’ಡಂಕಿ’ ಕ್ರೇಜ್: ಕಿಂಗ್ ಖಾನ್ ಸಿನಿಮಾ ವೀಕ್ಷಿಸಲು ಭಾರತಕ್ಕೆ 100ಕ್ಕೂ ಅಧಿಕ ಬರ್ತಿದ್ದಾರೆ ಫ್ಯಾನ್ಸ್..

Written by - YASHODHA POOJARI | Edited by - Manjunath Naragund | Last Updated : Nov 30, 2023, 11:20 PM IST
  • ‘ಡಂಕಿ’ ಸಿನಿಮಾ ಅಂಳದಿಂದ ಹೊರಬಂದಿರುವ ಡ್ರಾಪ್ 1 ಹಾಗೂ ಡ್ರಾಪ್ 2 ಹಿಟ್ ಆಗಿದೆ
  • ಇನ್ನೇನೂ ಚಿತ್ರ ತೆರೆಗೆ ಬರಲು ಕೆಲ ದಿನಗಳು ಮಾತ್ರ ಬಾಕಿ ಉಳಿದ್ದು, ಚಿತ್ರದ ಕ್ರೇಜ್ ಜೋರಾಗಿದೆ
  • ಯಾವ ಮಟ್ಟಕ್ಕೆ ಎಂದರೆ ಡಂಕಿ ಸಿನಿಮಾ ನೋಡಲು ವಿದೇಶಗಳಿಂದ ಭಾರತಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಆಗಮಿಸುತ್ತಿದ್ದಾರೆ
 ’ಡಂಕಿ’ ಕ್ರೇಜ್: ಕಿಂಗ್ ಖಾನ್ ಸಿನಿಮಾ ವೀಕ್ಷಿಸಲು ಭಾರತಕ್ಕೆ 100ಕ್ಕೂ ಅಧಿಕ ಬರ್ತಿದ್ದಾರೆ ಫ್ಯಾನ್ಸ್.. title=

ಶಾರುಖ್ ಖಾನ್ ಈ ವರ್ಷದಲ್ಲಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ವರ್ಷಾರಂಭದಲ್ಲಿ ಬಿಡುಗಡೆಯಾದ ಪಠಾಣ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಅದರ ಬಳಿಕ ಬಿಡುಗಡೆ ಆದ ಜವಾನ್ ಸಹ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ಶಾರುಖ್ ನಟನೆಯ ಮತ್ತೊಂದು ಸಿನಿಮಾ ‘ಡಂಕಿ’ ಇದೇ ವರ್ಷ ಬಿಡುಗಡೆಗೆ ಸಜ್ಜಾಗಿದ್ದು, ಹ್ಯಾಟ್ರಿಕ್ ಬಾರಿಸಲು ಕಿಂಗ್ ಖಾನ್ ಸನ್ನದ್ಧರಾಗಿದ್ದಾರೆ.

‘ಡಂಕಿ’ ಸಿನಿಮಾ ಅಂಳದಿಂದ ಹೊರಬಂದಿರುವ ಡ್ರಾಪ್ 1 ಹಾಗೂ ಡ್ರಾಪ್ 2 ಹಿಟ್ ಆಗಿದೆ. ಇನ್ನೇನೂ ಚಿತ್ರ ತೆರೆಗೆ ಬರಲು ಕೆಲ ದಿನಗಳು ಮಾತ್ರ ಬಾಕಿ ಉಳಿದ್ದು, ಚಿತ್ರದ ಕ್ರೇಜ್ ಜೋರಾಗಿದೆ. ಯಾವ ಮಟ್ಟಕ್ಕೆ ಎಂದರೆ ಡಂಕಿ ಸಿನಿಮಾ ನೋಡಲು ವಿದೇಶಗಳಿಂದ ಭಾರತಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಆಗಮಿಸುತ್ತಿದ್ದಾರೆ. ನೇಪಾಳ, ಕೆನಡಾ, ಯುಎಸ್ ಎ, ಯುಎಇ ಸೇರಿದಂತೆ ಬೇರೆ ಬೇರೆ ದೇಶಗಳಿಂದ 100ಕ್ಕೂ ಹೆಚ್ಚು ಅಭಿಮಾನಿಗಳು ಇಂಡಿಯಾಗೆ ಲ್ಯಾಂಡ್ ಆಗುತ್ತಿದ್ದಾರೆ. 

ಇದನ್ನೂ ಓದಿ: “ಏಕೆಂದರೆ ನಾನು…”- 53 ವರ್ಷ ವಯಸ್ಸಾದ್ರೂ ಮದುವೆಯಾಗದಿರಲು ಇದೇ ಕಾರಣ ಎಂದ ರಾಹುಲ್ ಗಾಂಧಿ

'ಡಂಕಿ' ರಾಜ್‌ಕುಮಾರ್ ಹಿರಾನಿ ಬತ್ತಳಿಕೆಯಿಂದ ಬರುತ್ತಿರೋ ಮತ್ತೊಂದು ವಿಶಿಷ್ಠ ಸಿನಿಮಾ. ಭಾರತದ ಪಂಜಾಬ್‌ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಕ್ಕೆ ತೆರಳುವವರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆಯನ್ನಿಟ್ಟುಕೊಂಡು ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ 'ಡಂಕಿ'ಗೆ ಕಥೆ ಹೆಣೆದಿದ್ದಾರೆ.

ಇದನ್ನೂ ಓದಿ:  ಮೆಟ್ರೋ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿ ಮೃತಪಟ್ಟ ವ್ಯಕ್ತಿ..! ಅವಸರವೇ ಇದಕ್ಕೆ ಕಾರಣ

'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್ಮೆಂಟ್ ಹಾಗೂ ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್‌ನಿಂದ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸುತ್ತಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್ 22ಕ್ಕೆ 'ಡಂಕಿ' ಅದ್ಧೂರಿಯಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News