ಹಸೆಮಣೆ ಏರೋಕೆ ರೆಡಿಯಾದ ಕಿರುತೆರೆ ಜೋಡಿ...

ಕಳೆದ ವರ್ಷ ಕಿರುತೆರೆಯಲ್ಲಿ ಹಲವು ಜೋಡಿಗಳು ಸಪ್ತಪದಿ ತುಳಿದಿದ್ದರು. ನಿಶ್ಚಿತಾರ್ಥ ಮಾಡಿಕೊಂಡ ಜೋಡಿಗಳೆಲ್ಲಾ ಮದುವೆಯಾಗುವ ಕನಸು ಕಾಣುತ್ತಿದ್ದಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ಕಲಾವಿದರ ಮದುವೆಯನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುತ್ತಾರೆ. ಅಂತವರಿಗೆ ಕುಷಿ ನೀಡುವ ವಿಚಾರ ಒಂದಿದೆ.   

Written by - Zee Kannada News Desk | Last Updated : Feb 11, 2023, 01:56 PM IST
  • ಸದ್ದಿಲ್ಲದೇ ಸುದ್ದಿಯಾದ ಧಮಾಕ ಜೋಡಿ
  • ಸದ್ಯಕ್ಕೆ ಗೋವಾದಲ್ಲಿ ಮಿಂಚುತ್ತಿರುವ ಕ್ಯೂಟ್‌ ಜೋಡಿ
  • ಸಪ್ತಪದಿ ತುಳಿಯಲು ರೆಡಿಯಾದ ಮಾಸ್‌ ಜೋಡಿ
ಹಸೆಮಣೆ ಏರೋಕೆ ರೆಡಿಯಾದ ಕಿರುತೆರೆ ಜೋಡಿ... title=

ಸ್ವಲ್ಪ ದಿನಗಳ ಹಿಂದೆ ಎಂಗೇಜ್‌ ಆಗಿದ್ದ ಜೋಡಿ ಈದೀಗ ಮದುವೆಗೂ ಸಜ್ಜಾಗಿದೆ.ಯಾರು ಅಂದುಕೊಂಡ್ರಾ ಅವರೇ ಪಾರು ಸೀರಿಯಲ್ ನ ಸಿದ್ದು ಹಾಗೂ ಗಟ್ಟಿಮೇಳ ಖ್ಯಾತಿಯ ಪ್ರೀಯಾ ಆಚಾರ್.‌ ಈ ಜೋಡಿ ಎಲ್ಲರ ಮನಸ್ಸನ್ನ ಕದ್ದಿರೋ ಜೋಡಿ ಅಂದ್ರೆ ತಪ್ಪಾಗಲ್ಲ. 

ಸದ್ದಿಲ್ಲದೇ ಸುದ್ದಿಯಾದ ಧಮಾಕ ಜೋಡಿ .. 
ಸದ್ದಿಲ್ಲದೇ ಸುದ್ದಿಯಾದ ಈ ಜೋಡಿ ಯಾರಿಗೂ ಹೇಳದೇ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರಿಬ್ಬರು ಮೊದಲು ಬೇಟಿಯಾಗಿದ್ದು ಡ್ಯಾನ್ಸ್ ಶೋ ಒಂದರಲ್ಲಿ. ಪರಿಚಯದ ಬಳಿಕ ಪ್ರೀತಿಸಲು ಶುರು ಮಾಡಿದ ಈ ಜೋಡಿ 'ಧಮಾಕ' ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆದರೆ, ಇಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ರಹಸ್ಯವಾಗಿಯೇ ಇಡಲಾಗಿತ್ತು. ಇದು ಇವರ ನಿಶ್ಚಿತಾರ್ಥದ ದಿನ ಬಹಿರಂಗವಾಗಿ ದೊಡ್ಡ ಸುದ್ದಿಯಾಗಿತ್ತು.

ಸ್ಯಾಂಡಲ್‌ ವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾದ ಪ್ರೀತು ಅಲಿಯಾಸ್‌ ಸಿದ್ದುಮೂಲಿಮನಿ.. 
ಸಿನಿಮಾಗಳಲ್ಲಿ ಸಿದ್ದು ಬ್ಯುಸಿ ಪ್ರಿಯಾ ಜೆ ಆಚಾರ್ ಮತ್ತು ಸಿದ್ದುಮೂಲಿಮನಿ ಜೀ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಪ್ರಿಯಾ ಅದಿತಿ ಪಾತ್ರದಲ್ಲಿ 'ಗಟ್ಟಿಮೇಳ' ಸೀರಿಯಲ್ ನಲ್ಲಿ ನಟಿಸುತ್ತಿದ್ದರೆ, 'ಪಾರು' ಧಾರಾವಾಹಿಯಲ್ಲಿ ಸಿದ್ದು ಮೂಲಿಮನಿ ಪ್ರೀತಂ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಪ್ರಿಯಾ ಅವರಿಗೆ ನಟನೆ ಹೊಸದು. ಮೂಲತಃ ಉತ್ತರ ಕರ್ನಾಟಕದವರಾದರೂ ಅಚ್ಚ ಕನ್ನಡದಲ್ಲಿ ಮಾತನಾಡುತ್ತಾರೆ. 'ಪಾರು' ಧಾರಾವಾಹಿಯಲ್ಲಿ ಪ್ರೀತು ಎಂದೇ ಚಿರಪರಿಚಿತರಾಗಿರುವ ನಟ ಸಿದ್ದು ಮೂಲಿಮನಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 'ರಂಗಿತರಂಗ', 'ವಿಕ್ರಾಂತ್ ರೋಣ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ ಅವರ ಕೈಯಲ್ಲಿ ಸದ್ಯ ಸಾಕಷ್ಟು ಸಿನಿಮಾಗಳಿವೆ.

