ಬೆಂಗಳೂರು: ಸಿನಿಮಾ ಮತ್ತು ರಾಜಕೀಯದಿಂದ ದೂರವಿರುವ ಮೋಹಕ ತಾರೆ ರಮ್ಯಾ ಸೋಷಿಯಲ್ ಮೀಡಿಯಾ(Social Media) ದಲ್ಲಿ ಮಾತ್ರ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ಪೋಸ್ಟ್ ಗಳನ್ನು ಹಾಕುತ್ತಾ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ.


COMMERCIAL BREAK
SCROLL TO CONTINUE READING

ಸ್ಯಾಂಡಲ್ ವುಡ್ ಕ್ವೀನ್ ಬಿರುದು ಹೊಂದಿರುವ ರಮ್ಯಾ(Ramya) ಮತ್ತೆ ಯಾವಾಗ ಚಿತ್ರರಂಗಕ್ಕೆ ಬರುತ್ತಾರೆ ಎಂಬುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ರಾಜಕೀಯ ಪ್ರವೇಶದ ಬಳಿಕವೂ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ರಮ್ಯಾ ಬಳಿಕ ಚಿತ್ರರಂಗದಿಂದ ದೂರವಾದರು. ಇದೀಗ ರಾಜಕೀಯದಿಂದಲೂ ದೂರವಿರುವ ರಮ್ಯಾ ಏನು ಮಾಡುತ್ತಿದ್ದಾರೆ..? ಎಲ್ಲಿದ್ದಾರೆ..? ಅವರು ಮತ್ತೆ ಸಿನಿಮಾ ರಂಗಕ್ಕೆ ಬರುತ್ತಾರೋ..? ಇಲ್ಲವೋ..? ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.


ಇದನ್ನೂ ಓದಿ: Shagufta Ali : ಜೀವನ ನಡೆಸಲು ಕಾರು, ಚಿನ್ನಾಭರಣ ಮಾರಿದ ಪ್ರಖ್ಯಾತ ನಟಿ


ಅನೇಕ ನಿರ್ಮಾಪಕರು ರಮ್ಯಾರನ್ನು ಚಿತ್ರರಂಗಕ್ಕೆ ಮತ್ತೆ ಕರೆತರುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. 2016ರಲ್ಲಿ ತೆರೆಕಂಡ ಕೋಡಿ ರಾಮಕೃಷ್ಣ ನಿರ್ದೇಶನದ ‘ನಾಗರಹಾವು(Nagarahavu)’ ಫ್ಯಾಂಟಸಿ ಸಿನಿಮಾದಲ್ಲಿ ಕೊನೆಯದಾಗಿ ರಮ್ಯಾ ಕಾಣಿಸಿಕೊಂಡಿದ್ದರು. ಬಳಿಕ ಅವರು ಯಾವುದೇ ಸಿನಿಮಾ ಆಫರ್ ಒಪ್ಪಿಕೊಳ್ಳಲಿಲ್ಲ. ರಾಜಕೀಯದಲ್ಲಿ ಸಕ್ರಿಯರಾದ ಬಳಿಕ ರಮ್ಯಾ ಮತ್ತೆ ಸಿನಿಮಾ ರಂಗಕ್ಕೆ ಬರುವುದು ಡೌಟ್ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ರಾಜಕೀಯ ರಂಗದಿಂದಲೂ ದೂರವಾದ ಬಳಿಕ ರಮ್ಯಾ(Ramya) ಮತ್ತೆ ಬಣ್ಣ ಹಚ್ಚುತ್ತಾರೆಂದು ಗಾಸಿಫ್ ಗಳು ಕೇಳಿಬಂದಿದ್ದವು. ಆದರೆ ಇದೀಗ ಖುದ್ದು ರಮ್ಯಾ ಅವರೇ ತಾವು ಸಿನಿಮಾ ರಂಗಕ್ಕೆ ಬರುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.


