Juliet 2: ಲಕ್ಷಾಂತರ ಜನರ ಮನಮುಟ್ಟಿದ ‘ಜ್ಯೂಲಿಯೆಟ್ 2’ ಬಾಂಧವ್ಯದ ಹಾಡು
Pl production & Virat motion picture ಲಾಂಛನದಲ್ಲಿ ಲಿಖಿತ್.ಆರ್.ಕೋಟ್ಯಾನ್ ನಿರ್ಮಾಣ ಮಾಡಿರುವ ‘ಜ್ಯೂಲಿಯೆಟ್ 2’ ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದಾರೆ.
ಬೆಂಗಳೂರು: ಪ್ರಪಂಚದಲ್ಲಿ ಎಲ್ಲಾ ಪ್ರೀತಿಗಿಂತ ಹೆತ್ತವರ ಪ್ರೀತಿ ದೊಡ್ಡದು. ಆ ಪ್ರೀತಿಯ ಬಗ್ಗೆ ಎಷ್ಡ ಹೇಳಿದರೂ ಕಡಿಮೆ. ಅದರಲ್ಲೂ ತಾಯಿಗೆ ಮಗನ ಮೇಲೆ, ತಂದೆಗೆ ಮಗಳ ಮೇಲೆ ಮಮತೆ ಹೆಚ್ಚು ಎನ್ನುವುದು ವಾಡಿಕೆ.
ವಿಭಿನ್ನ ಕಥಾಹಂದರ ಹೊಂದಿರುವ ‘ಜ್ಯೂಲಿಯೆಟ್ 2’ ಚಿತ್ರಕ್ಕಾಗಿ ಸುಕೀರ್ತ್ ಶೆಟ್ಟಿ ತಂದೆ - ಮಗಳ ಬಾಂಧವ್ಯ ಸಾರುವ ‘ಕರುಳ ಬಳ್ಳಿಯ ನೋವಿನಲಿ ತಾಯಿಯ ಮಮತೆ ಲಾಲಿ ಹಾಡುತ್ತೆ. ಬೆವರ ಹನಿಯ ಒಡಲಿನಲಿ ತಂದೆಯ ಸಹನೆ ಲಾಲಿ ಹಾಡುತ್ತೆ’ ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ವೀಕ್ಷಿಸಿದ್ದಾರೆ. ಸಂದೀಪ್.ಆರ್.ಬಲ್ಲಾಳ್ ಸಂಗೀತ ನೀಡಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
ಇದನ್ನೂ ಓದಿ: ಪ್ರೇಮಿಗಳ ದಿನಕ್ಕೆ ಚೌಕಾಬಾರದಿಂದ ಬಂತು ರೊಮ್ಯಾಂಟಿಕ್ ಸಾಂಗ್...!
Kailash Kher : ಈ ಖ್ಯಾತ ಗಾಯಕ 20 ನೇ ವಯಸ್ಸಿನಲ್ಲಿ ಸಾಯಬೇಕೆಂದು ಗಂಗಾ ನದಿಗೆ ಹಾರಿದ್ದರು!
ಸಚಿನ್ ಬಸ್ರೂರ್ ಅವರ ಬಿಜಿಎಂ ಹಾಗೂ shanto v anto ಅವರ ಛಾಯಾಗ್ರಹಣ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ರಿಲಯನ್ಸ್ ಎಂಟರ್ಟೈನ್ಮೆಂಟ್ ಮೂಲಕ ಬಿಡುಗಡೆಯಾಗಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.