ಇದನ್ನೂ ಓದಿ- ಬಾಕ್ಸ್‌ ಆಫೀಸ್‌ ಸುಲ್ತಾನನ ಸಿನಿ ಜರ್ನಿ ಹೇಗಿದೆ ನೀವೆ ನೋಡಿ ....

ಸದ್ಯಕ್ಕೆ ಗೋವಾದಲ್ಲಿ ಮಿಂಚುತ್ತಿರುವ ಕ್ಯೂಟ್‌ ಜೋಡಿ.. 
ಕಡಲ ತೀರದಲ್ಲಿ ಮಿಂಚಿದ ಜೋಡಿ ಪ್ರೀ ವೆಡ್ಡಿಂಗ್ ಶೂಟಿಂಗ್‌ಗಾಗಿ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಗೋವಾಗೆ ಹಾರಿದ್ದಾರೆ. ಗೋವಾದ ಕಡಲ ತೀರದಲ್ಲಿ ರೊಮ್ಯಾಂಟಿಕ್ ಆಗಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ವೈಟ್ ಟೀ-ಶರ್ಟ್ ಅಂಡ್ ಆರೇಂಜ್ ಶಾರ್ಟ್ಸ್‌ನಲ್ಲಿ ಸಿದ್ದು, ಪ್ರಿಯಾ ಆರೇಂಜ್ ಟೀ ಶರ್ಟ್‌ಗೆ ವೈಟ್ ಸ್ಕರ್ಟ್ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಇದರ ಜೊತೆಗೆ ವೈಟ್ ಗೌನ್ ಹಾಗೂ ಕ್ರೀಮ್‌ಸೂಟ್‌ನಲ್ಲೂ ಫೊಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಟಿವಿ ಕಾರ್ಯಕ್ರಮದಲ್ಲಿ ಸಿದ್ದು ಮಂಡಿಯೂರಿ ಕವಿತೆಯನ್ನು ಹೇಳಿ ಪ್ರಿಯಾಳಿಗೆ ಪ್ರಪೋಸ್ ಮಾಡಿದ್ದರು. ಈ ವೀಡಿಯೋ ಸಕತ್ ವೈರಲ್ ಆಗಿತ್ತು.  ಎಲ್ಲ ಹುಡುಗಿಯರು ನ್ನಗೂ ಈ ರೀತಿಯ ಲೈಪ್‌ ಪಾರ್ಟ್ನರ್‌ ಸಿಗಲಿ ಅಂದುಕೊಳ್ಳೊ ತರ ಈ ಜೋಡಿ ಸದ್ದು ಮಾಡುತ್ತಿದೆ. 

ಸಪ್ತಪದಿ ತುಳಿಯಲು ರೆಡಿಯಾದ ಮಾಸ್‌ ಜೋಡಿ ..
ಶೀಘ್ರದಲ್ಲೇ ಮದುವೆಯಾಗಲಿರುವ ಜೋಡಿ ಪ್ರಿಯಾ ಆಚಾರ್ ಮತ್ತು ಸಿದ್ದು ಮೂಲಿಮನಿ ಸದ್ದಿಲ್ಲದೇ ಒಂದಾಗಿದ್ದರು. ನವೆಂಬರ್ ತಿಂಗಳಿನಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಎಂಗೇಜ್ ಮೆಂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ದಾವಣಗೆರೆಯಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈಗ ನಿತ್ಯ ಒಂದಲ್ಲ ಒಂದು ರೀಲ್ಸ್ ಗಳನ್ನು ಒಟ್ಟಿಗೆ ಮಾಡುತ್ತಿರುತ್ತಾರೆ. ಸದ್ಯ ಮದುವೆಯಾಗುವ ಆಸೆಯಲ್ಲಿರುವ ಈ ಜೋಡಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಖಾಸಗಿ ರೆಸಾರ್ಟ್‌ ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತು ಪ್ರೀಯಾ ಮೇಹೆಂದಿ ಶಾಸ್ತ್ರದ ಪೋಟೋಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಸೇರ್‌ ಮಾಡಿದ್ದು ಇವರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೇಯೇ  ಈ ಕಿರುತೆರೆ ಕಲಾವಿದರ ಮದುವೆ ನೋಡಲು ಅಭಿಮಾನಿಗಳ ಬಳಗ ಕಾಯುತ್ತಿದೆ. 

ಇದನ್ನೂ ಓದಿ-ನಲ್ಮೆಯ ಫ್ಯಾನ್ಸ್ ಗೆ ಡಿಬಾಸ್ ಗೌರವಾರ್ಪಣೆ ಸಲ್ಲಿಸಿದ್ದು ಹೇಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News