ಹೇಗಿದೆ ನೋಡಿ ಗುಳಿ ಕೆನ್ನೆ ಬೆಡಗಿಯ ಸಿನಿ ಎಂಟ್ರಿ..
ಚಂದನವನದ ಪ್ರಮುಖ ನಾಯಕ ನಟಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
ಬಿಂದಿಯಾ ರಾಮ್ ಕಿರುತೆರೆ ಎಂಟ್ರಿ.....
ರಚಿತಾ ರಾಮ್ ಬಾಲ್ಯದ ಹೆಸರು ಬಿಂದಿಯಾ ರಾಮ್. ರಚಿತಾರ ತಂದೆ ರಾಮ್ ಪ್ರಮುಖ ಭರತನಾಟ್ಯ ಕಲಾವಿದ. ಕಥಕ್ ಮತ್ತು ಭರತನಾಟ್ಯದಲ್ಲಿ ತರಬೇತಿ ಪಡೆದ ರಚಿತಾ ರಾಮ್ ಸುಮಾರು 50 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಸಹೋದರಿ ನಿತ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ `ಬೆಂಕಿಯಲ್ಲಿ ಅರಳಿದ ಹೂವು' ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಅರಸಿ' ಸೀರಿಯಲ್‌ನಲ್ಲಿ ಪ್ರಮುಖ ಪಾತ್ರಧಾರಿಯಾಗಿ ನಟಿಸಿ ಎಲ್ಲರ ಮನಸ್ಸನ್ನು ಕದ್ದಿದ್ದರು.
ಚಂದನವನದಲ್ಲಿ ರಚಿತಾ ರಾಮ್ ಮೊದಲ ಚಿತ್ರ...
2013ರಲ್ಲಿ ತೆರೆಕಂಡ 'ಬುಲ್‌ಬುಲ್' ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಕಾಲಿಟ್ಟ ರಚಿತಾ ರಾಮ್, ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ನಂತರ `ಅಂಬರೀಶ್, ಚಿತ್ರದಲ್ಲಿ ಡಿಬಾಸ್ ಜೊತೆ ತೆರೆ ಹಂಚಿಕೊಂಡಿದ್ದರು. ಅದೇ ರೀತಿ ಗೋಲ್ಡ್ ನ್ ಸ್ಟಾರ್ ಜೊತೆ `ದಿಲ್ ರಂಗೀಲಾ' ಚಿತ್ರದಲ್ಲಿ ಕಾಣಿಸಿಕಂಡ ರಚಿತಾರಾಮ್ ಎಲ್ಲ ಪ್ರಮುಖ ನಟರೊಂದಿಗೆ ಸ್ಕ್ರೀನ್ ಷೇರ್ ಮಾಡಿಕೊಂಡಿದ್ದಾರೆ. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು.
ಬಿಂದಿಯಾ ರಾಮ್ ಅಲಿಯಾಸ್ ರಚಿತಾ ರಾಮ್..
ಕಿರುತೆರೆಯಲ್ಲಿ ರಚಿತಾರ ಹೆಸರು `ಬಿಂದಿಯಾ ರಾಮ್' ಎಂದೇ ಬಳಕೆಯಲ್ಲಿತ್ತು. ಆದರೆ ಕನ್ನಡ ಚಿತ್ರರಂಗದಲ್ಲಿ `ಹಳ್ಳಿಮೇಷ್ಟ್ರು' ಮತ್ತು `ರಾಯರು ಬಂದರು ಮಾವನ ಮನೆಗೆ' ಚಿತ್ರಗಳ ಖ್ಯಾತಿ ನಟಿ `ಬಿಂದಿಯಾ' ಹೆಸರು ಮೊದಲೇ ಪ್ರಸ್ತುತದಲ್ಲಿತ್ತು. ಆದ್ದರಿಂದ ತಮ್ಮ ಮೊದಲ ಚಿತ್ರದಲ್ಲಿಯೇ ತಮ್ಮ ಹೆಸರನ್ನು ರಚಿತಾ ರಾಮ್ ಎಂದು ಬದಲಿಸಿಕೊಂಡರು.
ಇದನ್ನೂ ಓದಿ-ಹಸೆಮಣೆ ಏರೋಕೆ ರೆಡಿಯಾದ ಕಿರುತೆರೆ ಜೋಡಿ...
ರಿಯಾಲಿಟಿ ಶೋಗಳಲ್ಲಿ ರಚಿತಾ ರಾಮ್ ..
ಚಂದನವನದ ಬುಲ್‌ಬುಲ್ ಚಿತ್ರ ತೆರೆಕಾಣುವ ಮುನ್ನ 2013 ರಲ್ಲಿ ರಚಿತಾ ರಾಮ್ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಸಂದರ್ಶನವೊಂದರಲ್ಲಿ ``ನಾನು ಈಗಿನ ರಿಯಾಲಟಿ ಶೋಗಳ ಬಗ್ಗೆ ತುಂಬಾ ಆಕರ್ಷಿತಳಾಗಿದ್ದೇನೆ. ನಾನು ಯಾವುದಾದರೂ ಒಂದು ರಿಯಾಲಿಟಿ ಶೋ ನಿರೂಪಕಿಯಾಗಬೇಕು'' ಎಂದು ಹೇಳದ್ದರು. 2016ರಲ್ಲಿ ಉದಯ ಟಿವಿಯ `ಕಿಕ್' ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸದರು .ಆದರೆ ನಿರೂಪಕಿಯಾಗಿ ಅಲ್ಲ,ಬದಲಾಗಿ ಶೋ ಜಡ್ಜ್ ಆಗಿ. ನಂತರ `ಕಾಮಿಡಿ ಟಾಕೀಸ್',`ಮಜಾಭಾರತ- 2' ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.
ಚಿತ್ರ ನಿರ್ಮಾನದಲ್ಲಿ ರಚ್ಚು..
ರಚಿತಾ ರಾಮ್, ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್‌ರ ಪತ್ನಿ ರಾಗಿಣಿ ಚಂದ್ರನ್ ಅಭಿನಯದ `ರಿಷಭಪ್ರಿಯ' ಎಂಬ ಡಾಕುಮೆಂಟರಿಯನ್ನು ನಿರ್ಮಿಸುವುದ ಮೂಲಕ ಚಿತ್ರ ನಿರ್ಮಾಣದಲ್ಲಿ ಮೊದಲ ಹೆಜ್ಜೆಯನ್ನಿಟ್ಟರು. ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು, ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ಹೀಗೆ ರಚಿತಾ ರಾಮ್ ಕೇವಲ ನಟನೆಗೆ ಸೀಮಿತವಾಗಿರದೇ ನಿರೂಪಕಿಯಾಗಿ, ಜಡ್ಜ್ ಆಗಿ, ಈದೀಗ ನಿರ್ಮಾಪಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ಬಹು ಬೇಡಿಕೆಯ ನಟಿಯಾಗಿದ್ದಾರೆ.
ಇದನ್ನೂ ಓದಿ-ಸತ್ಯ ಕಥೆ ಆಧರಿಸಿದ ʼಕ್ರಿಸ್ಟಿʼ ಸಿನಿಮಾ ಟ್ರೈಲರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.