ಯಶ್
ಬಸ್ ಚಾಲಕನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್, ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇಂದು ಕನ್ನಡ ಚಿತ್ರರಂಗ ಅತ್ಯಂತ ಜನಪ್ರಿಯ ನಟರಲ್ಲಿ ಯಶ್ ಕೂಡ ಒಬ್ಬರು. ಕೆಜಿಎಫ್ ಮೂಲಕ ಪ್ರಪಂಚದಾದ್ಯಂತ ರಾಕಿಭಾಯ್ ಆಗಿ ಗುರುತಿಸಿಕೊಂಡಿರುವ ಯಶ್, ಯಾವುದೇ ನಿರ್ದಿಷ್ಟ ಭಾಷೆಯ ಪ್ರೇಕ್ಷಕರಿಗೆ ಸೀಮಿತವಾಗಿರದೆ, ಎಲ್ಲಾ ಭಾಷೆಯ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಇಂದು ಭಾರತಾದ್ಯಂತ ರಾಕಿಭಾಯ್ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅಷ್ಟರ ಮಟ್ಟಿಗೆ ಅವರ ನಟನೆಯಿಂದ ಜಾದೂ ಮಾಡಿದ್ದಾರೆ. ಬಸ್ ಚಾಲಕನ ಮಗನಾಗಿರುವ ರಾಕಿಂಗ್ ಸ್ಟಾರ್ ಯಶ್, ಇಂದು ಸೂಪರ್ ಸ್ಟಾರ್ ಗಳಿಗೆ ಪೈಪೋಟಿ ಕೊಡುವಷ್ಟು ಬೆಳೆದಿದ್ದಾರೆ ಎಂದರೆ ಅವರ ಪರಿಶ್ರಮವೂ ಅಷ್ಟೇ ಇದೆ. ತಮ್ಮ ಕಠಿಣ ಪರಿಶ್ರಮ, ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ. 


COMMERCIAL BREAK
SCROLL TO CONTINUE READING

ರಕ್ಷಿತ್ ಶೆಟ್ಟಿ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಬಳಿಕ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದರು. ಕಳೆದ ವರ್ಷ ತೆರೆಕಂಡ ೭೭೭ ಚಾರ್ಲಿ ಸಿನಿಮಾ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈ ಸಿನಿಮಾದ ಪ್ರಮುಖ ಅಂಶಗಳೆಂದರೆ ನಾಯಕ ರಕ್ಷಿತ್ ಶೆಟ್ಟಿ ಮತ್ತು ನಾಯಿ ಚಾರ್ಲಿ. ಈ ಸಿನಿಮಾ ಮೂಲಕ ರಕ್ಷಿತ್ ಭಾಷೆಯ ಎಲ್ಲೆಯನ್ನು ಮೀರಿ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದರು. 777 ಚಾರ್ಲಿ  ರಿಷಭ್ ಶೆಟ್ಟಿ ನಟನೆಗೆ ಎಲ್ಲರೂ ಫಿದಾ ಆಗಿದ್ದರು. ನಾಯಿ ಹಾಗೂ ಮನುಷ್ಯನ ನಡುವೆ ಅನಾದಿ ಕಾಲದಿಂದಲೂ ಸಾಗಿ ಬಂದಿರುವ ಸ್ನೇಹ, ಪ್ರೀತಿ ಪದಗಳಿಗೆ ನಿಲುಕುವಂಥಹದ್ದಲ್ಲ. ಯುಗ-ಯುಗಗಳು ಕಳೆದರೂ ಪರಸ್ಪರರ ಮೇಲಿನ ಪ್ರೀತಿ, ಅವಲಂಬನೆ ಜಾರಿಯಲ್ಲಿದೆ. ಇಂಥಹ ಅನೂಹ್ಯ ಬಾಂಧವ್ಯವನ್ನು ಸಿನಿಮಾ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕನ್ನಡದ ಸಿನಿಮಾ '777 ಚಾರ್ಲಿ'.


ಇದನ್ನೂ ಓದಿ-ಸ್ಯಾಂಡಲ್‌ವುಡ್‌ನ ಈ ನಟ-ನಟಿಯರ ಮದುವೆಗಾಗಿ ನೀವು ಕಾಯ್ತಾ ಇದ್ದೀರಾ..?


ರಿ‍ಷಭ್ ಶೆಟ್ಟಿ
ವಾಟರ್ ಬಿಸಿನೆಸ್, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲೀಕ, ಸೇಲ್ಸ್‌ಮನ್ ಕೆಲಸವನ್ನೂ ಮಾಡಿದ್ದ ರಿಷಬ್ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ ಮತ್ತು ನಟ. ರಿಷಭ್ ತಮ್ಮ ವಿಭಿನ್ನ ಚಿತ್ರಗಳು ಮತ್ತು ಭಿನ್ನ ಚಿತ್ರ ನಿರ್ಮಾಣ ಶೈಲಿಯಿಂದ ಪ್ರಸಿದ್ಧರಾಗಿದ್ದಾರೆ. ಅವರು ಸ್ವತಃ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಬರೀ ಕನ್ನಡಿಗಗರಿಗಷ್ಟೇ ಅಲ್ಲ, ಪರ ಭಾಷಿಗರಿಗರು ಇಷ್ಟವಾಗಿತ್ತು. ಹಲವು ಕನ್ನಡಲ್ಲೇ ಕಾಂತಾರ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದರು. ಬಳಿಕ ಬೇರೆ ಭಾಷೆಗಳಿಗೆ ರಿಲೀಸ್ ಮಾಡುವಂತೆ ಬೇಡಿಕೆ ಶುರುವಾಗಿತ್ತು. ನೋಡ-ನೋಡುತ್ತಲೇ 4 ಭಾಷೆಗೆ ಡಬ್ ಆಗಿ ಸಿನಿಮಾ ಹಿಟ್ ಆಯಿತು. ಕಾಂತಾರ ಚಿತ್ರದಿಂದ ರಿಷಬ್ ಶೆಟ್ಟಿ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿಬಿಟ್ಟರು. ಅವರು ಸಿನಿಮಾ ಮೂಲಕ ಭಾಷೆಯ ಎಲ್ಲೆಯನ್ನು ಮೀರಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 


ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಲವು ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿದ್ದಾರೆ. ಸುದೀಪ್ ಕನ್ನಡ ಚಿತ್ರರಂಗಕ್ಕಷ್ಟೇ ಸೀಮಿತವಾಗಿರದೆ ಬೇರೆ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗಕ್ಕೆ ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಬಿಡುಗಡೆಯಾಗಿತ್ತು. ಪ್ರಪಂಚದಾದ್ಯಂತ 1600ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಈ ಸಿನಿಮಾ  3D, 2Dಯಲ್ಲಿ  ತೆರೆಕಂಡಿತ್ತು. ವಿಕ್ರಾಂತ್ ರೋಣ ಮೊದಲ ದಿನವೇ 35 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಸುದೀಪ್ ಕೂಡ ಭಾಷೆಯ ಎಲ್ಲೆಯನ್ನು ಮೀರಿ ಕನ್ನಡದ ಕಂಪನ್ನು ಪಸರಿಸಿದ್ದಾರೆ.   


ಇದನ್ನೂ ಓದಿ-ಅಪ್ಪ ಅಮ್ಮನ ಸಮಾಧಿ ಬಳಿ ಪುನೀತ್ ಹೋದಾಗ ಪಕ್ಷಿಗಳ ದಂಡೇ ಬರುತ್ತಿತ್ತು! ಏನಿದರ ರಹಸ್ಯ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.