ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬೃಹತ್ ಡ್ರಗ್ಸ್ ಮಾಫಿಯಾ ( Drugs Mafia) ಒಂದೆಡೆ ಕನ್ನಡ ಚಿತ್ರರಂಗವನ್ನು ತಬ್ಬಿಬ್ಬುಗೊಳಿಸಿದೆ. ಇನ್ನೊಂದೆಡೆ ರಾಜಕಾರಣಿಗಳ ಮಕ್ಕಳಿಗೂ ಕಂಟಕ ತರುವಹಂತದಲ್ಲಿದೆ. ಅಲ್ಲದೆ ಸೆಲೆಬ್ರಿಟಿಗಳ ವೈಯಕ್ತಿಕ ಸಂಬಂಧ, ವೈವಾಹಿಕ ಸಂಬಂಧದ ಮೇಲೂ ದುಷ್ಪರಿಣಾಮ ಬೀರುವ ಹಂತ ತಲುಪಿದೆ. 


COMMERCIAL BREAK
SCROLL TO CONTINUE READING

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ‌ ಕ್ರೈಂ ಬ್ರಾಂಚ್ ಪೊಲೀಸರ ವಿಚಾರಣೆ ವೇಳೆ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಗೆಳೆಯ ರವಿಶಂಕರ್ ನೀಡಿರುವ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ. ರವಿಶಂಕರ್ ಅವರು ವಿಚಾರಣೆ ವೇಳೆ 'ತಾನು ಮತ್ತು ರಾಗಿಣಿ ದ್ವಿವೇದಿ ಲೀವಿಂಗ್ ಟುಗೆದರ್ ಶಿಪ್ ನಲ್ಲಿದ್ದೇವೆ' ಎಂದು ಹೇಳಿರುವುದಾಗಿ ತಿಳಿದುಬಂದಿದೆ.


ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ಚಿತ್ರನಟಿ ರಾಗಿಣಿ ಮನೆ ಮೇಲೆ ಪೊಲೀಸ್ ದಾಳಿ


ಅಷ್ಟೇಯಲ್ಲ, ರಾಗಿಣಿ ದ್ವಿವೇದಿ (Ragini Dwivedi)ಗಾಗಿ ತಾನು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಕೆಲವೊಮ್ಮೆ ಒಂದೇ ದಿನ 1ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದೇನೆ ಎಂದು ರವಿಶಂಕರ್ ವಿಚಾರಣೆ ವೇಳೆ ಬಾಯಿಬಿಟ್ಟಿರುವುದಾಗಿ ಗೊತ್ತಾಗಿದೆ.


ರಾಗಿಣಿ ದ್ವಿವೇದಿ ಸ್ನೇಹಿತ ಎಂದು ಹೇಳಲಾಗುತ್ತಿರುವ ರವಿಶಂಕರ್ (Ravishankar) ಬೆಂಗಳೂರಿನ ಜಯನಗರದ ಆರ್ ಟಿಓ (RTO) ಕಚೇರಿಯ ಸಿಬ್ಬಂದಿಯಾಗಿದ್ದಾರೆ. ಹಾಗಾಗಿ ಅವರಿಗೆ ಬರುವ ಸಂಬಳದಲ್ಲಿ ರಾಗಿಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಿಸಿಬಿ ಅಧಿಕಾರಿಗಳನ್ನು ಕಾಡುತ್ತಿದೆ. ಮುಂದೆ ಇದರ ಬಗ್ಗೆ ಕೂಡ ವಿಚಾರಣೆ ನಡೆಯಲಿದೆ.


ರವಿಶಂಕರ್,  'ತಾನು ಮತ್ತು ರಾಗಿಣಿ ದ್ವಿವೇದಿ ಲೀವಿಂಗ್ ಟುಗೆದರ್ ಶಿಪ್ ನಲ್ಲಿದ್ದೇವೆ. ರಾಗಿಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಕೆಲವೊಮ್ಮೆ ಒಂದೇ ದಿನ 1ಲಕ್ಷ ರೂಪಾಯಿ ಖರ್ಚು ಮಾಡ್ತಿದ್ದೇನೆ' ಎಂದು ಹೇಳಿದ ಹಿನ್ನೆಲೆಯಲ್ಲೇ ರಾಗಿಣಿ ದ್ವಿವೇದಿಗೆ ಕಾಲವಕಾಶ‌ ಕೊಡದೆ ಇಂದೇ (ಸೆಪ್ಟೆಂಬರ್ 4) ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಇಂದು ಮುಂಜಾನೆಯೇ ರಾಗಿಣಿ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.


ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಧಂಧೆ ಬಗ್ಗೆ ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲೇಬೇಕು ನಟಿ ರಾಗಿಣಿ


ನಿನ್ನೆ ಬೆಳಿಗ್ಗೆ 10 ಗಂಟೆಗೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಬರುವಂತೆ ನಟಿ ರಾಗಿಣಿ ದ್ವಿವೇದಿಗೆ ನೊಟೀಸ್ ನೀಡಲಾಗಿತ್ತು.‌ ತಮ್ಮ ವಕೀಲರನ್ನು ಸಿಸಿಬಿ ಕಚೇರಿಗೆ ಕಳುಹಿಸಿದ್ದ ರಾಗಿಣಿ ದ್ವಿವೇದಿ 'ನನಗೆ ನೊಟೀಸ್ ಬಂದಿದೆ, ಆದರೆ ಬಹಳ‌ ಕಡಿಮೆ ಸಮಯ ಇದೆ. ಜೊತೆಗೆ ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. 


ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಹಿನ್ನಲೆಯಲ್ಲಿ 15 ನಟ-ನಟಿಯರಿಗೆ ಸಿಸಿಬಿ ನೊಟೀಸ್ ಸಾಧ್ಯತೆ


‌ಮುಂದಿನ ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ' ಎಂದು ಮನವಿ ಮಾಡಿದ್ದರು. ಬಳಿಕ‌ ಇದನ್ನು ಟ್ವೀಟ್ ಮುಖಾಂತರವೂ ತಿಳಿಸಿದ್ದರು. ಆದರೆ ರಾಗಿಣಿ ದ್ವಿವೇದಿಗೆ ಸೋಮವಾರದವರೆಗೆ ಕಾಲವಕಾಶ ನೀಡದ ಸಿಸಿಬಿ ಪೊಲೀಸರು ಇಂದೇ ವಿಚಾರಣೆಗೆ ಹಾಜರಾಗಬೇಕು. ಇಲ್ಲದಿದ್ದರೆ ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಒಂದೊಮ್ಮೆ ರಾಗಿಣಿ ದ್ವಿವೇದಿ ಇವತ್ತು ಸಹ ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ನೇರವಾಗಿ ವಶಕ್ಕೆ ಪಡೆಯುವ ಸಾಧ್ಯತೆಯೂ ಇರುತ್ತದೆ.