Ranbir Kapoor : ಬಾಲಿವುಡ್‌ ನಟ ರಣಬೀರ್ ಕಪೂರ್, ನ್ಯಾಷುನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅಭಿನಯದ ಅನಿಮಲ್ ಚಿತ್ರವು ಇಂದು ತರೆ ಕಂಡಿದೆ. ಚಿತ್ರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನವಾದ ವಿಮರ್ಶೆಗಳು ಕೇಳಿ ಬರುತ್ತಿವೆ. ಬನ್ನಿ ಅನಿಮಲ್‌ ಸಿನಿಮಾ ಹೇಗಿದೆ ಅಂತ ತಿಳಿಯೋಣ.. 


COMMERCIAL BREAK
SCROLL TO CONTINUE READING

ಅರ್ಜುನ್‌ ರೆಡ್ಡಿಯ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ʼಅನಿಮಲ್ʼ ಚಿತ್ರ ಇಂದು ತೆರೆ ಕಂಡಿದೆ. ರಣಬೀರ್ ಮತ್ತು ರಶ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು ಹೆಚ್ಚು ಪ್ರಭಾವಿತರಾಗಿದ್ದಾರೆ. ಸಿನಿಮಾ ನೋಡಿದವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದು, ಚಿತ್ರ ಮೆಗಾ ಬ್ಲಾಕ್‌ಬಸ್ಟರ್ ಎಂದು ಹೇಳುತ್ತಿದ್ದಾರೆ.


ಇದನ್ನೂ ಓದಿ : ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ತಪಾಸಣೆ ನಡೆಸಿದ ಭದ್ರತಾ ಪಡೆ..! ವಿಡಿಯೋ ವೈರಲ್


ಸಿನಿಮಾದ ಸಿಂಪಲ್‌ ಹಿಸ್ಟರ್‌ : ಬಲ್ಬೀರ್ ಸಿಂಗ್ (ಅನಿಲ್ ಕಪೂರ್) ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸ್ವಸ್ತಿಕ್ ಸ್ಟೀಲ್ ಎಂಬ ಕಾರ್ಖಾನೆಯ ಮಾಲೀಕರಾಗಿರುತ್ತಾರೆ. ರಣ್ ವಿಜಯ್ ಸಿಂಗ್ (ರಣಬೀರ್ ಕಪೂರ್) ಬಲ್ಬೀರ್‌ ಸಿಂಗ್‌ ಮಗ. ವಿಜಯ್ ರೌಡಿ ತರಹದ ವರ್ತನೆಗೆ ತಂದೆ ಬೆಸತ್ತು ಹೋಗಿರುತ್ತಾರೆ. ಅದಕ್ಕಾಗಿ ಅವನನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸುತ್ತಾನೆ. 


ಅವನು ಹಿಂದಿರುಗಿದ ನಂತರ, ಅವನ ಸೋದರಮಾವನೊಂದಿಗಿನ ಜಗಳವು ತಂದೆ ಮತ್ತು ಮಗನ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆಗ ರಣ್ ವಿಜಯ್ ಸಿಂಗ್ ಅಮೆರಿಕಕ್ಕೆ ಹೋಗುತ್ತಾರೆ. ತನ್ನ ತಂದೆಯ ಮೇಲೆ ಹತ್ಯೆ ಯತ್ನ ನಡೆದಿದೆ ಎಂಬ ವಿಚಾರ ತಿಳಿದು 8 ವರ್ಷಗಳ ನಂತರ ಭಾರತಕ್ಕೆ ಬರುತ್ತಾರೆ. ಅಲ್ಲದೆ, ತನ್ನ ತಂದೆಯ ಮೇಲೆ ದಾಳಿ ಮಾಡುವವರ ತಲೆ ಕಡಿಯುವುದಾಗಿ ಶಪಥ ಮಾಡುತ್ತಾನೆ. ಅಲ್ಲಿಂದ ಸಿನಿಮಾ ಹೊಸ ರೂಪ ಪಡೆದುಕೊಳ್ಳುತ್ತದೆ.. ಮುಂದೆ ಏನಾಯ್ತು, ಯಾರು ವಿಲನ್‌, ರಕ್ತ ಸಿಕ್ಕ ಕಥೆಗೆ ಕಾರಣ ಏನು ಅನ್ನೋದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು. 


ಇದನ್ನೂ ಓದಿ :’ಡಂಕಿ’ ಕ್ರೇಜ್: ಕಿಂಗ್ ಖಾನ್ ಸಿನಿಮಾ ವೀಕ್ಷಿಸಲು ಭಾರತಕ್ಕೆ 100ಕ್ಕೂ ಅಧಿಕ ಬರ್ತಿದ್ದಾರೆ ಫ್ಯಾನ್ಸ್..


ಅಲ್ಲದೆ, ಗೀತಾಂಜಲಿ (ರಶ್ಮಿಕಾ) ಮತ್ತು ರಣ್ ವಿಜಯ್ ಸಿಂಗ್ ನಡುವೆ ಪ್ರೀತಿ ಹೇಗೆ ಹುಟ್ಟಿತು, ಬಲ್ಬೀರ್ ಸಿಂಗ್ ಮೇಲೆ ದಾಳಿ ಮಾಡಿದವರು ಯಾರು..? ಅಬ್ರಾರ್ (ಬಾಬಿ ಡಿಯೋಲ್) ಯಾರು? ಅವರಿಗೂ ರಣ್ ವಿಜಯ್ ಸಿಂಗ್ ಮತ್ತು ಅಬ್ರಾರ್‌ ನಡುವಿನ ಸಂಬಂಧವೇನು..? ಇವೆಲ್ಲವನ್ನೂ ನೀವು ಸಿನಿಮಾ ನೋಡಿಯೇ ತಿಳಿಬೇಕು. 