ಇದನ್ನೂ  ಓದಿ: Arindam Pramanik: ಕೆಲಸ ಸಿಗದೆ ಮೀನು ಮಾರಾಟ ಮಾಡುತ್ತಿರುವ ನಟ


ಇನ್‌ಸ್ಟಾಗ್ರಾಂ ಲೈವ್‌ನಲ್ಲಿ ರಮ್ಯಾ ಪ್ರತ್ಯಕ್ಷ


ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಸೋನು ವೇಣುಗೋಪಾಲ್‌ ಜೊತೆ ಇನ್‌ಸ್ಟಾಗ್ರಾಂ ಲೈವ್‌(Instagram)ನಲ್ಲಿ ಕಾಣಿಸಿಕೊಂಡಿರುವ ರಮ್ಯಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಮಾಡುತ್ತಿದ್ದ ವೇಳೆ ನಾನು ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೆ. ಆಗ ಡಯಟ್, ವ್ಯಾಯಾಮ ಮಾಡುತ್ತಿದ್ದೆ. ಈಗ ಮನಸ್ಸಿಗೆ ಬಂದಿದ್ದನ್ನೆಲ್ಲ ತಿನ್ನುತ್ತೇನೆ. ಸದ್ಯ ನಾನು ನಾನ್ ವೇಜ್ ನಿಂದ ದೂರವಿದ್ದೇನೆ. ಐಸ್ ಕ್ರೀಂ, ಕೇಕ್, ಜೋಳದ ರೊಟ್ಟಿ-ಎಣ್ಣೆಗಾಯಿ,  ಮಶ್ರೂಮ್ ನನ್ನಿಷ್ಟದ ತಿಂಡಿ ಅಂತಾ ಹೇಳಿದ್ದಾರೆ.


ಕನ್ನಡ ಚಿತ್ರರಂಗ(Kannada Film Industry)ದಲ್ಲಿರುವ ಎಲ್ಲ ನಟಿಯರೂ ಚೆನ್ನಾಗಿದ್ದಾರೆ. ನಾನು ಜಾಸ್ತಿ ಸಿನಿಮಾಗಳನ್ನು ನೋಡುವುದಿಲ್ಲ. ನನ್ನಿಷ್ಟದ ಸಿನಿಮಾಗಳನ್ನು ಮಾತ್ರ ನೋಡುತ್ತೇನೆ ಎಂದಿರುವ ರಮ್ಯಾ, ತಾವು ಟ್ರಾಫಿಕ್(ರೆಡ್) ಸಿಗ್ನಲ್ ಜಂಪ್ ಮಾಡಿರುವುದಾಗಿ ಹೇಳಿದ್ದಾರೆ. ನಾನು ಇನ್ನೂ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಅಮೆರಿಕದ ಮೊಡೆರ್ನಾ ಲಸಿಕೆಗಾಗಿ ಕಾಯುತ್ತಿದ್ದೇನೆ. ಅದು ಬಂದತಕ್ಷಣವೇ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು 'ಜಾತ್ಯತೀತ ನಾಯಿ' ಎಂದ ಕಂಗನಾ ರನೌತ್


ಬೆಂಗಳೂರಿನ ಬಸವನಗುಡಿ, ಗಾಂಧಿನಗರ ನನ್ನಿಷ್ಟದ ಜಾಗಗಳು. ನನಗೆ ಸೀರೆ ಎಂದರೆ ತುಂಬಾ ಇಷ್ಟ. ಸದ್ಯಕ್ಕೆ ಸಿನಿಮಾ(Cinema) ಮತ್ತು ಮದುವೆ ಬಗ್ಗೆ ಯೋಚಿಸಿಲ್ಲವೆಂದು ಹೇಳುವ ಮೂಲಕ ಸಿನಿಮಾ ರಂಗಕ್ಕೆ ತಾವು ಮತ್ತೆ ಕಮ್ ಬ್ಯಾಕ್ ಮಾಡುವುದು ಡೌಟ್ ಎಂದು ಹೇಳಿದ್ದಾರೆ. ಅಲ್ಲದೆ ತಾವು ಅಷ್ಟಾಗಿ ಯಾರ ಮದುವೆ ಸಮಾರಂಭಗಳಿಗೂ ಹೋಗುವುದಿಲ್ಲ. ಹೀಗಾಗಿ ನಿನ್ನ ಮದುವೆಗೆ ಯಾರೂ ಬರುವುದಿಲ್ಲವೆಂದು ಅಮ್ಮ ಹೇಳುತ್ತಿರುತ್ತಾರೆಂದು ನಗೆ ಚಟಾಕಿ ಹಾರಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.