Sandalwood queen Ramya : ರಾಜಕೀಯ ಎಂಟ್ರಿ ಬಳಿಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರೋ ರಮ್ಯಾ ಮೇಡಂ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ. ಸ್ಯಾಂಡಲ್ವುಡ್ನ ಯಾವುದೇ ಸ್ಟಾರ್ ಗಳು ಮತ್ತು ಹೊಸಬರಿಗೆ ಆಗಾಗ ಸಪೋರ್ಟ್ ಮಾಡೋ ಮೂಲಕ ಎಲ್ಲಾರ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. ಯಾವುದೇ ಟ್ರೇಲರ್ ಗಳು,ಹಾಡುಗಳು ರಿಲೀಸ್ ಆದಾಗಲೂ ಮೋಹಕ ತಾರೆಯ ಬೆಂಬಲ ಮಾತ್ರ ಫಿಕ್ಸ್.


COMMERCIAL BREAK
SCROLL TO CONTINUE READING

ಆದ್ರೆ ರಮ್ಯಾ ಮೇಡಂ ಇತ್ತೀಚಿಗೆ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಕೊಟ್ಟಿದ್ರು ಅದೇನಂದರೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಸ್ಥಾಪಿಸೋ ಬಗ್ಗೆ ಮಾಹಿತಿ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ರು. ಇದೀಗ  ಮೋಹಕತಾರೆ ರಮ್ಯಾ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ವಾಪಾಸ್ ಆಗಿದ್ದಾರೆ. ಇತ್ತೀಚಿಗಷ್ಟೆ ಅಂದರೆ ಗಣೇಶ ಹಬ್ಬಕ್ಕೆ ರಮ್ಯಾ ತನ್ನದೆ ನಿರ್ಮಾಣ ಸಂಸ್ಥೆ ಘೋಷಣೆ ಮಾಡಿ, ಸದ್ಯದಲ್ಲೇ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದರು. ರಮ್ಯಾ ಕೇವಲ ನಿರ್ಮಾಪಕಿಯಾಗಿ ಮಾತ್ರ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿ ಇರ್ತಾರಾ ಎಂದು ಅಭಿಮಾನಿಗಳು ಬೇಸರ ಪಟ್ಟಿದ್ದರು. ಆದರೀಗ ವಿಜಯದಶಮಿ ದಿನ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ನೀಡುವ ಮೂಲಕ ಯಾವಾಗ ಬಣ್ಣ ಹಚ್ಚುತ್ತೀರಾ ಎಂದು ಕೇಳುತ್ತಿದ್ದ ಪ್ರಶ್ನೆಗೆ ರಮ್ಯಾ ಉತ್ತರ ನೀಡಿದ್ದಾರೆ. ಹೌದು, ನಟಿ ರಮ್ಯಾ ನಿರ್ಮಾಣ ಮಾಡಿ, ನಟಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಬಹಿರಂಗವಾಗಿದೆ.


ಆ ಸಿನಿಮಾದ ಒಂದು ಶೋಗಾಗಿ ಅವರಿವರ ಕೈಕಾಲು ಹಿಡಿದಿದ್ದ ರಿಷಬ್: ಇಂದು ಎಲ್ಲ ಶೋಗಳು ಹೌಸ್‌ಫುಲ್‌.!


'ಸ್ವಾತಿ ಮುತ್ತಿನ ಮಳೆಹನಿಯೇ' ಎಂದು ಸುಂದರವಾದ ಟೈಟಲ್ ಇಟ್ಟಿದ್ದಾರೆ.  ಬಣ್ಣದ ಗೆಜ್ಜೆ ಸಿನಿಮಾದ ಸೂಪರ್ ಹಿಟ್ ಹಾಡಿನ ಸಾಲು ಇದಾಗಿದೆ. ಕನ್ನಡ ಎವರ್ ಗ್ರೀನ್ ಹಾಡು ಇದಾಗಿದೆ. ಈ ಸೂಪರ್ ಹಿಟ್ ಹಾಡಿನ ಸಾಲಿನ ಮೂಲಕ ರಮ್ಯಾ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿರುವುದು ವಿಶೇಷ.


ರಾಜ್ ಬಿ ಶೆಟ್ಟಿ ನಟನೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ರಮ್ಯಾ ಅವರ ಆಪಲ್ ಬಾಕ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಕಾಂಬಿನೇಷನ್ ನಲ್ಲಿ ಸಿನಿಮಾ ಬರ್ತಿದೆ ಎನ್ನುವ ಸುದ್ದಿ ಈಗಾಗಲೇ ವೈರಲ್ ಆಗಿತ್ತು. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಇದೀಗ ಆಕರ್ಷಕವಾದ ಟೈಟಲ್ ರಿಲೀಸ್ ಮಾಡುವ ಮೂಲಕ ಕುತೂಹಲ ಮತ್ತಷ್ಟು ಹೆಚ್ಚಿಸಿದ್ದಾರೆ. ಸದ್ಯ ಟೈಟಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ರಮ್ಯಾ ಸದ್ಯದಲ್ಲೇ ದೊಡ್ಡ ಪರದೆ ಮೇಲೆ ಮಿಂಚಲಿದ್ದಾರೆ.


ದೀಪಿಕಾ - ರಣವೀರ್‌ ಸಂಬಂಧದಲ್ಲಿ ಬಿರುಕು.! ರಣವೀರ್‌ ಸಿಂಗ್‌ ಹೀಗೆ ಹೇಳಿದ್ದೇಕೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.