆ.

Updated: Jan 20, 2020 , 06:56 PM IST
VIDEO: ಬಿಡುಗಡೆಯಾಗುತ್ತಲೇ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದೆ ಈ ಚಿತ್ರದ ಟ್ರೈಲರ್

ನವದೆಹಲಿ:ಕಿರುತೆರೆಯಲ್ಲಿ ಭಾರಿ ಹವಾ ಸೃಷ್ಟಿಸಿರುವ ನಟಿ ಹೀನಾ ಖಾನ್ ಇದೀಗ ದೊಡ್ಡ ಪರದೆಯ ಮೇಲೆ ತನ್ನ ಛಾಪು ಮೂಡಿಸಲು ಸಿದ್ಧರಾಗಿದ್ದಾರೆ. ವಿಕ್ರಂ ಭಟ್ ಅವರ ಜೊತೆ ಹೀನಾ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡಲಿದ್ದಾರೆ. ಹೀನಾ ಅಭಿನಯಿಸುತ್ತಿರುವ ಈ ಚಿತ್ರದ ಟೈಟಲ್ 'ಹ್ಯಾಕಡ್ (HACKED)' ಆಗಿದ್ದು, ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ ಬಿಡುಗಡೆಯಾಗುತ್ತಿದ್ದಂತೆ ಇಂಟರ್ ನೆಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಲ್ರಾರಂಭಿಸಿದೆ. ಸದ್ಯ ಈ ಚಿತ್ರದ ಕಾನ್ಸೆಪ್ಟ್ ಜನರಿಗೆ ಭಾರಿ ಮೆಚ್ಚುಗೆಯಾಗುತ್ತಿದ್ದು, ಚಿತ್ರ ಮುಂದಿನ ತಿಂಗಳು ಅಂದರೆ ಫೆಬ್ರವರಿ 7ನೇ ತಾರೀಖಿಗೆ ಬಿಡುಗಡೆಯಾಗಲಿದೆ.
ಸೈಬರ್ ಕ್ರೈಂ ಮೇಲೆ ಬೆಳಕು ಚೆಲ್ಲುವ ಈ ಚಿತ್ರ ಇಂಟರ್ ನೆಟ್ ನಲ್ಲಿ ಹಂಚಿಕೊಳ್ಳಲಾಗುವ ಸಣ್ಣ ಪುಟ್ಟ ಮಾಹಿತಿಗಳು ಯಾವ ರೀತಿಯ ಗಂಡಾಂತರಕ್ಕೆ ದಾರಿಯಾಗುತ್ತವೆ ಮತ್ತು ಎಷ್ಟು ಹಾನಿ ಉಂಟುಮಾಡುತ್ತವೆ ಎಂಬ ಎಚ್ಚರಿಕೆಯನ್ನೂ ಸಹ ನೀಡಲಿದೆ. ಈ ಚಿತ್ರದಲ್ಲಿ ಹೀನಾ ಒಂದು ಫ್ಯಾಶನ್ ಪತ್ರಿಕೆಯ ಸಂಪಾದಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಹೀನಾ ಪಾತ್ರ ತುಂಬಾ ಗ್ಲಾಮರಸ್ ಆಗಿದೆ. 'ಲೋನರ್ ಎಂಗರ್' ಪ್ರೊಡಕ್ಷನ್ ಅಡಿ ಬಿತ್ತರಗೊಳ್ಳಲಿರುವ ಹಾಗೂ ಆರ್.ಪಿ ಠಕ್ಕರ್-ಕೃಷ್ಣಾ ಭಟ್ ಅವರು ನಿರ್ಮಿಸಿರುವ ಈ ಚಿತ್ರದಲ್ಲಿ ರೋಹನ್ ಶಾ, ಮೋಹಿತ್ ಮಲ್ಹೊತ್ರಾ ಹಾಗೂ ಸಿಡ್ ಮಕ್ಕಾಡ್ ಕೂಡ ಅಭಿನಯಿಸಿದ್ದಾರೆ.

ಇತ್ತೀಚೆಗಷ್ಟೇ ಹೀನಾ ತಮ್ಮ ಮಾಲ್ಡೀವ್ಸ್ ಪ್ರವಾಸದಿಂದ ಹಿಂದಿರುಗಿದ್ದಾರೆ. ಮಾಲ್ಡೀವ್ಸ್ ನಿಂದ ಅವರು ಹಂಚಿಕೊಂಡ ಫೋಟೋಗಳು ಇಂದಿಗೂ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೀಕ್ಷಣೆಗೆ ಒಳಗಾಗುತ್ತಿವೆ. ಕಿರುತೆರೆಯಲ್ಲಿ ಮೂಡಿ ಬಂದ 'ಏ ರಿಷ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿಯ ಅಕ್ಷರಾ ಭೂಮಿಕೆಯ ಮೂಲಕ ಮನೆಮಾತಾಗಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿಯೂ ಕೂಡ ಹೀನಾ ಭಾಗವಹಿಸಿದ್ದರು. ಮಾಧ್ಯಮಗಳ ವರದಿ ಪ್ರಕಾರ ಹೀನಾ ಓರ್ವ ಪ್ರತಿಭಾವಂತ ಕಲಾವಿದೆಯಾಗುವುದರ ಜೊತೆಗೆ ಉತ್ತಮ ಡಿಸೈನರ್ ಕೂಡ ಆಗಿದ್ದಾರೆ. ಅಕ್ಟೋಬರ್ 2, 1987ರಲ್ಲಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಹುಟ್ಟಿರುವ ಹೀನಾ, ಆರಂಭದಲ್ಲಿ ಓರ್ವ ಪತ್ರಕರ್ತೆಯಾಗಿ ತಮ್ಮ ಕರಿಯರ್ ಆರಂಭಿಸುವಲ್ಲಿ ಆಸಕ್ತಿ ಹೊಂದಿದ್ದರು. ಆದರೆ, ನಂತರ ಗಗನಸಖಿ ತರಬೇತಿ ಪಡೆದ ಹೀನಾ ಅಭಿನಯ ರಂಗಕ್ಕೆ ಕಾಲಿಟ್ಟರು ಎನ್ನಲಾಗಿದೆ.