ಸೂಪರ್‌ ಡೈಲಾಗ್‌,  ರಣಬೀರ್ ಮತ್ತು ಬಾಬಿ ನಡುವಿನ ಸಾಹಸ ದೃಶ್ಯ ವಿನ್ಯಾಸ ಕೂಡ ಚೆನ್ನಾಗಿದೆ. ಹರ್ಷವರ್ಧನ್ ರಾಮೇಶ್ವರ್ ಹಿನ್ನೆಲೆ ಸಂಗೀತ ಸಿನಿಮಾಗೆ ಜೀವ ತುಂಬುತ್ತದೆ. ಕ್ಯಾಮೆರಾ ವರ್ಕ್ ಅದ್ಭುತ. ಸಂದೀಪ್ ರೆಡ್ಡಿ ವಂಗ ಡೈರೆಕ್ಷನ್‌ ಸ್ಕೀಲ್ಸ್‌ಗೆ ಪ್ರೇಕ್ಷಕ ಮಾಹಾಶಯ ಫಿದಾ ಆಗಿದ್ದಾನೆ.


ಇದನ್ನೂ ಓದಿ : ದಿ ಗೋಟ್ ಲೈಫ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್: ಏಪ್ರಿಲ್ 10ಕ್ಕೆ ಪ್ರೇಕ್ಷಕರ ಮುಂದೆ ಪೃಥ್ವಿರಾಜ್ ಸುಕುಮಾರನ್ ಚಿತ್ರ 


ಇನ್ನು ರಣಬೀರ್ ಕಪೂರ್ ನಟನೆಯ ಬಗ್ಗೆ ಹೇಳ್ಬೇಕು ಅಂದ್ರೆ, ಅವರು ತಮ್ಮ ಅಭಿನಯದಿಂದಲೇ ಹೆಸರುವಾಸಿಯಾಗಿದ್ದಾರೆ. ರಣ್ ವಿಜಯ್ ಸಿಂಗ್ ಪಾತ್ರಕ್ಕೆ ರಣಬೀರ್‌ ಜೀವ ತುಂಬಿದ್ದಾರೆ. ವಿಜಯ್‌ ಪಾತ್ರದಲ್ಲಿ ಪ್ರೇಕ್ಷಕ ಜೀವಿಸುವಂತೆ ನಟಿಸಿದ್ದಾರೆ. ಗೀತಾಂಜಲಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ನ್ಯಾಯ ಒದಗಿಸಿದ್ದಾರೆ. ರಶ್ಮಿಕಾ ರಣಬೀರ್ ನಡುವಿನ ಕೆಮಿಸ್ಟ್ರೀ ವರ್ಕೌಟ್‌ ಆಗಿದೆ. ರಣಬೀರ್ ತಂದೆಯಾಗಿ ಅನಿಲ್ ಕಪೂರ್ ನಟನೆಯ ಬಗ್ಗೆ ಮಾತನಾಡುವಂತಿಲ್ಲ.. ಅದ್ಭುತವಾಗಿ ನಟಿಸಿದ್ದಾರೆ. 


ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಈ ಚಿತ್ರವು ಇದುವರೆಗೆ 12,539 ಪ್ರದರ್ಶನಗಳಿಗೆ 7,45,992 ಟಿಕೆಟ್‌ಗಳನ್ನು ಮಾರಾಟ ಕಂಡಿದೆ. Sacnilk.com ನಲ್ಲಿನ ವರದಿಯ ಪ್ರಕಾರ, ಅನಿಮಲ್ ಈಗಾಗಲೇ ಮುಂಗಡ ಬುಕಿಂಗ್‌ನಲ್ಲಿ ಸುಮಾರು 20 ಕೋಟಿ ಗಳಿಸಿದೆ. ಹಿಂದಿ ಶೋಗಳಿಗೆ 5,75,197 ಟಿಕೆಟ್‌ಗಳು ಮಾರಾಟವಾಗಿದ್ದರೆ, ತೆಲುಗು ಶೋಗಳಿಗೆ 1,63,361 ಟಿಕೆಟ್‌ಗಳನ್ನು ಖರೀದಿಸಲಾಗಿದೆ.


ಇದನ್ನೂ ಓದಿ : 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ರೆಡ್‍ ಕಾರ್ಪೆಟ್‍ ಗಾಲಾ ಪ್ರೀಮಿಯರ್‌ ನಲ್ಲಿ ‘ಗ್ರೇ ಗೇಮ್ಸ್’ ಪ್ರದರ್ಶನ 


ಅನಿಮಲ್‌ ಮುಂಗಡ ಬುಕ್ಕಿಂಗ್‌ಗಳಲ್ಲಿ ಪ್ರಮುಖವಾಗಿ ದೆಹಲಿ (ರೂ. 4.07 ಕೋಟಿ), ತೆಲಂಗಾಣ (ರೂ. 4.14 ಕೋಟಿ), ಮಹಾರಾಷ್ಟ್ರ (ರೂ. 3.29 ಕೋಟಿ), ಕರ್ನಾಟಕ (ರೂ. 2.23 ಕೋಟಿ), ಗುಜರಾತ್ (ರೂ. 1.49 ಕೋಟಿ), ಆಂಧ್ರಪ್ರದೇಶ (ರೂ. 2.18 ಕೋಟಿ) ಮತ್ತು ಉತ್ತರ ಪ್ರದೇಶ (ರೂ. 1.34 ಕೋಟಿ) ಗಳಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.