ಪ್ರೇಮಿಗಳ ದಿನಕ್ಕೆ ಚೌಕಾಬಾರದಿಂದ ಬಂತು ರೊಮ್ಯಾಂಟಿಕ್ ಸಾಂಗ್...!

ಫೆಬ್ರವರಿ 14, ಪ್ರೇಮಿಗಳ ದಿನಾಚರಣೆ ಯಂದು ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು. ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ರೊಮ್ಯಾಂಟಿಕ್ ಸಾಂಗ್ ಇಂದು ಬಿಡುಗಡೆಯಾಗಿದೆ ನಮ್ಮ ಮೇಲೆ ಪ್ರೀತಿಯಿಟ್ಟು ಹಾಡು ಬಿಡುಗಡೆ ಮಾಡಿಕೊಟ್ಟ ಜನಪ್ರಿಯ ಶಾಸಕರಾದ ಎಂ.ಕೃಷ್ಣಪ್ಪ ಅವರಿಗೆ ಧನ್ಯವಾದ ಎಂದರು

Written by - Zee Kannada News Desk | Last Updated : Feb 11, 2023, 11:27 PM IST
  • ಚಿತ್ರದಲ್ಲಿ ಮೂರು ಹಾಡುಗಳಿದೆ.
  • ಇಂದು ಬಿಡುಗಡೆಯಾಗಿರುವ ಈ ರೊಮ್ಯಾಂಟಿಕ್ ಹಾಡನ್ನು ನಕುಲ್ ಅಭಯಂಕರ್ ಹಾಗೂ ರಮ್ಯ ಭಟ್ ಹಾಡಿದ್ದಾರೆ.
  • ಬಿ.ಆರ್ ಲಕ್ಷ್ಮಣರಾವ್ ಈ ಹಾಡನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.
ಪ್ರೇಮಿಗಳ ದಿನಕ್ಕೆ ಚೌಕಾಬಾರದಿಂದ ಬಂತು ರೊಮ್ಯಾಂಟಿಕ್ ಸಾಂಗ್...! title=
file photo

ಬೆಂಗಳೂರು: ನವಿ ನಿರ್ಮಿತಿ ಲಾಂಛನದಲ್ಲಿ ನಮಿತಾರಾವ್ ನಿರ್ಮಿಸಿರುವ, ವಿಕ್ರಮ್ ಸೂರಿ ನಿರ್ದೇಶನದ "ಚೌಕಾಬಾರ" ಚಿತ್ರದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಶಾಸಕ ಎಂ ಕೃಷ್ಣಪ್ಪ ಈ ಹಾಡನ್ನು ಬಿಡುಗಡೆ ಮಾಡಿ, ಹಾಡು ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು. 

ಫೆಬ್ರವರಿ 14, ಪ್ರೇಮಿಗಳ ದಿನಾಚರಣೆ ಯಂದು ಈ ಹಾಡನ್ನು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಬಹುದು.ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ರೊಮ್ಯಾಂಟಿಕ್ ಸಾಂಗ್ ಇಂದು ಬಿಡುಗಡೆಯಾಗಿದೆ. ನಮ್ಮ ಮೇಲೆ ಪ್ರೀತಿಯಿಟ್ಟು ಹಾಡು ಬಿಡುಗಡೆ ಮಾಡಿಕೊಟ್ಟ ಜನಪ್ರಿಯ ಶಾಸಕರಾದ ಎಂ.ಕೃಷ್ಣಪ್ಪ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ವಿಕ್ರಮ್ ಸೂರಿ.

ನಮ್ಮ ಚಿತ್ರದ ರೊಮ್ಯಾಂಟಿಕ್ ಹಾಡು ಇಂದು ಬಿಡುಗಡೆಯಾಗಿದೆ. ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ. ಯು.ಎಸ್.ಎ ನಲ್ಲೂ ಮಾರ್ಚ್ ನಲ್ಲೇ ಚಿತ್ರ ತೆರೆ ಕಾಣಲಿದೆ. ಏಪ್ರಿಲ್ ನಲ್ಲಿ ದುಬೈ, ಆಸ್ಟ್ರೇಲಿಯಾ ಮುಂತಾದ ಕಡೆ ಬಿಡುಗಡೆ ಮಾಡುವ ಸಿದ್ದತೆ ನಡೆಯುತ್ತಿದೆ. ಅದಕ್ಕೂ ಮುನ್ನ ಈ ತಿಂಗಳ 28 ರಂದು ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ನಮ್ಮ ತಂಡಕ್ಕೆ ಧನ್ಯವಾದ ಎಂದರು ನಾಯಕಿ ಹಾಗೂ ನಿರ್ಮಾಪಕಿ ನಮಿತಾ ರಾವ್.

ಇದನ್ನೂ ಓದಿ: ಭಾರತವನ್ನು ಸರ್ವಶ್ರೇಷ್ಠವಾಗಿಸುವ ಧ್ಯೇಯದೊಂದಿಗೆ ಆಡಳಿತ – ಸಿಎಂ ಬೊಮ್ಮಾಯಿ

ಚಿತ್ರದಲ್ಲಿ ಮೂರು ಹಾಡುಗಳಿದೆ. ಇಂದು ಬಿಡುಗಡೆಯಾಗಿರುವ ಈ ರೊಮ್ಯಾಂಟಿಕ್ ಹಾಡನ್ನು ನಕುಲ್ ಅಭಯಂಕರ್ ಹಾಗೂ ರಮ್ಯ ಭಟ್ ಹಾಡಿದ್ದಾರೆ. ಬಿ.ಆರ್ ಲಕ್ಷ್ಮಣರಾವ್ ಈ ಹಾಡನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಅಶ್ವಿನ್ ಪಿ ಕುಮಾರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.

ಚಿತ್ರದ ನಾಯಕ ವಿಹಾನ್ ಪ್ರಭಂಜನ್, ಕಾವ್ಯ ರಮೇಶ್, ಸಂಜಯ್ ಸೂರಿ, ಸುಮಾ ರಾವ್, ಪ್ರಥಮ ಪ್ರಸಾದ್, ಮಧು ಹೆಗಡೆ, ದಮಯಂತಿ ನಾಗರಾಜ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಕಾದಂಬರಿ ಬರೆದಿರುವ ಮಣಿ ಆರ್ ರಾವ್ , ಸಂಭಾಷಣೆ ಬರೆದಿರುವ ರೂಪ ಪ್ರಭಾಕರ್, ಛಾಯಾಗ್ರಾಹಕ ರವಿರಾಜ್ ಹಾಗೂ ಸಂಕಲನಕಾರ ಶಶಿಧರ್ ಸೇರಿದಂತೆ ಹಲವು ತಂತ್ರಜ್ಞರು "ಚೌಕಾಬಾರ" ದ ಕುರಿತು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News